Illegal Madrasa: ನೋಂದಣಿಯಾಗದೆ ಮಕ್ಕಳ ಶಿಕ್ಷಣ ನೀಡುವ ಮದರಸ ಚರ್ಚ್‌ಗಳಿಗೆ ಇನ್ನು ಮುಂದೆ ಬೀಳುತ್ತೆ ಭಾರೀ ದೊಡ್ಡ ಬೀಗ

Share the Article

Bengaluru: ನೋಂದಣಿಯಾಗದ ಮದರಸ, ಚರ್ಚ್‌, ಮಠ, ಹಾಗೂ ಎನ್‌ಜಿಒ ಗಳಿಗೆ ಇನ್ನು ಬೀಗ ಬೀಳಲಿದೆ. ಹೌದು,ಇನ್ನು ಇವರು ಕಾನೂನಿನ ಸಂಕಷ್ಟವನ್ನು ಎದುರಿಸಬೇಕಾಗಿದೆ.

ಇದನ್ನೂ ಓದಿ: Congress: ಕಾಂಗ್ರೆಸ್ ಫೈನಲ್ ಪಟ್ಟಿ ಬಿಡುಗಡೆಗೆ ಅಂತಿಮ ಕ್ಷಣಗಣನೆ; ಯಾರಿಗೆಲ್ಲ ಟಿಕೆಟ್‌?

ನೋಂದಣಿ ಮಾಡಿಕೊಳ್ಳಲು ಎಪ್ರಿಲ್‌ 20 ರವರೆಗೆ ಡೆಡ್‌ಲೈನ್‌ ಇದೆ. ಅಲ್ಲಿಯವರೆಗೆ ನೋಂದಣಿ ಮಾಡಿಸಿಕೊಳ್ಳಬೇಕು. ಮಾಡಿಕೊಳ್ಳದಿದ್ದರೆ ಆಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳಿಂದ ನೋಟಿಸ್‌ ನೀಡಲಾಗಿದೆ. ಅಕ್ರಮ ಮದರಸಗಳು ಇತ್ತೀಚೆಗೆ ದಾಳಿ ಸಂದರ್ಭದಲ್ಲಿ ಕಂಡು ಬಂದಿದ್ದವು, ಈ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ: Bengaluru: ಉಡುಪಿ ಉದ್ಯಮಿ ಕುಟುಂಬದ ಆತ್ಮಹತ್ಯೆ ಪ್ರಕರಣಕ್ಕೆ ಸಿಕ್ತು ರೋಚಕ ಟ್ವಿಸ್ಟ್‌

ಕೇಂದ್ರ ಮಕ್ಕಳ ಹಕ್ಕುಗಳ ಆಯೋಗ ಇತ್ತೀಚೆಗೆ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನೋಂದಣಿಯಾಗದ ಮದರಸಗಳು, ಚರ್ಚ್‌ಗಳು ಕಾರ್ಯಾಚರಣೆ ಮಾಡುವುದು ಕಂಡು ಬಂದಿದೆ. ಹಲವು ಮದರಸ, ಚರ್ಚ್‌, ಮಠ, ಎನ್‌ಜಿಒ ಗಳು ಯಾವುದೇ ಕಾಯಿದೆ ಪ್ರಕಾರ ಗುರುತಿಸಿಕೊಂಡಿಲ್ಲ. ಹಾಗೂ ವಸ್ತಿ, ಶಿಕ್ಷಣ ವನ್ನು ಮಕ್ಕಳಿಗೆ ನೀಡುವುದು ಕಂಡು ಬಂದಿದೆ. ಇವೆಲ್ಲದರಲ್ಲಿ ಮದರಸಗಳ ಹೆಸರಲ್ಲೇ ನಡೆಯುತ್ತಿದೆ. ಎಲ್ಲಿ ಕೂಡಾ ನೊಂದಣಿ ಮಾಡಿಲ್ಲ. ಹಾಗಾಗಿ ಇಂಥ ಕೇಂದ್ರಗಳ ಬಗ್ಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಿದೆ.

Leave A Reply

Your email address will not be published.