Dakshina Kannada Loka Sabha Elections: ಯಾರಿಗೆ ಸಿಗಲಿದೆ ಬಿ-ಫಾರಂ!?

Share the Article

ರಾಜ್ಯ ಬಿಜೆಪಿಯ ನಿಕಟಪೂರ್ವ ಅಧ್ಯಕ್ಷರು ಸಂಸದರಾಗಿರುವ ಕ್ಷೇತ್ರ ದಕ್ಷಿಣ ಕನ್ನಡ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ 224 ಅಭ್ಯರ್ಥಿಗಳಿಗೆ ಬಿ-ಫಾರಂ ಹಸ್ತಾಂತರಿಸಿದ್ದವರು ನಳಿನ್ ಕುಮಾರ್ ಕಟೀಲ್. ಆದರೆ, ಪಾರ್ಲಿಮೆಂಟ್ ಅಖಾಡಕ್ಕೆ ಮತ್ತೊಮ್ಮೆ ಕಣಕ್ಕಿಳಿಯಲು ತಮಗೆ ಯಾವಾಗ ಬಿ-ಫಾರಂ ಸಿಗುತ್ತದೆ ಎಂದು ಕಾಯ್ದು ನೋಡುವ ಸ್ಥಿತಿ ಅವರದ್ದಾಗಿದೆ!

ಇದನ್ನೂ ಓದಿ: RTI ಕಾರ್ಯಕರ್ತನ ಕೊಲೆಗೆ ಸುಪಾರಿ; ಒಂಟಿಯಾಗಿ ತೆರಳುತ್ತಿದ್ದಾಗ ಹಲ್ಲೆ, ಆರೋಪಿಗಳ ಬಂಧನ

ದಕ್ಷಿಣ ಕನ್ನಡ ಬಿಜೆಪಿಯ ಭದ್ರಕೋಟೆಯೇನೋ ಹೌದು. ಈ ಬಾರಿ ಕಟೀಲ್‌ ಅವರಿಗೆ ಟಿಕೆಟ್ ಡೌಟು ಎಂಬ ಮಾತು ಬಹಳ ಹಿಂದೆಯೇ ಕೇಳಿ ಬಂದಿದೆ. ಹಾಗಾಗಿ, ಕೆಲ ಹೊಸಬರು ಆಸಕ್ತಿ ತೋರಿದ್ದಾರೆ. ಅಂಥವರಲ್ಲಿ

ಕ್ಯಾಪ್ಟನ್ ಬ್ರಿಜೇಶ್ ಚೌಟ ಪ್ರಮುಖರು. ಶಾಸಕ ಡಾ.ಭರತ್ ಶೆಟ್ಟಿ ಅವರನ್ನು ಕಣಕ್ಕಿಳಿಸಬೇಕು ಎಂಬ ಅಭಿಪ್ರಾಯ ಸ್ಥಳೀಯವಾಗಿದೆ. ಏನೇ ಲೆಕ್ಕಾಚಾರಗಳಿದ್ದರೂ ತಮಗೆ ಪುನಃ ಅವಕಾಶ ದೊರೆಯಲಿದೆ ಎಂಬ ಭರವಸೆಯಿಂದ ಕಟೀಲ್ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಕಾಂಗ್ರೆಸ್‌ನಲ್ಲಿ ಅಂತಹ ತುರಸು ಕಂಡು ಬಂದಿಲ್ಲ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಶಿಷ್ಯ ಮಿಥುನ್ ರೈ ಸ್ವಲ್ಪ ಮಟ್ಟಿಗೆ ಹೊಳಪು ಕಳೆದುಕೊಂಡಿದ್ದಾರೆ. ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರನ್ನು ಸ್ಪರ್ಧೆಗಿಳಿಸಲು ಪಕ್ಷ ಮನಸ್ಸು ಮಾಡಿದಂತಿದೆ. ವಕೀಲ ಪದ್ಮರಾಜ್ ಕೂಡ ಆಸಕ್ತರು.

Leave A Reply