Janina Prajeres : ತನ್ನನ್ನು ತಾನೇ ಮದುವೆಯಾದ ಮಾಡೆಲ್ – ಕೊಟ್ಟ ಕಾರಣ ಕೇಳಿದ್ರೆ ನಿಜಕ್ಕೂ ದಂಗಾಗ್ತೀರಾ!!
Janina Prajeresv ಮದುವೆ ಎಂಬುದು ಒಂದು ಗಂಡು ಹಾಗೂ ಹೆಣ್ಣು ಜೀವನ ಪರ್ಯಂತ ಒಂದಾಗಿರಲು ಬಂಧ ಬೆಸೆಯುವ ಒಂದು ಸುಮಧುರ ಗಳಿಗೆ. ಇಂದು ಕೆಲವರು ಮನೆಯವರ ಒಪ್ಪಿಗೆ ಮೇರೆಗೆ ಅವರು ತೋರಿದವರನ್ನು ಮದುವೆಯಾದರೆ ಕೆಲವರು ಪ್ರೀತಿಸಿ ಮದುವೆಯಾಗುವುದುಂಟು. ಈಗಿನ ದಿನಗಳಲ್ಲಿ ಒಂದು ಹೆಜ್ಜೆ ಮುಂದುವರಿದು ಸಲಿಂಗಿಗಳು ಮದುವೆಯಾಗುವುದನ್ನು ನೋಡಿದ್ದೇವೆ. ಆದರೆ ಇನ್ನೂ ಅಚ್ಚರಿ ಅಂದ್ರೆ ಈಗೀಗ ತಮನ್ನು ತಾವೇ ಮದುವೆಯಾಗುವಂತ ಟ್ರೆಂಡ್ ಒಂದು ಶುರುವಾಗಿಬಿಟ್ಟಿದೆ.
ಇದನ್ನೂ ಓದಿ: Bengaluru: ಬಿಸಿಲು ಖಾರ, ಆದರೂ ಮಳೆ ಕೊಯ್ಲು ಬಲು ಜೋರು: ಹವಾಮಾನ ಇಲಾಖೆ ವಿಶೇಷ ಮುನ್ಸೂಚನೆ !
ಕೆಲ ವರ್ಷಗಳಿಂದ ಕೆಲವು ಈ ರೀತಿಯ ವಿಚಿತ್ರ ಮದುವೆರನ್ನು ನಾವು ನೋಡಿದ್ದೇವೆ. ಅಂತೆಯೇ ಇದೀಗ ಇಂತದ್ದೇ ಮತ್ತೊಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಅದೇನೆಂದರೆ ಬ್ರೆಜಿಲಿಯನ್(Brazil)ಮೂಲದ ಮಾಡೆಲ್ ತನ್ನ ಮದುವೆ ವಿಷ್ಯದಲ್ಲಿ ಭಾರೀ ಸುದ್ದಿಯಲ್ಲಿದ್ದಾಳೆ. ಅತ್ಯಂತ ರೂಪದರ್ಶಿಯಾದ ಈಕೆ ತನ್ನನ್ನು ತಾನು ಮದುವೆ ಆಗಿದ್ದಾಳೆ.ಮದುವೆ ಆಗಿದ್ದಲ್ಲದೆ ಮಾಡೆಲ್ ತನಗೇ ತಾನು ದುಬಾರಿ ಬೆಲೆಯ ಉಡುಗೊರೆ ನೀಡಿದ್ದಾಳೆ. ತಾನೇಕೆ ಹೀಗೆ ಮಾಡಿದೆ ಎಂಬುದಕ್ಕೆ ಕಾರಣ ನೀಡಿದ್ದಾಳೆ. ರೂಪದರ್ಶಿ ಹೇಳಿದ ಕಾರಣ ಕೇಳಿದ ಜನ ಬೆರಗಾಗಿದ್ದಾರೆ.
ಹೌದು, 35ರ ವಯಸ್ಸಿನ ಈಕೆಯ ಹೆಸರು ಜನಿನಾ ಪ್ರಜೆರೆಸ್(Janina Prajeres), ಈಕೆ ಮೂಲತಃ ಬ್ರೆಜಿಲಿಯನ್ ಮೂಲದವಳು. ತನ್ನ ಸೌಂದರ್ಯದಿಂದಲೇ ಲಕ್ಷಾಂತರ ಮಂದಿ ಮನಸ್ಸು ಗೆದ್ದಿದ್ದಾಳೆ. ಪ್ಲೇಬಾಯ್ (Playboy) ವೆಬ್ಸೈಟ್ ನಲ್ಲಿ ಈಕೆ ಸಾಕಷ್ಟು ಪ್ರಸಿದ್ಧಿ ಪಡೆದಿದ್ದಾಳೆ. ಆದಷ್ಟು ಸ್ವತಂತ್ರವಾಗಿ ಜೀವನ ನಡೆಸುವ ಆಲೋಚನೆಯಲ್ಲಿರುತ್ತಾಳೆ. ಜನೈನಾ ಪ್ರಜೆರೆಸ್ ಸ್ವತಂತ್ರವಾಗಿರಲು ಬಯಸುವ ಮಾಡೆಲ್. ಆಕೆಗೆ ಬೇರೆಯವರ ಇಷ್ಟದಂತೆ ಇರಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಜನೈನಾ ಪ್ರಜೆರೆಸ್ ತನ್ನನ್ನು ತಾನು ಮದುವೆಯಾಗಿದ್ದಾಳೆ. ಜನೈನಾ ಪ್ರಜೆರೆಸ್ ಬರೀ ಮದುವೆ ಆಗಿದ್ದು ಮಾತ್ರವಲ್ಲ ತನಗೆ ತಾನೇ 67 ಲಕ್ಷ ರೂಪಾಯಿ ಮೌಲ್ಯದ ಉಂಗುರವನ್ನು ಉಡುಗೊರೆಯಾಗಿ ನೀಡಿದ್ದಾಳೆ ಮಾಡೆಲ್.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಆಕೆ ತನ್ನನ್ನು ತಾನೇ ಮದುವೆಯಾಗಿದ್ದರಿಂದ ಈ ಸಂಬಂಧದಲ್ಲಿ ನನಗೆ ದ್ರೋಹ ಮಾಡುವ ಸಾಧ್ಯತೆಯಿಲ್ಲ. ಏಕೆಂದರೆ ನನಗೆ ಏನು ನೋವುಂಟುಮಾಡುತ್ತದೆ ಮತ್ತು ನನಗೆ ಬೇಕಾದುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ ಇದರಿಂದ ಸಂಸಾರದ ವಿಷಯಗಳಲ್ಲಿ ಸಮಸ್ಯೆ ಬರುವುದಿಲ್ಲ ಎಂದು ಭಾವಿಸುತ್ತೇನೆ ಎಂದು ಬಹಳ ವಿವರವಾಗಿ ಹೇಳಿಕೊಂಡಿದ್ದಾಳೆ.