Petrol-Desel price: ಲೋಕಸಭಾ ಚುನಾವಣೆಗೆ ಕೇಂದ್ರದಿಂದ ಗಿಫ್ಟ್- ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆ !!

Petrol-Desel price: ಲೋಕಸಭೆ ಚುನಾವಣೆ ನಿಮಿತ್ತ ಕೇಂದ್ರ ಸರ್ಕಾರವು ದೇಶದ ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದು, ಪೆಟ್ರೋಲ್-ಡೀಸೆಲ್ (Petrol-Desel price) ಬೆಲೆಯಲ್ಲಿ ಪ್ರತೀ ಲೀಟರ್ ಗೆ 2ರೂ ಇಳಿಕೆ ಮಾಡಿದೆ.

ಹೌದು, ಮುಂಬರುವ ಲೋಕಸಭಾ ಚುನಾವಣೆಯನ್ನು(Parliament election) ಗಮನದಲ್ಲಿಟ್ಟುಕೊಂಡು ಕೆಲವು ದಿನಗಳ ಹಿಂದಷ್ಟೇ ಕೇಂದ್ರವು LPG ಸಿಲಿಂಡರ್ ದರವನ್ನು ಕಡಿಮೆ ಮಾಡಿತ್ತು. ಈ ಬೆನ್ನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್ಗೆ 2 ರೂ.ಗಳಷ್ಟು ಕಡಿತಗೊಳಿಸಿದೆ.

ಅಂದಹಾಗೆ ಪೆಟ್ರೋಲ್, ಡೀಸೆಲ್ ದರ ಪ್ರತಿ ಲೀಟರ್ಗೆ 2 ರೂಪಾಯಿ ಇಳಿಕೆಯಾಗಿದ್ದು, ಪರಿಷ್ಕೃತ ದರ ನಾಳೆ ಅಂದರೆ ಮಾರ್ಚ್ 15ರ ಬೆಳಗ್ಗೆ 6ರಿಂದ ಜಾರಿಗೆ ಬರಲಿದೆ ಎಂದು ವರದಿಯಾಗಿದೆ. ಅಂದರೆ ಬೆಂಗಳೂರಿನಲ್ಲಿ ಇಂದಿನಿಂದ ಪೆಟ್ರೋಲ್ ಬೆಲೆ 99.94 ರೂಪಾಯಿ ಹಾಗೂ ಡೀಸೆಲ್ ಬೆಲೆ 85.89 ರೂಪಾಯಿಗೆ ಇಳಿಕೆ ಆಗಲಿದೆ.

Leave A Reply

Your email address will not be published.