Bengaluru: ಬಿಸಿಲು ಖಾರ, ಆದರೂ ಮಳೆ ಕೊಯ್ಲು ಬಲು ಜೋರು: ಹವಾಮಾನ ಇಲಾಖೆ ವಿಶೇಷ ಮುನ್ಸೂಚನೆ !

ಬೆಂಗಳೂರು: ಹವಾಮಾನ ಇಲಾಖೆ ಬಿಸಿಲು ಮಳೆ ಬಗ್ಗೆ ಮಹತ್ವದ ಮಾಹಿತಿ ನೀಡಿದೆ. ಕರ್ನಾಟಕ ರಾಜ್ಯದಲ್ಲಿ ಈ ಬೇಸಿಗೆಯಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ದಾಖಲಾಗುವ ಸಾಧ್ಯತೆಯಿದೆ. ಮಾರ್ಚ್ ನಿಂದ ಮೇ ತನಕ ರಾಜ್ಯದ ಉತ್ತರ ಒಳಭಾಗಗಳಲ್ಲಿ ವಿಪರೀತ ಶಾಖವು ಹೆಚ್ಚಿರುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ವರದಿ ನೀಡಿದೆ.

ಇದನ್ನೂ ಓದಿ: Bidar: ಲಿಂಗಾಯತ ಸ್ವತಂತ್ರ ಧರ್ಮ ಅಂತ ಮುದ್ರೆ ಒತ್ತಿದ ಏಕೈಕ ವೀರ, ಧೀರ, ಶರಣ ಸಿದ್ದರಾಮಯ್ಯ: ಬಸವಕಲ್ಯಾಣದಲ್ಲಿ ಬಸವಲಿಂಗ ಶ್ರೀ ಬಹುಪರಾಕ್ !

ಹೀಗಿದ್ದರೂ ಮಾರ್ಚ್‌ನಲ್ಲಿ ಗರಿಷ್ಠ ತಾಪಮಾನವು 35 ಡಿಗ್ರಿ ಸೆಂಟಿಗ್ರೇಡ್ ದಾಟದೆ ಇರಬಹುದು. ಜತೆಗೆ ಮಾರ್ಚ್ ತಿಂಗಳಲ್ಲಿ ಅಲ್ಲಲ್ಲಿ ಸಾಮಾನ್ಯವಾಗಿ ಮಳೆಯಾಗುವ ಸಾಧ್ಯತೆ ಇದೆ. ಸುಡುವ ಶಾಖದಿಂದ ರಾಜ್ಯದ ಕೆಲ ಭಾಗಗಳಲ್ಲಿ ಜನರಿಗೆ ಇದು ಇನಿತು ವಿರಾಮ ನೀಡುತ್ತದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

 

ಹಳೆಯ ದಾಖಲೆಗಳ ಪ್ರಕಾರ, ಬೆಂಗಳೂರಿನಲ್ಲಿ 2005ರ ಫೆಬ್ರವರಿಯಲ್ಲಿ ಗರಿಷ್ಠ ತಾಪಮಾನ 35.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. 2016, 2017, 2018 ಮತ್ತು 2019ರಲ್ಲಿ, ಫೆಬ್ರವರಿಯಲ್ಲಿ ಗರಿಷ್ಠ ತಾಪಮಾನ 35.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಆದರೆ ಈ ವರ್ಷ ಫೆಬ್ರವರಿಯಲ್ಲಿ 34.5 ಡಿಗ್ರಿ ಮಾತ್ರ ಸೆಲ್ಸಿಯಸ್ ದಾಖಲಾಗಿದೆ.

 

ಕಳೆದ ಮಂಗಳವಾರ ಬೆಂಗಳೂರಿನಲ್ಲಿ 36 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಇದು ಈ ವರ್ಷದ ಅತ್ಯಂತ ಹೆಚ್ಚು ತಾಪಮಾನದ ದಿನವಾಗಿದೆ. ಮಾರ್ಚ್ 2017ರಲ್ಲಿ, ಆ ತಿಂಗಳ ನಾಲ್ಕನೇ ವಾರದಲ್ಲಿ 37.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿತ್ತು. 2019ರಲ್ಲಿ, ಮಾರ್ಚ್ 8 ರಂದು 37.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿತ್ತು.

ಮುಖ್ಯವಾಗಿ ಈ ಎಲ್ ನಿನೋ ಪರಿಸ್ಥಿತಿಯಿಂದಾಗಿ ಈ ಬಾರಿ ಬೇಸಿಗೆಯ ಆರಂಭದಲ್ಲಿ ನಡುಬೇಸಿಗೆಯಂತಹ ಪರಿಸ್ಥಿತಿಯನ್ನು ಹೊಂದಿದ್ದೇವೆ. ಈ ವರ್ಷ ಬೇಸಿಗೆಯಲ್ಲಿ ಬಿಸಿಲಿನ ಝಳ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಈ ತಾಪಮಾನ ಹೆಚ್ಚಳಕ್ಕೆ ಹಲವಾರು ಕಾರಣಗಳಿವೆ. ಅದರಲ್ಲೊಂದು ಎಲ್ ನಿನೋ ಪರಿಣಾಮ ಸಹ. ಮುಂದಿನ ತಿಂಗಳುಗಳಲ್ಲಿ ಎಲ್ ನಿನೋ ಸಾಕಷ್ಟು ದುರ್ಬಲಗೊಳ್ಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ಹಂಚಿಕೊಂಡಿದೆ.

Leave A Reply

Your email address will not be published.