Shivaram Hebbar: ಸಿಎಂ, ಡಿಸಿಎಂಗೆ ಭರ್ಜರಿ ಸ್ವಾಗತ ಕೋರಿ ಫ್ಲೆಕ್ಸ್‌ ಹಾಕಿದ ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್‌

Shivaram Hebbar: ರಾಜ್ಯಸಭಾ ಚುನಾವಣೆ ಮತದಾನಕ್ಕೆ ಗೈರಾಗಿದ್ದ, ಯಲ್ಲಾಪುರ ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್‌ ಅವರು, ಇದೀಗ ಕದಂಬೋತ್ಸವ ಹಿನ್ನೆಲೆಯಲ್ಲಿ ಫ್ಲೆಕ್ಸ್‌ವೊಂದನ್ನು ಹಾಕಿದ್ದು, ಅದರಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ಗೆ ಭರ್ಜರಿ ಸ್ವಾಗತ ಕೋರಿರುವ ಘಟನೆ ನಡೆದಿದೆ. ಬನವಾಸಿಯಾದ್ಯಂತ ಈ ಫ್ಲೆಕ್ಸ್‌ ಕಂಡು ಬಂದಿದೆ.

 

ರಾಜ್ಯಸಭಾ ಚುನಾವಣೆ ಇತ್ತೀಚೆಗೆ ನಡೆದಿತ್ತು. ಇದರಲ್ಲಿ ಯಶವಂತಪುರ ಬಿಜೆಪಿ ಶಾಸಕ ಎಸ್‌.ಟಿ. ಸೋಮಶೇಖರ್‌ ಅಡ್ಡಮತದಾನ ಮಾಡಿದ್ದು, ಜತೆಗೆ ಶಾಸಕ ಶಿವರಾಂ ಹೆಬ್ಬಾರ್ ಅವರು ಅನಾರೋಗ್ಯವೆಂದು ಮತದಾನಕ್ಕೆ ಗೈರಾಗಿದ್ದರು. ಇದು ಬಿಜೆಪಿಗೆ ಆಘಾತವನ್ನು ತಂದಿತ್ತು. ಹೀಗಾಗಿ ಈ ಇಬ್ಬರು ಶಾಸಕರ ವಿರುದ್ಧ ಬಿಜೆಪಿ ನಾಯಕರು ಕಿಡಿಕಾರಿದ್ದರು. ಇದರ ಬೆನ್ನಲ್ಲೇ ಸಿಎಂ ಮತ್ತು ಡಿಸಿಎಂ ಅವರಿಗೆ ಫ್ಲೆಕ್ಸ್‌ಗಳ ಮೂಲಕ ಶಾಸಕ ಶಿವರಾಮ್‌ ಹೆಬ್ಬಾರ್ ಸ್ವಾಗತ ಕೋರಿದ್ದಾರೆ.

Leave A Reply

Your email address will not be published.