BS Yediyurappa: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಯುಡಿಯೂರಪ್ಪ ವಶಕ್ಕೆ ಪಡೆಯುವ ಕುರಿತು ಗೃಹ ಸಚಿವರಿಂದ ಮಹತ್ವದ ಹೇಳಿಕೆ

B.S.Yediyurappa: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕುರಿತು ಮಾಜಿ ಸಿಎಂ ಬಿಎಸ್‌ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ಇದರ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್‌ ಅವರು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ನಂತರ ಡಿಕೆ ಶಿವಕುಮಾರ್‌ ಇದೊಂದು ಸೂಕ್ಷ್ಮ ವಿಷಯವಾಗಿರುವುದರಿಂದ ಗೃಹ ಸಚಿವರೇ ಮಾತನಾಡುತ್ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Annamalai: ಅಣ್ಣಾಮಲೈ ನಟನೆ ಮಾಡಿ ಮೊದಲ ಕನ್ನಡ ಸಿನಿಮಾ ʼಅರಬ್ಬಿʼ ಟ್ರೈಲರ್‌ ಬಿಡುಗಡೆ

ನಂತರ ಮಾತನಾಡಿದ ಪರಮೇಶ್ವರ್‌ ಅವರು ಯಡಿಯೂರಪ್ಪ ಅವರು ಹಿರಿಯ ರಾಜಕಾರಣಿ. ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶ ಇಲ್ಲ. ಒಬ್ಬ ಮಹಿಳೆ ನಿನ್ನೆ ರಾತ್ರಿ ದೂರು ನೀಡಿದ್ದಾರೆ. ಇದನ್ನು ಪರಿಗಣಿಸಿ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ. ತನಿಖೆ ಆಗುವವರೆಗೆ ಯಾವುದೇ ವಿಷಯ ತಿಳಿಸಲು ಸಾಧ್ಯವಿಲ್ಲ. ಮಾಜಿ ಮುಖ್ಯಮಂತ್ರಿ ವಿಷಯಕ್ಕೆ ಸಂಬಂಧ ಪಟ್ಟ ವಿಷಯ ಇದು. ಬಹಳ ಸೂಕ್ಷ್ಮವಾಗಿದೆ. ಮಹಿಳೆಗೆ ರಕ್ಷಣೆ ಅಗತ್ಯವಿದ್ದರೆ ನೀಡುತ್ತೇವೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ಜೊತೆನೂ ಈ ಕುರಿತು ಚರ್ಚೆ ಮಾಡಲಾಗಿದೆ.

ಯಡಿಯೂರಪ್ಪ ಅವರ ವಿರುದ್ಧ ದೂರು ನೀಡಿದ ಮಹಿಳೆ ಮಾನಸಿಕ ಅಸ್ವಸ್ಥೆ ಎಂದು ಹೇಳುತ್ತಿದ್ದಾರೆ ಎಂದ ಪರಮೇಶ್ವರ್‌ ಅವರು, ದೂರನ್ನು ಟೈಪ್‌ ಮಾಡಿ ಕೊಡಲಾಗಿದೆ. ಕೈಯಿಂದ ಬರೆದು ಕೊಟ್ಟಿಲ್ಲ ಎಂದು ಅಧಿಕಾರಿಗಳು ಹೇಳಿರುವುದಾಗಿ ಹೇಳಿದ್ದಾರೆ. ಇದು ಒಬ್ಬ ಮಾಜಿ ಸಿಎಂ ವಿಷಯಕ್ಕೆ ಸಂಬಂಧಪಟ್ಟ ಸುದ್ದಿ, ಹಾಗಾಗಿ ಎಚ್ಚರಿಕೆಯಿಂದ ಯಾವುದೇ ವಿಷಯ ಹೇಳಬೇಕು ಎಂದು ಹೇಳಿದರು.

Leave A Reply

Your email address will not be published.