ಟೇಕಾಫ್‌ ಆದ ಕೆಲವೇ ಕ್ಷಣಗಳಲ್ಲಿ ಕಳಚಿ ಬಿದ್ದ ವಿಮಾನದ ಟೈರ್, ಕಾರುಗಳ ನೆತ್ತಿಯ ಮೇಲೆ ಉದುರಿದ ಟೈರ್ !

Share the Article

San Francisco :ಸ್ಯಾನ್ ಫ್ರಾನ್ಸಿಸ್ಕೋದಿಂದ (San Francisco) ಜಪಾನ್‌ಗೆ (Japan) ಹೊರಟಿದ್ದ ಯುನೈಟೆಡ್ ಏರ್‌ಲೈನ್ಸ್ ಜೆಟ್‌ಲೈನರ್ ಸ್ಯಾನ್ ಫ್ರಾನ್ಸಿಸ್ಕೋದಿಂದ ಟೇಕಾಫ್‌ ಆದ ಕೆಲವೇ ನಿಮಿಷಗಳಲ್ಲಿ ವಿಮಾನದ ಟೈರ್‌ ಕಳಚಿ ಬಿದ್ದು ಆತಂಕ ಸೃಷ್ಟಿ ಮಾಡಿವೆ.

 

ವಿಮಾನ ಟೇಕಾಫ್‌ ಆದ ಕೆಲವೇ ಕ್ಷಣಗಳಲ್ಲಿ ಒಂದು ಟೈರ್‌ ಕಳಚಿ ಬೀಳುತ್ತಿರುವ ವೀಡಿಯೋ ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಟೇಕ್‌ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ತನ್ನ 6 ಟೈಯರ್‌ಗಳಲ್ಲಿ ಒಂದು ಕಳಚಿಕೊಂಡಿದೆ. ಹಾಗೆ ಕಳಚಿಕೊಂಡ ಟೈರ್ ಅಲ್ಲಿನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಕಾರುಗಳ ಮೇಲೆ ಬಿದ್ದಿದೆ. ತಕ್ಷಣ ಈ ವಿಮಾನವನ್ನು ಲಾಸ್ ಏಂಜಲೀಸ್‌ನಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲಾಗಿದೆ. ಉಳಿದ 5 ಟೈರ್ ಗಳು ಇದ್ದ ಕಾರಣದಿಂದ ವಿಮಾನ ಸೇಫ್ ಲ್ಯಾಂಡಿಂಗ್ ಆಗಿದೆ.

 

ವಿಮಾನದಲ್ಲಿ ಭರ್ತಿ 235 ಪ್ರಯಾಣಿಕರು ಮತ್ತು 14 ಸಿಬ್ಬಂದಿ ಇದ್ದರು. ಘಟನೆ ನಡೆದ ಕೂಡಲೇ ಅವರನ್ನು ಪ್ರಯಾಣಿಕರನ್ನು ಮತ್ತೊಂದು ವಿಮಾನಕ್ಕೆ ಸ್ಥಳಾಂತರಿಸಲಾಯಿತು ಎಂದು ಯುನೈಟೆಡ್ ತಿಳಿಸಿದೆ. ಹೀಗೆ ವಿಮಾನಗಳು ತನ್ನ ಟೈರ್‌ಗಳನ್ನು ಕಳೆದುಕೊಳ್ಳುವುದು ತೀರ ಅಪರೂಪದ ಘಟನೆಯಾಗಿದೆ ಎಂದು ವಾಯುಯಾನ ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ :Shobha Karandlaje On Loka Sabha Election: ಗೋಬ್ಯಾಕ್‌ ಶೋಭಕ್ಕ ಅಭಿಯಾನದಿಂದ ನನಗೆ ಲಾಭ ಎಂದ ಕರಂದ್ಲಾಜೆ

Leave A Reply