Crime: ಗೆಳೆಯನನ್ನೇ ಮಜಾ ಮಾಡಲು ಒತ್ತಾಯ, ಒಪ್ಪದ ಸ್ನೇಹಿತನ ಹತ್ಯೆ, 9 ದಿನಗಳ ನಂತರ ಪತ್ತೆಯಾಯ್ತು ಪ್ರಕರಣ !

Share the Article

 

Crime: ಜೈಪುರ: ಜೈಪುರದಲ್ಲಿ ವಿಚಿತ್ರ ಕಾರಣಕ್ಕಾಗಿ ವ್ಯಕ್ತಿ ಒಬ್ಬನನ್ನು ಕೊಲೆ ಮಾಡಲಾಗಿದೆ. ಆ ವ್ಯಕ್ತಿಯು ಓರಲ್ ಸೆಕ್ಸ್ ಗೆ ನಿರಾಕರಿಸಿದ ಎನ್ನುವ ಕಾರಣಕ್ಕಾಗಿ 40 ವರ್ಷದ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿ ನೀರಿಲ್ಲದ ಗುಂಡಿಯೊಂದರಲ್ಲಿ ಬಿಸಾಡಿರುವ ಘಟನೆ ರಾಜಸ್ಥಾನದ (Rajasthan) ಬರಾನ್ ಜಿಲ್ಲೆಯಲ್ಲಿ ನಡೆದಿದೆ. ಕೊಲೆಯು 9 ದಿನಗಳ ಹಿಂದೆಯೇ ನಡೆದಿದ್ದು ಈಗ ಬೆಳಕಿಗೆ ಬಂದಿದೆ.

ಬಂಧಿತ ಆರೋಪಿಗಳನ್ನು ಮುರಳೀಧರ್ ಪ್ರಜಾಪತಿ (32) ಮತ್ತು ಸುರೇಂದ್ರ ಯಾದವ್ ಎಂದು ಗುರುತಿಸಲಾಗಿದೆ. ತನ್ನ ಸ್ನೇಹಿತನನ್ನೇ ಹತ್ಯೆಗೈದ ಇಬ್ಬರು ಆರೋಪಿಗಳ ಪೈಕಿ ಪ್ರಜಾಪತಿ ಎಂಬವನನ್ನು ಬಂಧಿಸಲಾಗಿದೆ. ಯಾದವ್ ಎಂಬಾತ ಬಂಧನದ ಭಯದಿಂದ ವಿಷ ಸೇವಿಸಿದ್ದು, ಆತನನ್ನ ಆಸ್ಪತ್ರೆಗೆ (Rajasthan Hospital) ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅಂದು ಗೆಳೆಯರೆಲ್ಲ ಸೇರಿ ಮಧ್ಯ ಸೇವಿಸಲು ಶುರು ಮಾಡಿದ್ದರು. ಯಾದವ್ ಮತ್ತು ಬೈರ್ವಾ ಒಟ್ಟಿಗೆ ಕಂಠ ಮಟ್ಟ ಕುಡಿದಿದ್ದರು. ನಂತರ ಎಲ್ಲರೂ ಪ್ರಜಾಪತಿಯ ಸಹೋದರಿಯನ್ನು ಭೇಟಿ ಮಾಡಲು ಹತ್ತಿರದ ಹಳ್ಳಿಗೆ ಹೋಗಿದ್ದಾರೆ. ಹಾಗೆ ಹೋಗಿ ವಾಪಸ್ ಬರುವಾಗ ತಮ್ಮೊಂದಿಗೆ ಓರಲ್ ಸೆಕ್ಸ್ ಮಾಡುವಂತೆ ಪ್ರಜಾಪತಿ ಮತ್ತು ಸುರೇಂದ್ರ ಯಾದವ್ ಬೈರ್ವನನ್ನ ಕೇಳಿಕೊಂಡಿದ್ದಾರೆ. ಅದಕ್ಕೆ ಬೈರ್ವ ಖಡಕ್ ಆಗಿ ನಿರಾಕರಿಸಿದ್ದಾನೆ. ಆಗ ಮದ್ಯ ಮತ್ತು ಸೆಕ್ಸ್ ನಿಂದ ಉನ್ಮತ್ತ ಗೆಳೆಯರು ಸ್ನೇಹಿತನನ್ನು ಹೊಡೆದು ಕೊಂದಿದ್ದಾರೆ. ಈ ಸಂಬಂಧ ಬರಾನ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply