Sringeri POCSO Case: ಹೆತ್ತ ಮಗಳನ್ನೇ ವೇಶ್ಯಾವಾಟಿಕೆಗೆ ದೂಡಿದ ಪ್ರಕರಣ; ತಾಯಿ ಸೇರಿ ನಾಲ್ವರು ಆರೋಪಿಗಳಿಗೆ 25 ಸಾವಿರ ದಂಡ, 20 ವರ್ಷ ಜೈಲು

Share the Article

Sringeri POCSO Case: ಹೆತ್ತ ತಾಯಿಯೇ ತನ್ನ ಅಪ್ರಾಪ್ತ ಮಗಳನ್ನು ವೇಶ್ಯಾವಾಟಿಕೆಗೆ ದೂಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಾಯಿ ಸೇರಿ ನಾಲ್ವರು ಆರೋಪಿಗಳಿಗೆ ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಲಯ ಶಿಕ್ಷೆಯನ್ನು ಪ್ರಕಟ ಮಾಡಿದೆ.

ತನ್ನ ಮಗಳನ್ನು ತಾಯಿಯೋರ್ವಳು ವೇಶ್ಯಾವಾಟಿಕೆಗ ದೂಡಿ 2020ರ ಸೆಪ್ಟೆಂಬರ್‌ನಿಂದ 2021 ರ ಜನವರಿಯವರೆಗೆ ಬ್ಲಾಕ್‌ ಮೇಲ್‌ ಮಡಿ ಅತ್ಯಾಚಾರ ಮಾಡಲು ಬಿಡಲಾಗಿತ್ತು. ಅದರಂತೆ ಪೊಲೀಸರು 53 ಜನರ ವಿರುದ್ಧ ಪ್ರಕರಣ ದಾಖಲು ಮಾಡಿದ್ದರು.

Money Tips : ಮನೆಯ ಆರ್ಥಿಕ ಸಮಸ್ಯೆಗೆ ನಿಮ್ಮಲ್ಲಿರುವ ಈ ಅಭ್ಯಾಸಗಳೇ ಕಾರಣ !

ವಿಚಾರಣೆ ನಡೆಸಿದ ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಲಯ 53 ಮಂದಿಯಲ್ಲಿ ನಾಲ್ಕು ಜನರ ಮೇಲಿನ ಅಪರಾಧವನ್ನು ಸಾಬೀತು ಮಾಡಿದ್ದ ಕೋರ್ಟ್‌ ಉಳಿದ 49 ಮಂದಿಯನ್ನು ಪ್ರಕರಣದಿಂದ ಖುಲಾಸೆ ಮಾಡಿದೆ.

Tallest Statues: ವಿಶ್ವದ ಅತಿ ಎತ್ತರದ ಪ್ರತಿಮೆಗಳು ಎಲ್ಲಿವೆ? ಇಲ್ಲಿದೆ ಮಾಹಿತಿ

ಬಾಲಕಿ ತಾಯಿ, ಗೀತಾ, ಗಿರೀಶ್‌, ದೇವಿಶರಣ್‌ ಗೆ ತಲಾ 25 ಸಾವಿರ ದಂಡ ಮತ್ತು 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ್ದು, ಇನ್ನೋರ್ವ ಆರೋಪಿ ಅಭಿನಂದನ್‌ ಅಲಿಯಾಸ್‌ ಸ್ಮಾಲ್‌ ಅಭಿಗೆ 25 ಸಾವಿರ ದಂಡ ಮತ್ತು 22 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ನ್ಯಾಯಮೂರ್ತಿ ಶಾಂತಣ್ಣ ಆಳ್ವ ಅವರು ತೀರ್ಪು ನೀಡಿದ್ದಾರೆ.

Leave A Reply

Your email address will not be published.