Home latest BJP: ಲೋಕಸಭಾ ಟಿಕೆಟ್ ಮಿಸ್- ಪ್ರತಾಪ್ ಸಿಂಹ, ನಳೀನ್ ಕುಮಾರ್ ಕಟೀಲ್ ಹೇಳಿದ್ದೇನು?

BJP: ಲೋಕಸಭಾ ಟಿಕೆಟ್ ಮಿಸ್- ಪ್ರತಾಪ್ ಸಿಂಹ, ನಳೀನ್ ಕುಮಾರ್ ಕಟೀಲ್ ಹೇಳಿದ್ದೇನು?

BJP

Hindu neighbor gifts plot of land

Hindu neighbour gifts land to Muslim journalist

BJP: ಲೋಕಸಭಾ ಚುನಾವಣೆಗೆ ಬಿಜೆಪಿಯ ಎರಡನೇ ಪಟ್ಟಿ ಪ್ರಕಟವಾಗಿದ್ದು ಕರ್ನಾಟಕದ 20ಕ್ಷೇತ್ರಗಳಿಗೆ ಟಿಕೆಟ್ ಗೋಷಣೆ ಆಗಿದೆ. ಆದರೆ ಕೆಲವು ಕ್ಷೇತ್ರಗಳಿಗೆ ಬಿಜೆಪಿ(BJP)ಯು ಅಚ್ಚರಿ ಅಭ್ಯರ್ಥಿಗಳನ್ನು ಘೋಷಿಸಿದೆ. ಅಲ್ಲದೆ ಅನೇಕ ಪ್ರಬಲ ಸಂಸದರಿಗೆ ಟಿಕೆಟ್ ಮಿಸ್ ಆಗಿದೆ.

ಇದನ್ನು ಓದಿ: Political News: ಬಿಜೆಪಿಯಲ್ಲಿ ನಿಮಗೆ ಅವಮಾನವಾಗಿದೆ ಎಂದು ಅನಿಸಿದರೆ ನಮ್ಮೊಂದಿಗೆ ಸೇರಿ : ಗಡ್ಕರಿ ಅವರಿಗೆ ಆಹ್ವಾನವಿತ್ತ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ

ಅಂತೆಯೇ ಪ್ರತಾಪ್ ಸಿಂಹ(Pratap simha)ಹಾಗೂ ನಳೀನ್ ಕುಮಾರ್ ಕಟೀಲ್(Nalin kumar kateel) ಅವರಿಗೂ ಟಿಕೆಟ್ ಕೈತಪ್ಪಿದೆ. ಹೌದು, 2ನೇ ಸಾರಿ ಗೆದ್ದು ಹ್ಯಾಟ್ರಿಕ್‌ ಗೆಲುವಿ ಕನಸು ಕಂಡಿದ್ದ ಪ್ರತಾಪ್‌ ಸಿಂಹಗೆ ಮೈಸೂರು-ಕೊಡಗು ಕ್ಷೇತ್ರದಲ್ಲಿ ಈ ಸಾರಿ ಟಿಕೆಟ್ ಕೈತಪ್ಪಿದೆ. ಬದಲಾಗಿ ಮೈಸೂರು ರಾಜಮನೆತನದ ಯದುವೀರ್ ಕೃಷ್ಣರಾಜ ಒಡೆಯರ್‌ಗೆ(Yaduver krishnaraj wodeyar) ಸಿಕ್ಕಿದೆ. ಇನ್ನು ಹ್ಯಾಟ್ರಿಕ್ ಭಾರಿಸಿ 4ನೇ ಸಲವೂ ಟಿಕೆಟ್ ನಿರೀಕ್ಷೆಯಲ್ಲಿದ್ದ ನಳೀನ್ ಕುಮಾರ್ ಕಟೀಲ್ ಅವರಿಗೂ ಟಿಕೆಟ್ ಕೈತಪ್ಪಿ ಯುವ ನಾಯಕ ಕ್ಯಾ. ಬ್ರಿಜೇಶ್ ಚೌಟರಿಗೆ ಟಿಕೆಟ್ ಧಕ್ಕಿದೆ. ಇದೀಗ ಟಿಕೆಟ್ ವಂಚಿತರಾದ ಇಬ್ಬರು ನಾಯಕರು ಈ ಬಗ್ಗೆ ಮೊದಲ ಸಲ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನು ಓದಿ: Political News: ಬಿಜೆಪಿಯಲ್ಲಿ ನಿಮಗೆ ಅವಮಾನವಾಗಿದೆ ಎಂದು ಅನಿಸಿದರೆ ನಮ್ಮೊಂದಿಗೆ ಸೇರಿ : ಗಡ್ಕರಿ ಅವರಿಗೆ ಆಹ್ವಾನವಿತ್ತ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ

