Home Crime Soujanya Case: ನಮ್ಮ ಜಿಲ್ಲೆಯ ಎಂಪಿಗಳಿಗೆ ಕೂಡಾ ಸೌಜನ್ಯ ಸತ್ತಿರುವ ವಿಷಯ ಗೊತ್ತಿಲ್ಲ-ಮಹೇಶ್‌ ಶೆಟ್ಟಿ ತಿಮರೋಡಿ

Soujanya Case: ನಮ್ಮ ಜಿಲ್ಲೆಯ ಎಂಪಿಗಳಿಗೆ ಕೂಡಾ ಸೌಜನ್ಯ ಸತ್ತಿರುವ ವಿಷಯ ಗೊತ್ತಿಲ್ಲ-ಮಹೇಶ್‌ ಶೆಟ್ಟಿ ತಿಮರೋಡಿ

Soujanya Case

Hindu neighbor gifts plot of land

Hindu neighbour gifts land to Muslim journalist

ದಕ್ಷಿಣ ಕನ್ನಡ: ಸೌಜನ್ಯ ಹೋರಾಟ ದೆಹಲಿ ತಲುಪಿದ್ದು, ಅಲ್ಲಿ ಸೌಜನ್ಯ ಹೋರಾಟಗಾರರನ್ನು ಬಂಧನ ಮಾಡಿ, ಅನಂತರ ಕಳುಹಿಸಿದ್ದು, ಹೊರಗೆ ಬಂದ ನಂತರ ಮಹೇಶ್‌ ಶೆಟ್ಟಿ ತಿಮರೋಡಿ ಅವರು ಅಲ್ಲಿ ನಡೆದ ಕೆಲವೊಂದು ಘಟನೆಗಳ ಕುರಿತು ಮಾಧ್ಯಮದ ಮುಂದೆ ಈ ರೀತಿ ಮಾತನಾಡಿದ್ದಾರೆ.

ಇದನ್ನೂ ಓದಿ: Panambur Beach: ಪಣಂಬೂರು ಬೀಚಿನಲ್ಲಿ ಮೂವರು ಸಮುದ್ರಪಾಲು; ಓರ್ವ ರಕ್ಷಣೆ

ಎರಡು ದಿನ ಅಲ್ಲ, ಇನ್ನು ಇದು ಎಷ್ಟು ದಿವಸ ಇರುತ್ತೇವೆ ಗೊತ್ತಿಲ್ಲ. ದೆಹಲಿಯಲ್ಲಿ ವಿಪರೀತ ಚಳಿ ಇದೆ. ಮೈನಸ್‌ ಇದೆ. ಇದೆಲ್ಲ ಬದಿಗಿಟ್ಟು ಬಂದವರು. ಮೈನಸ್‌ ಇರಲಿ ಜೀರೋ ಇರಲಿ ಯಾವುದೂ ಇದೆಲ್ಲ ಲೆಕ್ಕ ಇಲ್ಲ. ಮಟ್ಟಣ್ಣನವರ್‌ ಹೇಳಿದ ಹಾಗೆ ನೀರಿನಲ್ಲಿ ಬಿದ್ದವನಿಗೆ ಚಳಿ ಇಲ್ಲ ಎಂದ ಹಾಗೆ, ನೀರಿನಲ್ಲಿ ಬಿದ್ದಾಗಿದಾಗಿದೆ ನಾವು, ಇನ್ನು ಚಳಿಯಾ, ಸೆಕೆಯಾ, ರೋಗವಾ ಇನ್ನು ಹೋರಾಟ ಮಾಡುವುದೇ ಎಂದು ಮಹೇಶ್‌ ಶೆಟ್ಟಿ ತಿಮರೋಡಿ ಹೇಳಿದರು.

ಪ್ರಜಾಪ್ರಭುತ್ವ ವೇದಿಕೆ, ರಾಷ್ಟ್ರೀಯ ಜಾಗರಣಾ ವೇದಿಕೆಯ ಕಾರ್ಯಕರ್ತರ ಹೋರಾಟ ಇದು. ಸೌಜನ್ಯ ಅನ್ನೋದು ಒಂದು ಶಕ್ತಿ. ಸೌಜನ್ಯಾಳ ಎಲ್ಲಾ ಶಕ್ತಿಗಳೇ ನಾವು. ನಾವೆಲ್ಲಾ ಹೋರಾಟಗಾರರು. ಸತ್ಯದ ಧರ್ಮದ ಹೋರಾಟಗಾರರು ನಾವು. ಮಗು ಅತ್ತಾಗ ಮಾತ್ರ ತಾಯಿ ಹಾಲು ಕುಡಿಸಿದ್ದು, ಮನೆಯಲ್ಲಿ ಕುಳಿತುಕೊಂಡು ಹೋರಾಟ ಮಾಡಿದರೆ ಏನೂ ಪ್ರಯೋಜನವಿಲ್ಲ. ನ್ಯಾಯ ಸಿಗುವುದು ನಮ್ಮಿಂದಾಗ, ಸಮಾಜದಿಂದಾಗಿ.

