Pratap simha: ರಾತ್ರೋರಾತ್ರಿ ದಿಢೀರ್ ಫೇಸ್‌ಬುಕ್‌ ಲೈವ್‌ ಬಂದು ಭಾವುಕರಾದ ಪ್ರತಾಪ್ ಸಿಂಹ !! ಲೈವ್ ಅಲ್ಲಿ ಹೇಳಿದ್ದೇನು ?

Prathap simha: ಲೋಕಸಭಾ ಚುನಾವಣೆಗೆ ಬಿಜೆಪಿಯ ಅಭ್ಯರ್ಥಿಗಳ ಆಯ್ಕೆ ಇನ್ನು ಮುಗಿದಿಲ್ಲ. 18 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಫೈನಲ್ ಆದರೂ 8 ಕ್ಷೇತ್ರಗಳು ಕಗ್ಗಂಟಾಗಿವೆ ಎನ್ನಲಾಗಿದೆ. ಈ ನಡುವೆ ರಾಜ್ಯದ ಭಾರೀ ಪ್ರಮುಖ ಕ್ಷೇತ್ರವಾದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬದಲಾವಣೆ ವಿಚಾರ ಭಾರೀ ಸದ್ದು ಮಾಡುತ್ತಿದ್ದು, ದಿನದಿಂದ ದಿನಕ್ಕೆ ಹೊಸ ಬದಲಾವಣೆಗಳು ನಡೆಯುತ್ತಿವೆ. ಹಾಲಿ ಸಂಸದ ಪ್ರತಾಪ್ ಸಿಂಹ(Pratap simha) ಅವರಿಗೆ ಟಿಕೆಟ್ ಸಿಗುವುದು ಬಹತೇಕ ಡೌಟ್ ಎನ್ನಲಾಗಿದೆ. ಈ ಬೆನ್ನಲ್ಲೇ ದಿಢೀರ್ ಆಗಿ ಫೇಸ್‌ಬುಕ್‌ ಲೈವ್‌ ಬಂದು ಭಾವುಕರಾದ ಪ್ರತಾಪ್ ಸಿಂಹ ಭಾವುಕರಾಗಿದ್ದಾರೆ. ಹಾಗಿದ್ರೆ ಪ್ರತಾಪ್ ಸಿಂಹ ಹೇಳಿದ್ದೇನು ಗೊತ್ತಾ?

ಇದನ್ನೂ ಓದಿ: Lokasabha election: ಪ್ರತಾಪ್ ಸಿಂಹ, ಯದುವೀರ್ ಬಿಟ್ಟು ಬೇರೆ ಅಭ್ಯರ್ಥಿಯತ್ತ ಗಮನ ಹರಿಸಿದ ಹೈಕಮಾಂಡ್!!

ಹೌದು, ರಾಜ್ಯದ್ಯಾಂತ ತನಗೆ ಟಿಕೆಟ್ ಸಿಗುವುದಿಲ್ಲ ಎಂಬ ವಿಚಾರ ಜೋರಾಗಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ರಾತ್ರೋರಾತ್ರಿ ಫೇಸ್‌ಬುಕ್‌ ಲೈವ್‌ ಬಂದ ಸಂಸದ ಪ್ರತಾಪ್ ಸಿಂಹ ಅವರು ಭಾವುಕರಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಲೈವ್ ಅಲ್ಲಿ ಪ್ರತಾಪ್ ಸಿಂಹ ಅವರು ‘ನನ್ನ ಟಿಕೆಟ್ ಬಗೆಗಿನ ನಿರ್ಣಯ ತಾಯಿ ಚಾಮುಂಡೇಶ್ವರಿ ಮಾಡುತ್ತಾಳೆ. ನನ್ನ ರಾಜಕೀಯ ಹಿತಾಸಕ್ತಿಗಾಗಿ ಯಾರ ಮನೆಯನ್ನು ಸುತ್ತಿಲ್ಲ. ನನಗೆ ನಾಳೆ ಟಿಕೆಟ್ ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆ ಎನ್ನುತ್ತ ಹಾಗೆಯೇ ಇದೇ ವೇಳೆ ತಮ್ಮ ಸಾಧನೆಗಳ ಬಗ್ಗೆಯೂ ಹೇಳಿ ಭಾವುಕರಾಗಿದ್ದಾರೆ.

ಜೊತೆಗೆ ತಮ್ಮ ಪಕ್ಷದ ನಾಯಕರ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿ ‘ನಾಳೆ ಬೆಳಗ್ಗೆ ನನಗೆ ವರಿಷ್ಠರು ಟಿಕೆಟ್ ಕೊಡುತ್ತಾರೆ ಎಂಬ ವಿಶ್ವಾಸ ಇದೆ. ನಿಮ್ಮ ಪ್ರೀತಿಯೇ ನನಗೆ ಸಾಕು. ನನ್ನ ಪರವಾಗಿ ನೀವೂ ಪ್ರಾರ್ಥಿಸಿ. ಈ ಪ್ರೀತಿ ಹಾರೈಕೆ ಮುಂದಿನ ಐದು ವರ್ಷಗಳ ಕಾಲ ವರವಾಗಿ ಕೆಲಸ ಮಾಡುವುದಕ್ಕೆ ಅನುಕೂಲವಾಗಲಿ. ಇನ್ನೂ ಐದು ವರ್ಷಗಳ ಕಾಲ ನಿರೀಕ್ಷೆಗೂ ಮೀರಿ ಕೆಲಸ ಮಾಡುತ್ತೇನೆ ನಿಮ್ಮ ಸಹಕಾರ ಇರಲಿ ಎಂದು ಹೇಳಿದರು.

1 Comment
  1. […] ಇದನ್ನೂ ಓದಿ: Pratap simha: ರಾತ್ರೋರಾತ್ರಿ ದಿಢೀರ್ ಫೇಸ್‌ಬುಕ್‌… […]

Leave A Reply

Your email address will not be published.