Parliament Election: ಸುಮ್ಮನಿದ್ದೆನೆ ಎಂದ ಮಾತ್ರಕ್ಕೆ ಅದು ನನ್ನ ದೌರ್ಬಲ್ಯವಲ್ಲ : ಪಕ್ಷದ ನಾಯಕರಿಗೆ ಎಚ್ಚರಿಕೆ ನೀಡಿದ ಮಾಜಿ ಸಚಿವ ಬಿಸಿ ಪಾಟೀಲ್
ಲೋಕಸಭೆ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕಾವೇರುತ್ತಿದ್ದು ಇದೀಗ ಮಾಜಿ ಸಚಿವ ಬಿ. ಸಿ. ಪಾಟೀಲ್ ಹಾವೇರಿ-ಗದಗ ಲೋಕಸಭೆ ಟಿಕೆಟ್ ನನಗೇ ನೀಡಬೇಕು ಎಂದು ಪಟ್ಟಿ ಹಿಡಿದು ಕುಳಿತಿದ್ದಾರೆ.
ನಾವು ತ್ಯಾಗ ಮಾಡಿ ಬಂದವರು. ಈಗ ಮನೇಲಿ ಕುಳಿತುಕೊಂಡಿದ್ದೇವೆ. ನಮಗೆ ಹೆದರಿಸೋದು, ಬೆದರಿಸೋದು ಗೊತ್ತಿಲ್ಲ. ಆದರೆ, ಸೈಲೆಂಟ್ ಆಗಿ ಇದ್ದೇವೆ ಎಂದ ಮಾತ್ರಕ್ಕೆ ಅದು ದೌರ್ಬಲ್ಯ ಎಂದು ಯಾರೂ ಭಾವಿಸಕೂಡದು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ಹಿರೇಕೆರೂರಲ್ಲಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಈಗಾಗಲೇ ಮುಖ್ಯಮಂತ್ರಿಯಾಗಿದ್ದಾರೆ. ನಾನು ಹಾವೇರಿ-ಗದಗ ಜಿಲ್ಲೆಗಳ ಉಸ್ತುವಾರಿ ಆಗಿ ಕೆಲಸ ಮಾಡಿದ್ದೇನೆ. ಆದ್ದರಿಂದ ನನಗೇ ಟಿಕೆಟ್ ಕೊಡಬೇಕು ಎಂದು ಒತ್ತಾಯಿಸಿದರು.
ಈ ಬಗ್ಗೆ ಈಗಾಗಲೇ ವಿಜಯೇಂದ್ರ ಹಾಗೂ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದೇನೆ. ಕೆ.ಇ. ಕಾಂತೇಶ ಅವರ ಬಗ್ಗೆ ಮಾತನಾಡಲು ಹೋಗಲ್ಲ. ಅವರಿಗೂ ನನಗೂ ಸಂಬಂಧ ಇಲ್ಲ ಎಂದು ತಿಳಿಸಿದ್ದಾರೆ.
ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಒಬ್ಬೊಬ್ಬರೇ ಸದಸ್ಯರು ಎಡೆ ಬಿಚ್ಚಲು ಶುರುವಿಟ್ಟಿದ್ದಾರೆ.