Grace Marks: ದ್ವಿತೀಯ ಪಿಯುಸಿ ಪರೀಕ್ಷೆ; ವಿದ್ಯಾರ್ಥಿಗಳಿಗೆ ಗ್ರೇಸ್‌ ಮಾರ್ಕ್ಸ್‌, ಮಂಡಳಿಯಿಂದ ಸ್ಪಷ್ಟನೆ

Second Puc Exam Grace Mark: ದ್ವಿತೀಯ ಪಿಯುಸಿ ಭೌತಶಾಸ್ತ್ರ ವಿಷಯದ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಗ್ರೇಸ್‌ ಮಾರ್ಕ್ಸ್‌ ನೀಡುವ ಸುದ್ದಿಯೊಂದು ಹಬ್ಬಿಸಲಾಗಿತ್ತು. ಇದೀಗ ಈ ಘಟನೆಗೆ ಕುರಿತಂತೆ ಪಿಯು ಮಂಡಳಿ ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ: Mallapuram: ಆಫ್ರಿಕಾ ಫುಟ್ಬಾಲ್‌ ಆಟಗಾರರನ್ನು ಅಟ್ಟಾಡಿಸಿ ಥಳಿಸಿದ ಜನರು; ಅಷ್ಟಕ್ಕೂ ಆಗಿದ್ದೇನು

ವಿದ್ಯಾರ್ಥಿಗಳಿಗೆ ಬಹು ಆಯ್ಕೆಯ ಪ್ರಶ್ನೆಗಳು ಕಷ್ಟಕರವಾಗಿದ್ದರಿಂದ ಗ್ರೇಸ್‌ ಮಾರ್ಕ್ಸ್‌ ನೀಡಲಾಗುತ್ತಿದೆ ಎಂದು ವದಂತಿ ಹಬ್ಬಿಸಲಾಗಿತ್ತು. ಇದು ಕೇವಲ ವದಂತಿ. ಯಾವುದೇ ಗ್ರೇಸ್‌ ಮಾರ್ಕ್ಸ್‌ ನೀಡಲಾಗುತ್ತಿಲ್ಲ. ಮಾ.10 ರಂದು ಹೊರಡಿಸಿದ್ದ ಸುತ್ತೋಲೆ ನಕಲಿ ಎಂದು ಮಂಡಳಿ ತಿಳಿಸಿದೆ.

ಇದನ್ನೂ ಓದಿ: Putturu: ಪುತ್ತೂರು; ಕಾರುಗಳ ನಡುವೆ ಭೀಕರ ಅಪಘಾತ; ಹಲವು ಮಂದಿಗೆ ಗಾಯ, ರಸ್ತೆ ಬ್ಲಾಕ್‌

ನಾವು ಇದುವರೆಗೆ ಗ್ರೇಸ್‌ ಅಂಕ ನೀಡುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇದು ನಕಲಿ ಸುತ್ತೋಲೆಯಾಗಿದೆ ಎಂದು ಪಿಯುಸಿ ಪರೀಕ್ಷೆಗಳ ನಿರ್ದೇಶಕ ಗೋಪಾಲಕೃಷ್ಣ ಎಚ್‌.ಎನ್‌ ತಿಳಿಸಿದ್ದಾರೆ.

Leave A Reply

Your email address will not be published.