Home Karnataka State Politics Updates Putturu Puttila Parivara: ಸಕ್ರಿಯ ರಾಜಕಾರಣದಿಂದ ಸಂಪೂರ್ಣವಾಗಿ ನಿವೃತ್ತ, ಯಾವುದೇ ಸಂಘಟನೆ, ಪರಿವಾರದೊಂದಿಗೆ ನಾನಿಲ್ಲ- ರಾಜಾರಾಮ್‌...

Putturu Puttila Parivara: ಸಕ್ರಿಯ ರಾಜಕಾರಣದಿಂದ ಸಂಪೂರ್ಣವಾಗಿ ನಿವೃತ್ತ, ಯಾವುದೇ ಸಂಘಟನೆ, ಪರಿವಾರದೊಂದಿಗೆ ನಾನಿಲ್ಲ- ರಾಜಾರಾಮ್‌ ಭಟ್‌ ಘೋಷಣೆ

Putturu Puttila Parivara

Hindu neighbor gifts plot of land

Hindu neighbour gifts land to Muslim journalist

Putturu: ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡಿದ್ದ ರಾಜಾರಾಮ್‌ ಭಟ್‌ ಅವರು ಶಾಕಿಂಗ್‌ ಮಾಹಿತಿಯೊಂದನ್ನು ನೀಡಿದ್ದಾರೆ. ಅವರು ಹೇಳಿರುವ ಪ್ರಕಾರ, ಇನ್ಮುಂದೆ ಯಾವುದೇ ಸಂಘಟನೆ, ಪರಿವಾರದೊಂದಿಗೆ ಕಾರ್ಯ ನಿರ್ವಹಿಸುವುದಿಲ್ಲ ಎಂದು ಹೇಳಿದ್ದು, ಈ ಮೂಲಕ ರಾಜಕೀಯದಿಂದ ದೂರ ಸರಿಯುವ ಮುನ್ಸೂಚನೆಯನ್ನು ನೀಡಿದ್ದಾರೆ.

ಇದನ್ನೂ ಓದಿ: Bengaluru: ಬೆಂಗಳೂರು ಕರಗಾ ಮಹೋತ್ಸವ ಹಿನ್ನೆಲೆ : ಸಂಚಾರ ದಟ್ಟಣೆಗೆ ಪೊಲೀಸರ ಸಲಹೆ

ಈ ಕುರಿತು ಅವರು ಫೇಸ್ಬುಕ್‌ ಲೈವ್‌ ಮೂಲಕ ಮಾತನಾಡಿದ್ದು, ಇನ್ಮುಂದೆ ಯಾವುದೇ ಸಂಘಟನೆ, ಪರಿವಾರದೊಂದಿಗೆ ಕಾರ್ಯ ನಿರ್ವಹಿಸುವುದಿಲ್ಲ ಹಾಗೆಯೇ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯುವುದಾಗಿ ಹೇಳಿರುವ ವೀಡಿಯೋ ವೈರಲ್‌ ಆಗಿದೆ. ನಾನು ಸ್ವತಂತ್ರ ಮತದಾರ ಇಂದಿನಿಂದ, ಯಾವ ಪಕ್ಷದ ವಕ್ತಾರ ಕೂಡಾ ಅಲ್ಲ. ಪರಿವಾರದ ವಕ್ತಾರ ಕೂಡಾ ಅಲ್ಲ. ಸಂಘಟನೆಗಳಲ್ಲಿ ಕೂಡಾ ನಾನು ಇನ್ನು ಮುಂದೆ ಸದಸ್ಯನಾಗಿರುವುದಿಲ್ಲ ಎಂದು ಹೇಳಿದ್ದಾರೆ.

ಇವತ್ತಿನಿಂದ ಈ ನಿಮಿಷದಿಂದ, ನನ್ನ ಸ್ನೇಹಿತರಲ್ಲಿ ಹಂಚಿಕೊಳ್ಳುವುದೇನೆಂದರೆ, ನಾನು ಸಕ್ರಿಯ ರಾಜಕಾರಣದಿಂದ ಸಂಪೂರ್ಣವಾಗಿ ನಿವೃತ್ತನಾಗುತ್ತಿದ್ದೇನೆ ಎಂದು ಹೇಳಿದ್ದಾರೆ.

ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನ ಮಾಡಿದ್ದೇನೆ. ಕಾಯ ವಾಚ ಮನಸಾ, ತನು ಮನ ಧನ ಮೂಲಕ ಯಾವ ಪರಿವಾರದೊಂದಿಗೆ, ಯಾವ ಸಂಘಟನೆಯೊಂದಿಗೆ ನಾನು ಅರ್ಪಿಸಿದ್ದೇನೆ. ಅದಕ್ಕೆ ಧಾರೆಯೆರೆದಿದ್ದೇನೆ. ಯಾವುದೇ ಕಷ್ಟ ನಷ್ಟಗಳಿಗೆ ಅಲ್ಲ. ನನ್ನ ವೈಯಕ್ತಿಕ ಕಾರಣಗಳಿಂದ ನಾನು ರಾಜಕೀಯ ನಿವೃತ್ತಿ ಘೋಷಿಸಿರುವುದಾಗಿ ವಿಡಿಯೋ ಮೂಲಕ ಹೇಳಿದ್ದಾರೆ.