Israel: ಇಸ್ರೇಲ್ ಗೆ ಭೇಟಿ ನೀಡಿದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್

ಇಸ್ರೇಲ್ ಮತ್ತು ಗಾಜಾ ನಡುವಿನ ಯುದ್ಧದ ಸಂದರ್ಭದಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಇಸ್ರೇಲ್ ಗೆ ಮಹತ್ವದ ಭೇಟಿ ನೀಡಿದ್ದಾರೆ.

ಇದನ್ನೂ ಓದಿ: Minister Krishnabaire Gowda: ಸಿಎಎಯಲ್ಲಿ ಶ್ರೀಲಂಕಾದಿಂದ ಪಲಾಯನ ಮಾಡಿದ ತಮಿಳರ ಬಗ್ಗೆ ಏಕೆ ಉಲ್ಲೇಖವಿಲ್ಲ? : ಸಚಿವ ಕೃಷ್ಣಭೈರೇಗೌಡ

ಈ ಭೇಟಿಯು ಇಸ್ರೇಲ್ – ಹಮಾಸ್ ಸಂಘರ್ಷದ ನಡುವೆ ಪಶ್ಚಿಮ ಏಷ್ಯಾದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಉತ್ತೇಜಿಸುವ ಗುರಿಯನ್ನು ಭಾರತ ಸರ್ಕಾರ ಹೊಂದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶುಕ್ರವಾರ ತಿಳಿಸಿದೆ.

ಇದನ್ನೂ ಓದಿ: POCSO case: ಆರೋಪಿಗಳ ಖುಲಾಸೆ ಆದೇಶ ಹಿಂಪಡೆದ ಕರ್ನಾಟಕ ಹೈಕೋರ್ಟ್ : ಅಪರಾಧಿಗಳಿಗೆ 10 ವರ್ಷಗಳ ಜೈಲು

ಈ ಭೇಟಿಯ ಸಮಯದಲ್ಲಿ ದೋವಲ್ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಭೇಟಿಯಾಗಿದ್ದು, ಇದು ಗಾಜಾ ಪಟ್ಟಿಯಲ್ಲಿನ ಸಂಘರ್ಷದ ಪರಿಣಾಮದ ಬಗ್ಗೆ ನವದೆಹಲಿಯಲ್ಲಿ ಹೆಚ್ಚುತ್ತಿರುವ ಕಳವಳದ ಕುರಿತು ಚರ್ಚಿಸಲಾಗಿದೆ.

“ನಿಮಗೆ ತಿಳಿದಿರುವಂತೆ, ಪ್ರಧಾನ ಮಂತ್ರಿಯವರೇ ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಉತ್ತೇಜಿಸಲು ಉತ್ಸುಕರಾಗಿದ್ದಾರೆ. ಈ ಸಂಬಂಧ ಅವರು ಹಲವಾರು ಅರಬ್ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ. ” ಪವಿತ್ರ ರಂಜಾನ್ ತಿಂಗಳ ಪ್ರಾರಂಭದಲ್ಲಿ ನಡೆದ ಎನ್ . ಎಸ್ . ಎ . ಯ ಇಸ್ರೇಲ್ ಭೇಟಿಯು ಈ ಪ್ರಯತ್ನಗಳನ್ನು ಮುನ್ನಡೆಸುತ್ತದೆ ” ಎಂದು ಅವರು ಹೇಳಿದರು.

ದೋವಲ್ ಅವರು ನೆತನ್ಯಾಹು , ಅವರ ಇಸ್ರೇಲಿ ಸಹವರ್ತಿ ತ್ಸಾಚಿ ಹನೆಗ್ಬಿ ಮತ್ತು ಇತರ ಹಲವಾರು ಹಿರಿಯ ನಾಯಕರನ್ನು ಭೇಟಿಯಾಗಿ ಗಾಜಾದಲ್ಲಿನ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದಾರೆ. ” ಅವರು ಮಾನವೀಯ ನೆರವು ಮತ್ತು ಒತ್ತೆಯಾಳುಗಳ ಬಿಡುಗಡೆಗೆ ಕೈಗೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ಚರ್ಚಿಸಿದರು ” ಎಂದು ಜೈಸ್ವಾಲ್ ಹೇಳಿದರು .

ಕಳೆದ ವರ್ಷ ಸಂಘರ್ಷಕ್ಕೆ ಕಾರಣವಾದ ಹಮಾಸ್ನ ಅಕ್ಟೋಬರ್ 7ರ ಭಯೋತ್ಪಾದಕ ದಾಳಿಯ ನಂತರ ಇದು ದೋವಲ್ ಅವರ ಮೊದಲ ಇಸ್ರೇಲ್ ಭೇಟಿಯಾಗಿದೆ. ಗಾಜಾ ಪಟ್ಟಿಯಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ನೆತನ್ಯಾಹು ದೋವಲ್ ಅವರಿಗೆ ಮಾಹಿತಿ ನೀಡಿದ್ದಾರೆ ಎಂದು ಇಸ್ರೇಲ್ ಪ್ರಧಾನಿ ಕಚೇರಿಯ ಪ್ರಕಟಣೆ ತಿಳಿಸಿದೆ. ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಪ್ರಯತ್ನ ಮತ್ತು ಮಾನವೀಯ ನೆರವಿನ ಬಗ್ಗೆಯೂ ಎರಡೂ ಕಡೆಯವರು ಚರ್ಚಿಸಿದರು.

ಇಸ್ಲಾಮಿಕ್ ಪವಿತ್ರ ರಂಜಾನ್ ತಿಂಗಳಲ್ಲಿ ಪ್ರಮುಖ ಅರಬ್ ರಾಷ್ಟ್ರಗಳು ಮತ್ತು ಅಮೆರಿಕವು ಗಾಜಾದಲ್ಲಿ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸುತ್ತಿರುವ ಸಮಯದಲ್ಲಿ ದೋವಲ್ ಅವರ ಈ ಭೇಟಿ ಹೆಚ್ಚು ಮಹತ್ವ ಪಡೆದಿದೆ.

Leave A Reply

Your email address will not be published.