Home Education Guest Lecture: ಅತಿಥಿ ಉಪನ್ಯಾಸಕರ ಗೌರವಧನ ಹೆಚ್ಚಳ; ಜ.1 ರಿಂದಲೇ ಅನ್ವಯ

Guest Lecture: ಅತಿಥಿ ಉಪನ್ಯಾಸಕರ ಗೌರವಧನ ಹೆಚ್ಚಳ; ಜ.1 ರಿಂದಲೇ ಅನ್ವಯ

Guest Lecture

Hindu neighbor gifts plot of land

Hindu neighbour gifts land to Muslim journalist

ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಿರುವ ರಾಜ್ಯ ಸರಕಾರ, ಜ. 1ರಿಂದಲೇ ಜಾರಿಗೆ ಬರುವಂತೆ ಗೌರವಧನ ಹೆಚ್ಚಿಸಿ ಆದೇಶ ಹೊರಡಿಸಿದೆ.

ಇದನ್ನೂ ಓದಿ: JP Nadda: ಕೆಲವೇ ದಿನಗಳ ಹಿಂದೆ ರಾಜ್ಯಸಭೆಗೆ ಆಯ್ಕೆಯಾಗಿದ್ದ ಜೆಪಿ ನಡ್ಡಾ ಸಂಸದ ಸ್ಥಾನಕ್ಕೆ ದಿಢೀರ್ ರಾಜೀನಾಮೆ !! ಅಚ್ಚರಿ ಮೂಡಿಸಿದ ಬಿಜೆಪಿ ಅಧ್ಯಕ್ಷರ ನಡೆ

ಕನಿಷ್ಠ 5 ಸಾವಿರ ರೂ. ಗಳಿಂದ ಗರಿಷ್ಠತಿ ಸಾವಿರ ರೂ. ಹಾಗೂ 5 ಲಕ್ಷ ರೂ. ಆರೋಗ್ಯ ವಿಮೆ ಮತ್ತು 60 ವರ್ಷ ತುಂಬಿದ ಅತಿಥಿ ಉಪನ್ಯಾಸಕರಿಗೆ ವಾರ್ಷಿಕ 50 ಸಾವಿರ ರೂ.ಗಳಂತೆ ಗರಿಷ್ಠ 5 ಲಕ್ಷ ರೂ.ಗಳ ಇಡಿಗಂಟು ನೀಡುವುದಾಗಿ ಉನ್ನತ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಪ್ರಸ್ತುತ ವಿದ್ಯಾರ್ಹತೆ ಮತ್ತು ಸೇವಾವಧಿ ಆಧಾರದ ಅತಿಥಿ ಉಪನ್ಯಾಸಕರ ಗೌರವಧನ 26 ಸಾವಿರದಿಂದ 32 ಸಾವಿರ ರೂ.ವರೆಗೆ ಇದೆ. ಇದನ್ನು ಪರಿಷ್ಕರಿಸಲಾಗಿದ್ದು, ಕ್ರಮವಾಗಿ 5 ಸಾವಿರ, 6 ಸಾವಿರ, 7 ಸಾವಿರ ಮತ್ತು 8 ಸಾವಿರಕ್ಕೆ ಹೆಚ್ಚಿಸಲಾಗಿದೆ.

ಸದ್ಯ 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಸೇವೆ ಸಲ್ಲಿಸಿ ಮತ್ತು ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರುವವರಿಗೆ 32 ಸಾವಿರ ರೂ., 5 ವರ್ಷಕ್ಕಿಂತ ಕಡಿಮೆ ಸೇವಾವಧಿ ಮತ್ತು ಯುಜಿಸಿ ವಿದ್ಯಾರ್ಹತೆ ಹೊಂದಿರುವವರಿಗೆ 30 ಸಾವಿರ ರೂ. ಗೌರವಧನವಿದೆ. 5 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಸೇವೆ ಸಲ್ಲಿಸಿದ ಮತ್ತು ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದವರಿಗೆ 28 ಸಾವಿರ ರೂ., 5 ವರ್ಷಕ್ಕಿಂತ ಕಡಿಮೆ ಸೇವಾವಧಿ ಮತ್ತು ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದವರಿಗೆ 26 ಸಾವಿರ ರೂ. ಗೌರವಧನವಿದೆ. ಇದನ್ನು ಪರಿಷ್ಕರಿಸಲಾಗಿದೆ. 5 ವರ್ಷಕ್ಕಿಂತ ಕಡಿಮೆ ಸೇವೆ ಮತ್ತು ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರುವವರಿಗೆ 35 ಸಾವಿರ