ಪ್ರತಾಪ್ ಸಿಂಹ ಹೇಳಿದ್ದೇನು?

ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಟ್ವೀಟ್ ಮಾಡಿರುವ ಸಂಸದ ಪ್ರತಾಪ್ ಸಿಂಹ ಯದುವೀರ ಒಡೆಯರ್ಗೆ ಅಭಿನಂದನೆ ತಿಳಿಸಿದ್ದಾರೆ. ಕೂಡಲೇ ಚುನಾವಣೆ ತಯಾರಿ ಆರಂಭಿಸೋಣ, ಪ್ರಚಾರಕ್ಕಿಳಿಯೋಣ ದೇಶಕ್ಕಾಗಿ, ಮೋದಿಗಾಗಿ ಎಂದು ಟ್ವೀಟ್‌ ಮಾಡಿದ್ದಾರೆ. ಅಲ್ಲದೆ ನಾನು ಸಾಯುವ ತನಕ ಬಿಜೆಪಿಯಲ್ಲೇ ಇರುವವನು. ಕೊನೇವರೆಗೂ ಮೋದಿ ಭಕ್ತನಾಗಿಯೇ ಉಳಿಯುತ್ತೇನೆ. ಯಾವ ಅಧಿಕಾರ ಕೊಡುತ್ತೇನೆ ಅಂದರೂ ಬಿಜೆಪಿ ಬಿಡೋದಿಲ್ಲ ಎಂದಿದ್ದಾರೆ.

ನಳೀನ್ ಕುಮಾರ್ ಕಟೀಲ್ ಹೇಳಿದ್ದೇನು?

ಮಂಗಳೂರಿನಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಪ್ರತಿಕ್ರಿಯಿಸಿದ್ದು, ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ಬ್ರಿಜೇಟ್ ಚೌಟಾಗೆ ಅಭಿನಂದಿಸುವೆ. ಕಳೆದ 15 ವರ್ಷಗಳಿಂದ ಪಕ್ಷ ನನಗೆ ಅವಕಾಶವನ್ನ ಕೊಟ್ಟಿದೆ. ಮತದಾರರು 15 ವರ್ಷಗಳಿಂದ ಆಶೀರ್ವಾದ ಮಾಡಿದ್ದಾರೆ. ಅಲ್ಲದೆ ರಾಜ್ಯ ಘಟಕದ ಅಧ್ಯಕ್ಷನಾಗಿ ಕೆಲಸ ಮಾಡುವ ಅವಕಾಶ ಕೊಟ್ಟಿದೆ. ಪಕ್ಷದ ರಾಜ್ಯಾಧ್ಯಕ್ಷನಾಗಿ ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ಪಕ್ಷ ಏನು ಹೇಳುತ್ತೋ ಅದನ್ನ ಮಾಡುವವನು ನಾನು.

ರಾಜಕಾರಣಕ್ಕೆ ಯುವಕರು ಬರಬೇಕು. ಪಕ್ಷ ತೆಗೆದುಕೊಂಡಿರುವ ತೀರ್ಮಾನವನ್ನು ಸ್ವಾಗತಿಸುತ್ತೇನೆ ಎಂದಿದ್ದಾರೆ.