Vitla Missing Case: ಎರಡು ಮಕ್ಕಳ ತಾಯಿ, ನಾಲ್ಕು ಮಕ್ಕಳ ತಂದೆಯೊಂದಿಗೆ ಪರಾರಿ? ವಿವಾಹ ನೋಂದಣಿ ಸಿದ್ಧತೆಯಲ್ಲಿದೆಯಾ ಜೋಡಿ?

Vitla Missing Case: ವಿಟ್ಲ ಪಟ್ನೂರು ಗ್ರಾಮದ ವಿವಾಹಿತ ಮಹಿಳೆಯೋರ್ವರು ಐದು ದಿನಗಳ ಹಿಂದೆ ಕಾಣೆಯಾಗಿರುವ (Vitla Missing Case)ಕುರಿತು ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಂಟ್ವಾಳ ನೋಂದಣಿ ಕಚೇರಿಯಲ್ಲಿ ವಿವಾಹಕ್ಕೆ ಸಿದ್ಧತೆ ನಡೆಯುತ್ತಿದೆ ಎಂಬ ಅನುಮಾನ ಈಗ ವ್ಯಕ್ತವಾಗಿದೆ.

ಪರ್ತಿಪ್ಪಾಡಿ ಗ್ರಾಮ ಚಾವಡಿ ನಿವಾಸಿ ಇಬ್ಬರು ಮಕ್ಕಳ ತಾಯಿ, ಸಜಿಪ ಮೂಲದ ನಾಲ್ಕು ಮಕ್ಕಳ ತಂದೆಯ ಜೊತೆಗೆ ಪಲಾಯನ ಮಾಡಿರುವುದಾಗಿ ಸಂಶಯ ವ್ಯಕ್ತವಾಗಿದೆ. ಮಹಿಳೆಯ ಪತಿ ನಿಧನ ಹೊಂದಿದ್ದು, ಆಕೆ ನಾಪತ್ತೆಯಾಗುತ್ತಿದ್ದಂತೆ ಪುತ್ರ ಠಾಣೆಗೆ ದೂರು ನೀಡಿದ್ದರು.

ನಾಪತ್ತೆ ಮಹಿಳೆಯ ಮೇಲೆ ವಶೀಕರಣ ಮಾಡಿದ್ದು, ಈ ರೀತಿಯಲ್ಲಿ ಆಕೆಯನ್ನು ಬಲೆಗೆ ಬೀಳಿಸಲಾಗಿದೆ ಎಂಬ ಆರೋಪ ಕೂಡಾ ವ್ಯಕ್ತವಾಗಿದೆ.

ಇದನ್ನೂ ಓದಿ : Most Educated Person: ವಿಶ್ವದ ಅತ್ಯಂತ ಹೆಚ್ಚು ವಿದ್ಯಾವಂತ ವ್ಯಕ್ತಿ ಈ ಭಾರತೀಯ; ಇವರ ದಾಖಲೆ ಮುರಿಯಲು ಯಾರಿಗೂ ಇಲ್ಲಿಯವರೆಗೂ ಸಾಧ್ಯವಾಗಿಲ್ಲ

Leave A Reply

Your email address will not be published.