ಆರೋಗ್ಯ ವಿಮೆ: ಅತಿಥಿ ಉಪನ್ಯಾಸಕರ ಆರೋಗ್ಯದ ದೃಷ್ಟಿಯಿಂದ ವಾರ್ಷಿಕ 5 ಲಕ್ಷ ರೂ.ಗಳ ಆರೋಗ್ಯ ವಿಮೆ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ. ಉಪನ್ಯಾಸಕರಿಂದ ಮಾಸಿಕ 400 ರೂ.ಗಳ ವಂತಿಕೆ ಕಟಾಯಿಸಿ ಇದಕ್ಕೆ ಸರಕಾರದ ವತಿಯಿಂದ 400 ರೂ. ಸೇರಿಸಿ ಒಟ್ಟು 800 ರೂ.ಗಳನ್ನು ಆರೋಗ್ಯ ವಿಮೆಗೆ ಪಾವತಿಸಲು ಉದ್ದೇಶಿಸಿದೆ.

ಇಡುಗಂಟು: ಹಾಗೆಯೇ 60 ವರ್ಷ ಮೇಲ್ಪಟ್ಟನಂತರ

ಅವರಿಗೆ ಭದ್ರತಾ ರೂಪದಲ್ಲಿ ವಾರ್ಷಿಕ 50 ಸಾವಿರ ರೂ. ಗಳಂತೆ ಗರಿಷ್ಠ 5 ಲಕ್ಷ ರೂ.ಗಳ ಮೊತ್ತದ ಇಡುಗಂಟು ಮೊತ್ತವಾಗಿ ಮಂಜೂರು ಮಾಡುವಂತೆ ಆದೇಶದಲ್ಲಿ ತಿಳಿಸಿದೆ. ಈ ಸೌಲಭ್ಯಗಳು 2024ರ ಜನವರಿ 1ರಿಂದಲೇ ಜಾರಿಯಾಗಲಿವೆ ಎಂದು ಆದೇಶದಲ್ಲಿ ತಿಳಿಸಿದೆ.

ರೂ. 5 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿರುವ ಮತ್ತು ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದವರಿಗೆ 31 ಸಾವಿರ ರೂ., 5 ವರ್ಷಕ್ಕಿಂತ 10 ವರ್ಷಗಳ ಸೇವೆ ಸಲ್ಲಿಸಿರುವವರಿಗೆ ಮತ್ತು ಯುಜಿಸಿ ವಿದ್ಯಾರ್ಹತೆ ಹೊಂದಿರುವವರಿಗೆ 38 ಸಾವಿರ ರೂ., 5 ವರ್ಷದಿಂದ 10 ವರ್ಷ ಸೇವೆ ಮತ್ತು ಯುಜಿಸಿ ವಿದ್ಯಾರ್ಹತೆ ಹೊಂದಿಲ್ಲದವರಿಗೆ 34 ಸಾವಿರ ರೂ.. 10 ರಿಂದ 15 ವರ್ಷ ಸೇವೆ ಸಲ್ಲಿಸಿ ಮತ್ತು ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆಯವರಿಗೆ 39 ಸಾವಿರ ರೂ., ಯುಜಿಸಿ ನಿಗದಿಪ ಡಿಸಿದ ವಿದ್ಯಾರ್ಹತೆ ಇಲ್ಲದವರಿಗೆ 35 ಸಾವಿರ ರೂ., 15 ವರ್ಷ ಕ್ಕಿಂತ ಹೆಚ್ಚಿನ ಸೇವಾವಧಿ ಮತ್ತು ಯುಜಿಸಿ ವಿದ್ಯಾರ್ಹತೆ ಹೊಂದಿ ರುವವರಿಗೆ 40 ಸಾವಿರ ರೂ. ಮತ್ತು ಯುಜಿಸಿ ವಿದ್ಯಾರ್ಹತೆ ಹೊಂದಿಲ್ಲದವರಿಗೆ 36 ಸಾವಿರ ರೂ.ಗೆ ಹೆಚ್ಚಿಸಿ ಆದೇಶಿಸಿದೆ.