Bidar: ಲಿಂಗಾಯತ ಸ್ವತಂತ್ರ ಧರ್ಮ ಅಂತ ಮುದ್ರೆ ಒತ್ತಿದ ಏಕೈಕ ವೀರ, ಧೀರ, ಶರಣ ಸಿದ್ದರಾಮಯ್ಯ: ಬಸವಕಲ್ಯಾಣದಲ್ಲಿ ಬಸವಲಿಂಗ ಶ್ರೀ ಬಹುಪರಾಕ್ !
ಬೀದರ್: ವಿಶ್ವಗುರು ಬಸವಣ್ಣನನ್ನು (Basavanna) ಕನ್ನಡದ ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಅಭಿನಂದನೆ ಸಲ್ಲಿಸಲಾಯಿತು. ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮ ಎಂದು ಮುದ್ರೆಯೊತ್ತಿದ ಏಕೈಕ ವೀರ, ಧೀರ, ಶರಣ ಯಾರಾದರೂ ಇದ್ದರೆ, ಅದು ಸಿದ್ದರಾಮಯ್ಯ ( CM Siddaramaiah) ಎಂದು ಭಾಲ್ಕಿಯ ಹೀರೆಮಠ ಸಂಸ್ಥಾನದ ಪೀಠಾಧಿಪತಿ ಬಸವಲಿಂಗ ಪಟ್ಟದೇವರು (Basavalinga Pattadevaru) ಸಿದ್ದರಾಮಯ್ಯನವರನ್ನು ಹೊಗಳಿದ್ದಾರೆ.
ಇದನ್ನೂ ಓದಿ: Interesting fact: ಹೈವೆಗಳ ಡಿವೈಡರ್ ಮೇಲೆ ಇದೊಂದು ಹೂವಿನ ಗಿಡವನ್ನು ಮಾತ್ರ ಬೆಳೆಯೋದೇಕೆ?! ಇಲ್ಲಿದೆ ನೋಡಿ ಅಚ್ಚರಿ ಸಂಗತಿ!!
ಸರ್ಕಾರವು ವಿಶ್ವಗುರು ಬಸವಣ್ಣನನ್ನು (Basavanna) ಕನ್ನಡದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಬಸವಣ್ಣನ ಕರ್ಮಭೂಮಿ ಕಲ್ಯಾಣದಲ್ಲಿ ಸಿಎಂ ಸಿದ್ದರಾಮಯ್ಯಗೆ ವಿಶ್ವ ಬಸವ ಧರ್ಮ ಟ್ರಸ್ಟ್, ಅನುಭವ ಮಂಟಪ, ಅಖಿಲ ಭಾರತೀಯ ವೀರಶೈವ- ಲಿಂಗಾಯತ ಮಹಾಸಭಾ ಹಾಗೂ ವಿವಿಧ ಮಠಾಧಿಪತಿಗಳ ಒಕ್ಕೂಟಗಳಿಂದ ಪುಷ್ಪಾರ್ಚನೆ ಸಲ್ಲಿಸಲಾಯಿತು. ತನ್ಮೂಲಕ ಸಿಎಂ ಸಿದ್ದರಾಮಯ್ಯಗೆ ವಿಶೇಷ ಸನ್ಮಾನ ಮಾಡಲಾಗಿದೆ.
ಮೃತ್ಯುಂಜಯ ಸ್ವಾಮೀಜಿ, ಕೂಡಲಸಂಗಮ ಮಾತೆ, ಬಸವಲಿಂಗ ಪಟ್ಟದ್ದೆವರು, ಹಾರಕೋಡ್ ಶ್ರೀಗಳು, ತಡೋಳ್ ಶ್ರೀಗಳ ಜತೆಗೆ ಸಚಿವರಾದ ಎಂ.ಬಿ ಪಾಟೀಲ್ (MB Patil), ಈಶ್ವರ್ ಖಂಡ್ರೆ, ರಹೀಂ ಖಾನ್, ಶಾಮನೂರು ಶಿವಶಂಕರಪ್ಪ ಮುಂತಾದವರು ಸಿಎಂಗೆ ಪುಷ್ಪಾರ್ಚನೆ ಸಲ್ಲಿಸಿದರು. ಬಸವಕಲ್ಯಾಣದ ಮೈದಾನದಲ್ಲಿ ಸಿಎಂ ಸಿದ್ದರಾಮಯ್ಯಗೆ ಅಭಿನಂದನಾ ಸಮಾರಂಭ ನಡೆಯಿತು. ವಿವಿಧ ಮಠಾಧೀಶರು, ಕಾಂಗ್ರೆಸ್ ಮುಖಂಡರು, ಬಸವಣ್ಣನ ಅನುಯಾಯಿಗಳು ಸಮಾರಂಭದಲ್ಲಿ ಭಾಗಿಯಾಗಿದ್ದರು.
ಈ ಸಂದರ್ಭ ಸಿದ್ದರಾಮಯ್ಯನವರನ್ನು ಹಾಡಿ ಹೊಗಳಲಾಯಿತು. ಇದೇ ಬಸವ ಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯ ನಿರ್ಮಾಣ ಮಾಡಬೇಕು, ಅನುಭವ ಮಂಟಪಕ್ಕೆ ಜೀವಂತಿಕೆ ತುಂಬಲು ವಚನ ವಿಶ್ವವಿದ್ಯಾಲಯ ಬೇಕೆ ಬೇಕು ಎಂದು ಪಟ್ಟು ಹಿಡಿದು ಆಗ್ರಹಿಸಲಾಗಿದೆ. ಸಮಾರಂಭವಾದ ಬಳಿಕ ದಾಸೋಹ ಭವನ ಉದ್ಘಾಟನೆ ಮಾಡಿದ ಸಿದ್ದರಾಮಯ್ಯ, ಬಳಿಕ ನೂತನ ಅನುಭವ ಮಂಟಪ ಕಾಮಗಾರಿ ವೀಕ್ಷಣೆ ಮಾಡಿ ಕಾಲ ಮಿತಿಯಲ್ಲಿ ಕಾಮಗಾರಿ ಮುಗಿಸುವಂತ್ತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.