Home Karnataka State Politics Updates Dakshina Kannada: ದಕ್ಷಿಣ ಕನ್ನಡ ಲೋಕಸಭಾ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಆರ್‌.ಪದ್ಮರಾಜ್‌, ಉಡುಪಿ-ಚಿಕ್ಕಮಗಳೂರು ಜಯಪ್ರಕಾಶ್‌ ಹೆಗ್ಡೆ ಆಯ್ಕೆ

Dakshina Kannada: ದಕ್ಷಿಣ ಕನ್ನಡ ಲೋಕಸಭಾ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಆರ್‌.ಪದ್ಮರಾಜ್‌, ಉಡುಪಿ-ಚಿಕ್ಕಮಗಳೂರು ಜಯಪ್ರಕಾಶ್‌ ಹೆಗ್ಡೆ ಆಯ್ಕೆ

Dakshina Kannada

Hindu neighbor gifts plot of land

Hindu neighbour gifts land to Muslim journalist

Dakshina Kannada: ಭಾರೀ ಕುತೂಹಲ ಮೂಡಿಸಿದ್ದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸ್ಥಾನಕ್ಕೆ ಯಾರನ್ನು ಕಾಂಗ್ರೆಸ್‌ ಪಕ್ಷ ಆಯ್ಕೆ ಮಾಡುತ್ತದೆ ಎಂಬ ಪ್ರಶ್ನೆಗೆ ಇದೀಗ ತೆರೆ ಬಿದ್ದಿದೆ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಪದ್ಮರಾಜ್‌ ರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಹಾಗೂ ಇತ್ತೀಚೆಗೆ ಕಾಂಗ್ರೆಸ್‌ ಪಕ್ಷಕ್ಕೆ ಸೇರಿರುವ ಜಯಪ್ರಕಾಶ್‌ ಹೆಗ್ಡೆಯವರನ್ನು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ.

ಇದನ್ನೂ ಓದಿ: Madikeri: ಅನುಮಾನಾಸ್ಪದವಾಗಿ ಯುವಕ ಸಾವು

ಪದ್ಮರಾಜ್‌ ರಾಮಯ್ಯ ಇವರು ಜನಾರ್ದನ ಪೂಜಾರಿಯವ ಶಿಷ್ಯ. ವೃತ್ತಿಯಲ್ಲಿ ವಕೀಲರಾಗಿರುವ ಇವರು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿಯೂ ಆಯ್ಕೆಯಾಗಲಿದ್ದಾರೆ ಎನ್ನುವ ಮಾತೊಂದು ಕೇಳಿ ಬಂದಿತ್ತು. ಆದರೆ ಪಕ್ಷದ ಪ್ರಾಥಮಿಕ ಸದಸ್ಯತ್ವ ಇಲ್ಲದ, ಟಿಕೆಟ್‌ಗಾಗಿ ಅರ್ಜಿಯನ್ನೂ ಸಲ್ಲಿಸದ ಇವರಿಗೆ ಟಿಕೆಟ್‌ ನೀಡಿದರೆ ಪಕ್ಷದ ಕಾರ್ಯಕರ್ತರು ಬಂಡಾಯ ಏಳಬಹುದು ಎಂಬ ಕಾರಣಕ್ಕೆ ಇವರಿ ಟಿಕೆಟ್‌ ತಪ್ಪಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Student Heart Attack: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಮಯದಲ್ಲೇ ಕುಸಿದುಬಿದ್ದು ಹೃದಯಾಘಾತಕ್ಕೊಳಗಾದ ವಿದ್ಯಾರ್ಥಿನಿ; ಸ್ಥಳದಲ್ಲೇ ಸಾವು

ಕಾಂಗ್ರೆಸ್‌ ತನ್ನ ಅಭ್ಯರ್ಥಿಗಳ ಆಯ್ಕೆ ಪಟ್ಟಿಯಲ್ಲಿ 28 ಲೋಕಸಭಾ ಕ್ಷೇತ್ರಗಳ ಪೈಕಿ 21ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಗಳನ್ನು ಬಾಲಿ ಉಳಿಸಿಕೊಂಡಿತ್ತು.

ದಕ್ಷಿಣ ಕನ್ನಡ- ಆರ್. ಪದ್ಮರಾಜ್, ಉಡುಪಿ – ಚಿಕ್ಕಮಗಳೂರು – ಕೆ. ಜಯಪ್ರಕಾಶ್ ಹೆಗ್ಡೆ, ಬೆಂಗಳೂರು ದಕ್ಷಿಣ- ಸೌಮ್ಯ ರೆಡ್ಡಿ, ಚಿತ್ರದುರ್ಗ- ಚಂದ್ರಪ್ಪ, ಬೆಳಗಾವಿ- ಮೃಣಾಲ್ ಹೆಬ್ಬಾಳ್ಕರ್, ಚಿಕ್ಕೋಡಿ- ಪ್ರಿಯಾಂಕ ಜಾರಕಿಹೊಳಿ, ಕೊಪ್ಪಳ- ರಾಜಶೇಖರ್ ಹಿಟ್ನಾಳ, ಬೀದ‌ರ್ – ರಾಜಶೇಖರ್ ಪಾಟೀಲ್, ಬೆಂಗಳೂರು ಕೇಂದ್ರ- ಮನ್ಸೂರ್ ಅಲಿ ಖಾನ್, ರಾಯಚೂರು- ಕುಮಾರ್ ನಾಯಕ್, ಮೈಸೂರು- ಎಂ. ಲಕ್ಷಣ್, ಬೆಂಗಳೂರು ಉತ್ತರ- ಪ್ರೊ. ರಾಜೀವ್ ಗೌಡ್, ಬಾಗಲಕೋಟೆ- ಸಂಯುಕ್ತಾ ಶಿವನಾಂದ ಪಾಟೀಲ್, ಕಲಬುರಗಿ- ರಾಧಾಕೃಷ್ಣ ದೊಡ್ಡಮನಿ, ಧಾರವಾಡ- ವಿನೋದ್ ಅಸೂಟಿ, ಉತ್ತರ ಕನ್ನಡ- ಅಂಜನಿ ನಿಂಬಾಲ್ಕರ್ ಅವರನ್ನು ನೇಮಕಗೊಳಿಸಲಾಗಿದೆ.

ಹಾಗೂ ಇದೀಗ ಆರ್‌ ಪದ್ಮರಾಜ್‌ ಅವರನ್ನು ಕೆಪಿಸಿಸಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ. ದಾವಣಗೆರೆ-ಚಾಮರಾಜನಗರ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಪಟ್ಟಿಯನ್ನು ಕಾಂಗ್ರೆಸ್‌ ಬಾಕಿ ಉಳಿಸಿದೆ. ಸ್ವಲ್ಪ ದಿನದಲ್ಲೇ ಅಭ್ಯರ್ಥಿ ಘೋಷಣೆ ಮಾಡಲಿದೆ ಎಂದು ತಿಳಿದು ಬಂದಿದೆ.