Murder Case: ಡ್ಯಾನ್ಸ್‌ ಮಾಡುವಾಗ ಜಸ್ಟ್‌ ಟಚ್‌ ಆಗಿದ್ದಕ್ಕೆ, ನಡೆಯಿತು ಯುವಕನ ಬರ್ಬರ ಕೊಲೆ

Share the Article

Murder Case: ಡ್ಯಾನ್ಸ್‌ ಮಾಡುವಾಗ ಜಸ್ಟ್‌ ಟಚ್‌ ಆಗಿದ್ದಕ್ಕೆ ಓರ್ವ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆಯೊಂದು ಬ್ಯಾಟರಾಯನಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಯೋಗೇಶ್‌ (23 ವರ್ಷ) ಎಂಬಾತನೇ ಕೊಲೆಯಾದ ವ್ಯಕ್ತಿ.

ಯೋಗೇಶ್‌ ಬೈಕ್‌ ಸರ್ವಿಸ್‌ ಸೆಂಟರ್‌ನಲ್ಲಿ ವಾಷಿಂಗ್‌ ಕೆಲಸ ಮಾಡುತ್ತಿದ್ದ. ನಿನ್ನೆ ದೇವಸ್ಥಾನದ ಕಾರ್ಯಕ್ರಮದಲ್ಲಿ ನೃತ್ಯ ಮಾಡುವಾಗ ಟಚ್‌ ಆಗಿದ್ದಕ್ಕೆ ಸಣ್ಣದಾಗಿ ಕೊಲೆಯಾಗಿತ್ತು. ನಂತರ ಸ್ಥಳೀಯರು ಮಧ್ಯಸ್ಥಿಕೆ ಮಾಡಿ ಗಲಾಟೆಯನ್ನು ತಣ್ಣಗಾಗಿಸಿದ್ದರು. ಆದರೆ ಕಾರ್ಯಕ್ರಮ ಮುಗಿದ ನಂತರ ಯೋಗೇಶ್‌ನನ್ನು ನಾಲ್ವರು ಹಿಂಬಾಲಿಸಿಕೊಂಡು ಹೋಗಿದ್ದು, ಏಕಾಏಕಿ ದಾಳಿ ಮಾಡಿ ಚಾಕುವಿನಿಂದ ಯೋಗೀಶ್‌ಗೆ ಚುಚ್ಚಿದ್ದರು.
ಅವರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಮನೆಯೊಂದರ ಕಂಪೌಂಡ್‌ ಹಾರಿದ್ದ ಯೋಗೀಶ್‌ ಗಂಭೀರ ಗಾಯಗೊಂಡು ಮೃತ ಹೊಂದಿದ್ದ. ಗೋಡೆ ಹಾರುವಾಗ ಗೋಡೆಗೆ ಹಾಕಿದ್ದ ಗ್ಲಾಸ್‌ ಚೂರಿನಿಂದಲೇ ಮೃತಹೊಂದಿರಬಹುದು ಎಂದು ಸ್ಥಳೀಯರು ಅಂದಾಜು ಮಾಡಿದ್ದರು. ಆದರೆ ಪೊಲೀಸರು ತನಿಖೆ ಶುರುಮಾಡಿದಾಗ ಇದು ಆಕಸ್ಮಿಕ ಸಾವು ಅಲ್ಲ, ಹತ್ಯೆ ಎನ್ನುವುದು ಬೆಳಕಿಗೆ ಬಂದಿದೆ.

ಈ ಘಟನೆ ಸಂಬಂಧ ಬ್ಯಾಟರಾಯನಪುರ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.

 

Leave A Reply