Narendra Modi Elephant Safari: ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ  ಆನೆ ಸಫಾರಿ ಮಾಡಿದ ಪ್ರಧಾನಿ ಮೋದಿ

Narendra Modi Elephant Safari: ಪ್ರಧಾನಿ ನರೇಂದ್ರ ಮೋದಿ(Narendra Modi)ಅವರು ಇಂದು ಬೆಳಿಗ್ಗೆ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಮತ್ತು ಹುಲಿ ಮೀಸಲು ಪ್ರದೇಶದಲ್ಲಿ ಆನೆ (Elephant Safari)ಮತ್ತು ಜೀಪ್ ಸಫಾರಿಯನ್ನು ಕೈಗೊಂಡಿದ್ದಾರೆ.

 

ಪ್ರಧಾನಿ ಮೋದಿ ಅವರು ಯುನೆಸ್ಕೋ ವಿಶ್ವ ಪರಂಪರೆಯ ತಾಣಕ್ಕೆ ತಮ್ಮ ಮೊದಲ ಭೇಟಿಯಲ್ಲಿ , ಮೊದಲು ಉದ್ಯಾನವನದ ಮಧ್ಯ ಕೊಹೋರಾ ಶ್ರೇಣಿಯ ಮಿಹಿಮುಖ್ ಪ್ರದೇಶದಲ್ಲಿ ಆನೆ ಸಫಾರಿಯನ್ನು ಕೈಗೊಂಡರು ಬಳಿಕ ಜೀಪ್ ನಲ್ಲಿ ಸಫಾರಿಯನ್ನು ಕೈಗೊಂಡಿದ್ದಾರೆ.

 

ಅವರು ಇಂದು ಮಧ್ಯಾಹ್ನ ಜೋರ್ಹತ್ನಲ್ಲಿ ಪ್ರಸಿದ್ಧ ಅಹೋಮ್ ಜನರಲ್ ಲಚಿತ್ ಬರ್ಫುಕನ್ ಅವರ 125 ಅಡಿ ಎತ್ತರದ ‘ಶೌರ್ಯದ ಪ್ರತಿಮೆ’ ಯನ್ನು ಉದ್ಘಾಟಿಸಲಿದ್ದಾರೆ. ನಂತರ ಪ್ರಧಾನಮಂತ್ರಿಯವರು ಜೋರ್ಹತ್ ಜಿಲ್ಲೆಯಲ್ಲಿರುವ ಮೆಲೆಂಗ್ ಮೆಟೆಲಿ ಪೋಥಾರ್ಗೆ ತೆರಳಲಿದ್ದು, ಅಲ್ಲಿ ಅವರು ಸುಮಾರು 18,000 ಕೋಟಿ ರೂಪಾಯಿ ಮೌಲ್ಯದ ಕೇಂದ್ರ ಮತ್ತು ರಾಜ್ಯ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಿದ್ದಾರೆ.

ಇದನ್ನೂ ಓದಿ : ವಿಶ್ವದ ಅತ್ಯಂತ ಹೆಚ್ಚು ವಿದ್ಯಾವಂತ ವ್ಯಕ್ತಿ ಈ ಭಾರತೀಯ,ಇವರ ದಾಖಲೆ ಮುರಿಯಲು ಯಾರಿಗೂ ಇಲ್ಲಿಯವರೆಗೂ ಸಾಧ್ಯವಾಗಿಲ್ಲ

Leave A Reply

Your email address will not be published.