

Kochhi: ಆಫ್ರಿಕಾದ ಫುಟ್‌ಬಾಲ್ ಆಟಗಾರನೊಬ್ಬನನ್ನು ಜನಸಮೂಹವೊಂದು ಬೆನ್ನಟ್ಟಿ ಥಳಿಸಿದ ಘಟನೆಯೊಂದು ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ.
ಇದನ್ನೂ ಓದಿ: Putturu: ಪುತ್ತೂರು; ಕಾರುಗಳ ನಡುವೆ ಭೀಕರ ಅಪಘಾತ; ಹಲವು ಮಂದಿಗೆ ಗಾಯ, ರಸ್ತೆ ಬ್ಲಾಕ್
ಐವರಿ ಕೋಸ್ಟ್ ದೇಶದ ದೈರ್ರಾಸೌಬಾ ಹಾಸನ್ ಜೂನಿಯರ್ ಎಂಬಾತನೇ ಹಲ್ಲೆಗೊಳಗಾದ ವ್ಯಕ್ತಿ.
ಇದನ್ನೂ ಓದಿ: Udupi: ತನ್ನ ಸ್ವಂತ ಬಸ್ ಅಡಿ ಬಿದ್ದು ಮಾಲೀಕ ದಾರುಣ ಸಾವು
ಸೆವೆನ್ಸ್ ಫುಟ್ಬಾಲ್ ಮಲಪ್ಪುರಂನಲ್ಲಿ ಪ್ರಸಿದ್ಧ ಕ್ರೀಡಾ ಕೂಟ. ಸೆವೆನ್ಸ್ ಫುಟ್ಬಾಲ್ ಪಂದ್ಯಾವಳಿಯ ಸಮಯದಲ್ಲಿ ಈ ದುರ್ಘಟನೆ ನಡೆದಿದೆ. ಜವಾಹರ್ ಮಾವೂರ್ ಎಂಬ ಫುಟ್ಬಾಲ್ ಕ್ಲಬ್ ಅನ್ನು ಹಾಸನ್ ಜೂನಿಯರ್ ಪ್ರತಿನಿಧಿಸುತ್ತಿದ್ದಾರೆ.
ಕೆಲವು ಪ್ರೇಕ್ಷಕರು ಹೇಳಿರುವ ಪ್ರಕಾರ ಆಟಗಾರ ತಮ್ಮಲ್ಲಿ ಒಬ್ಬನನ್ನು ಒದ್ದರು ಎಂದು ಆರೋಪಿಸಿದ್ದಾರೆ. ಅದಕ್ಕೆ ಈ ರೀತಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ವೀಡಿಯೋದಲ್ಲಿ ಐವರಿ ಕೋಸ್ಟ್ ಫುಟ್ಬಾಲ್ ಆಟಗಾರರನ್ನು ಜನರು ಹಿಡಿದು ಥಳಿಸುತ್ತಿದ್ದಾರೆ.
ಹಾಸನ್ ಜೂನಿಯರ್ ಪೊಲೀಸರಿಗೆ ದೂರು ನೀಡಿದ್ದು, ದೂರಲ್ಲಿ ಫುಟ್ಬಾಲ್ ಆಟಗಾರ ತನ್ನ ತಂಡಕ್ಕೆ ಕಾರ್ನರ್ ಕಿಕ್ ಸಿಕ್ಕಿತು ಮತ್ತು ಆತ ತನ್ನ ಸ್ಥಾನ ಪಡೆಯಲು ಮುಂದಾದಾಗ, ಪ್ರೇಕ್ಷಕರು ಜನಾಂಗೀಯ ನಿಂದನೆ ಮಾಡಿರುವುದಾಗಿ ಆರೋಪ ಮಾಡಿದ್ದಾರೆ. ಜೊತೆಗೆ ಗುಂಪು ತನ್ನ ಮೇಲೆ ಕಲ್ಲು ತೂರಾಟ ನಡೆಸಿದೆ ಎಂದು ಕೂಡಾ ಆರೋಪ ಮಾಡಿದ್ದಾರೆ. ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.













