Namma Metro: ತನ್ನ ಖಾಸಗಿ ಅಂಗ ಸ್ಪರ್ಶಿಸಿಕೊಂಡು ಮಹಿಳೆ ಮುಂದೆ ಅಸಭ್ಯ ವರ್ತನೆ ಮಾಡಿದ ಬೆಂಗಳೂರು ಮೆಟ್ರೋ ಸಿಬ್ಬಂದಿ

Share the Article

Namma Metro: ನಮ್ಮ ಮೆಟ್ರೋ ಸಿಬ್ಬಂದಿಯೋರ್ವ ಅಸಭ್ಯ ವರ್ತನೆಯನ್ನು ತೋರಿದ್ದು, ಮಹಿಳೆ ಮುಂದೆ ತನ್ನ ಖಾಸಗಿ ಅಂಗ ಸ್ಪರ್ಶಿಸಿಕೊಂಡು ವರ್ತನೆ ತೋರಿದ್ದು, ಈ ಘಟನೆ ಜಾಲಹಳ್ಳಿ ಮೆಟ್ರೋ ಫ್ಲ್ಯಾಟ್‌ಫಾರ್ಮ್‌ನಲ್ಲಿ ನಡೆದಿದೆ.

ಇದನ್ನೂ ಓದಿ: Terrible Accident: ಪ್ರವಾಸಿ ವಾಹನ ಕಂದಕ್ಕೆ ಬಿದ್ದು ಮಗು ಸಹಿತ 3 ಮಂದಿ ದಾರುಣ ಸಾವು; ಹಲವು ಮಂದಿಗೆ ಗಂಭೀರ ಗಾಯ

ಈ ಕುರಿತು ಮೆಟ್ರೋ ಮೇಲಾಧಿಕಾರಿಗಳಿಗೆ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಮೆಟ್ರೋ ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳದ ಕಾರಣ ಬೆಂಗಳೂರು ಪೊಲೀಸರಿಗೆ ಟ್ಯಾಗ್‌ ಮಾಡಿ ಜಾಲಹಳ್ಳಿ ಮೆಟ್ರೋ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.

ಇದನ್ನೂ ಓದಿ: K S Eshwarappa: ಶಿವಮೊಗ್ಗದಿಂದ ಸ್ಪರ್ಧೆ ಕುರಿತು ಮತ್ತೊಂದು ಬಿಗ್ ಅಪ್ಡೇಟ್ ಕೊಟ್ಟ ಈಶ್ವರಪ್ಪ – ಬಿಜೆಪಿ ನಾಯಕರಿಗೆ ಮತ್ತೊಂದು ಎಚ್ಚರಿಕೆ ರವಾನೆ.

ಮೆಟ್ರೋ ಸಿಬ್ಬಂದಿ ತನ್ನ ಖಾಸಗಿ ಅಂಗವನ್ನು ಸ್ಪರ್ಶ ಮಾಡಿ ಕೆಲವು ಸನ್ನೆಗಳನ್ನು ನಿರಂತರವಾಗಿ ಮಾಡುತ್ತಾ ನನ್ನನ್ನು ದಿಟ್ಟಿಸಿ ನೋಡುತಿದ್ದು, ಇದು ಮಧ್ಯಾಹ್ನ 2.30 ರ ಸುಮಾರಿಗೆ ನಡೆದಿದೆ. ಹಗಲು ಹೊತ್ತಿನಲ್ಲಿಯೇ ಇಂತಹ ಘಟನೆ ನಿಜಕ್ಕೂ ಕೆಟ್ಟದ್ದಾಗಿತ್ತು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ನಾನು ಆತನನ್ನು ಪ್ರಶ್ನೆ ಮಾಡಿದಾಗ, ಆತ ಕೆಲವು ಸನ್ನೆ ಮಾಡಿ, ನನ್ನನ್ನು ದಿಟ್ಟಿಸಿ ನೋಡುತ್ತಲೇ ಇದ್ದ. ನಾನು ನಂತರ ವಿಡಿಯೋ ಮಾಡಲು ಆರಂಭಿಸಿದ ಬಳಿಕ ಆತ ಅಲ್ಲಿಂದ ಹೊರಟು ಹೋದ ಎಂದು ದೂರಿನಲ್ಲಿ ಹೇಳಲಾಗಿದೆ.

Leave A Reply

Your email address will not be published.