Bangalore: ಪಾಕ್‌ ಪರ ಘೋಷಣೆ ಕೂಗಿದ್ದ ಮುನಾವರ್‌ ಐಎಎಸ್‌ ಅಧಿಕಾರಿಯ ಬಾಡಿಗೆ ಮನೆಯಲ್ಲಿದ್ದ

Share the Article

Bangalore: ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿ ಪಾಕ್‌ ಪ್ರೇಮ ಮೆರೆದ ಮುನಾವರ್‌ ಅಹಮದ್‌ ಐಎಎಸ್‌ ಅಧಿಕಾರಿಯ ಮನೆಯಲ್ಲಿ ಬಾಡಿಗೆಗಿದ್ದ ಎನ್ನುವ ಕುರಿತು ವರದಿಯಾಗಿದೆ.

ಜೆ.ಸಿ.ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬರುವ ಈ ಬಾಡಿಗೆ ಮನೆಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುನಾವರ್‌ ಬಂಧನದ ಬೆನ್ನಲ್ಲೇ ಆತನ ಕುಟುಂಬಸ್ಥರು ಮನೆಗೆ ಬೀಗ ಹಾಕಿ ತೆರಳಿದ್ದಾರೆ.

ಇದನ್ನು ಓದಿ: Tamilnadu: ಮಾಜಿ ಸಿಎಂ ಜಯಲಲಿತಾ ಆಸ್ತಿ ಪ್ರಕರಣ; ಚಿನ್ನಾಭರಣ ಹಸ್ತಾಂತರ ಮಾಡುವ ಪ್ರಕ್ರಿಯೆಗೆ ಹೈಕೋರ್ಟ್ ಮಧ್ಯಂತರ ತಡೆ 

ಕಾಂಗ್ರೆಸ್ಸಿನ ನಾಸೀರ್‌ ಹುಸೇನ್‌ ಬೆಂಬಲಿಗರಾದ ಬ್ಯಾಡಗಿಯ ಮೊಹಮ್ಮದ್‌ ಶಾಫಿ ನಾಶಿಪುಡಿ, ಬೆಂಗಳೂರಿನ ಮುನಾವರ್‌ ಅಹ್ಮದ್‌, ದೆಹಲಿಯ ಮೊಹಮ್ಮದ್‌ ಇಲ್ತಾಜ್‌ ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಘೋಷಣೆ ಕೂಗಿದ್ದರು. ಬಂಧಿತ ಮೂವರ ಪೈಕಿ ನಾಶೀಪುರಿ, ಮುನಾರ್‌ ಸ್ನೇಹಿತರು, ಮುಹಮ್ಮದ್‌ ಇಲ್ತಾಜ್‌ ಗೆ ಇಬ್ಬರು ಆರೋಪಿಗಳ ಪರಿಚಯವಿಲ್ಲ. ಬಂಧಿತ ಮೂವರ ಮೊಬೈಲನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ಪೊಲೀಸರು ಇದೀಗ ಮುಂದಾಗಿದ್ದಾರೆ.

Leave A Reply