ನಿನ್ನೆ ಎಷ್ಟು ಹೋರಾಟ ಆಯಿತು, ನಾವು ಊರಿನಿಂದ ಬಂದವರು, ನಾವು 150 ಜನ ಇದ್ದೆವು. ಆದರೆ ನಮಗಿಂತ ಜಾಸ್ತಿ ದೆಹಲಿ ಪೊಲೀಸರು ಇದ್ದರು. ನಮ್ಮ ಜಿಲ್ಲೆಯ ಎಂಪಿಗಳಿಗೆ ಕೂಡಾ ಸೌಜನ್ಯ ಸತ್ತಿರುವ ವಿಷಯವೇ ಗೊತ್ತಿಲ್ಲ. ಗೊತ್ತಿದ್ದರೆ ಪ್ರಧಾನ ಮಂತ್ರಿಗೆ ಮುಟ್ಟಬೇಕಿತ್ತಲ್ಲ. ಮುಟ್ಟಿಲ್ಲ.

ಧರ್ಮಸ್ಥಳ ಗ್ರಾಮಕ್ಕೆ ನುಗ್ಗಿ ಅತ್ಯಾಚಾರಿಗಳನ್ನು ಎಳೆದು ತಂದು ಮಾರ್ಗದಲ್ಲಿ ಇಡುವಂತಹ ಪರಿಸ್ಥಿತಿ ಉಂಟು ಮಾಡುತ್ತೇವೆ. ಬೃಹತ್‌ ಹೋರಾಟ ಮಾಡುತ್ತೇವೆ. ಹೋರಾಟ ನಿಲ್ಲುವುದಿಲ್ಲ. ಆ ದೇವಸ್ಥಾನ ಈ ದೇಶದ ಸನಾತನ ಹಿಂದು ಧರ್ಮದ ಅವಿಭಾಜ್ಯ ಅಂಗ. ಇವತ್ತು ಯಾರೋ ಒಬ್ಬ ಅಲ್ಪಸಂಖ್ಯಾತ ಬಂದು ಅಲ್ಲಿ ಝಾಂಡಾವೂರಿದ್ದಾನೆ. ಅವನನ್ನು ಹೊರಗಡೆ ಹಾಕಬೇಕು. ರಸ್ತೆಗೆ ತರಬೇಕು. ಸನಾತನ ಹಿಂದೂ ಧರ್ಮದ ಧಾರ್ಮಿಕತೆಗೆ ಕೊಡಬೇಕು ಆ ದೇವಸ್ಥಾನವನ್ನು ಎಂದು ಹೇಳುತ್ತಾ ಮಹೇಶ್‌ ಶೆಟ್ಟಿ ತಿಮರೋಡಿ ಅವರು ಆಕ್ರೋಶಭರಿತವಾಗಿ ಮಾತನಾಡಿದ್ದಾರೆ.

ದೆಹಲಿ ಪೊಲೀಸರು ನಮ್ಮ ಹೋರಾಟದ ವಿಷಯ ಕೇಳಿ, ಇಷ್ಟೆಲ್ಲ ಆಗ್ತದಾ? ಭಾರತ ದೇಶದಲ್ಲಿ, ಒಂದು ದೇವಸ್ಥಾನ ಇರುವ ಕ್ಷೇತ್ರದಲ್ಲಿ, ನ್ಯಾಯ ಕ್ಷೇತ್ರದಲ್ಲಿ, ಎಂಪಿ ಇರುವ ಜಾಗದಲ್ಲಿ? ದೆಹಲಿಯ ಪೊಲೀಸ್‌ ಅಧಿಕಾರಿಗಳೇ ದಂಗಾಗಿದ್ದಾರೆ. ಹಾಗೆನೇ ತಂದು ನಮ್ಮನ್ನು ಬಿಟ್ಟು ಹೋದ್ರು ದೆಹಲಿ ಪೊಲೀಸರು ಎಂದು ಮಹೇಶ್‌ ಶೆಟ್ಟಿ ಹೇಳಿದರು.