Intresting News: ಇನ್ಮೇಲೆ ಲವ್ ಬ್ರೇಕಪ್ ಆಗಿ ಸತ್ತರೆ ಆತ್ಮಹತ್ಯೆ ಪ್ರಚೋದನೆ ಕೇಸಿಲ್ಲ
ಇತ್ತೀಚಿಗೆ ಲವ್ ಬ್ರೇಕಪ್ ಆಗಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಮುಂಬೈ ಹೈಕೋರ್ಟ್ ಹೊಸದೊಂದು ತೀರ್ಪು ನೀಡುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ: Soujanya Case: ನಮ್ಮ ಜಿಲ್ಲೆಯ ಎಂಪಿಗಳಿಗೆ ಕೂಡಾ ಸೌಜನ್ಯ ಸತ್ತಿರುವ ವಿಷಯ ಗೊತ್ತಿಲ್ಲ-ಮಹೇಶ್ ಶೆಟ್ಟಿ ತಿಮರೋಡಿ
ಲವ್ ಬ್ರೇಕ್ ಅಪ್ ನಂತರ ಮಾನಸಿಕ ಖಿನ್ನತೆಗೆ ಒಳಗಾಗಿ ಪ್ರೀತಿಸಿದ ಹುಡುಗ ಅಥವಾ ಹುಡುಗಿ ಆತ್ಮಹತ್ಯೆ ಮಾಡಿಕೊಂಡರೆ, ಅವರ ಪ್ರಿಯತಮೆ ಅಥವಾ ಪ್ರಿಯತಮನ ವಿರುದ್ಧವಾಗಿ ‘ಆತ್ಮಹತ್ಯೆಗೆ ಪ್ರಚೋದನೆ” ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ಮುಂಬೈ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಮನೀಷಾ ಎಂಬಾಕೆಯ ಪ್ರಕರಣದಲ್ಲಿ ಆಕೆಯನ್ನು ಪ್ರೀತಿಸುತ್ತಿದ್ದ ನಿತಿನ್ ಕೇಣಿ ಎಂಬಾತ ಬ್ರೇಕ್ ಅಪ್ ನಂತರ 2016ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ನಿತಿನ್‌ನನ್ನು ಮನೀಷಾ ತೊರೆದು, ರಾಜೇಶ್ ಪನ್ವರ್ ಎಂಬಾತನ ಜತೆ ಇರತೊಡಗಿದ್ದೇ ಆತ್ಮಹತ್ಯೆಗೆ ಕಾರಣ ಎಂಬ ಆರೋಪದೊಂದಿಗೆ ಪ್ರಕರಣ ಮುಂಬೈ ಹೈಕೋರ್ಟ್ ಮೆಟ್ಟಿಲೇರಿತ್ತು.
‘ರಾಜೇಶ್ ಮತ್ತು ಮನೀಷಾ ಸೇರಿ ಮಾನಸಿಕ ಕಿರುಕುಳ ಕೊಟ್ಟಿದ್ದರಿಂದಲೇ ನಿತಿನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ಪೊಲೀಸರು ಕೋರ್ಟ್‌ನಲ್ಲಿ ವಾದಿಸಿದ್ದರು. ‘ನಿತಿನ್ ಬೆಂಬಿಡದೇ ಕಾಡುತ್ತಿದ್ದುದರಿಂದ ಆತನ ವಿರುದ್ಧ ಮನೀಷಾ ಪೊಲೀಸರಿಗೆ ದೂರು ನೀಡಿದ್ದಳು. ಆದರೂ ಆತ ಆಕೆಯನ್ನು ಹಿಂಬಾಲಿಸುವುದನ್ನು ನಿಲ್ಲಿಸಿರಲಿಲ್ಲ’ ಎಂದು ಮನೀಷಾ ಪರವಕೀಲರು ಪ್ರತಿವಾದ ಮಂಡಿಸಿದ್ದರು.
ಎರಡೂ ಕಡೆಯ ವಾದಗಳನ್ನು ಆಲಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎನ್.ಪಿ. ಮೆಹ್ರಾ, ‘ಮನೀಷಾ ಮತ್ತು ರಾಜೇಶ್ ನಡುವಿನ ಸಂಬಂಧ ಗೊತ್ತಾದ ಬಳಿಕ ನಿತಿನ್ ಖಿನ್ನತೆಗೆ ಜಾರಿರಬಹುದು. ಆದರೆ ಆತನ ಸಾವಿಗೆ ಅವರಿಬ್ಬರನ್ನು ಹೊಣೆ ಮಾಡಲಾಗದು. ದಂಡಸಂಹಿತೆಯ 306ನೇ ವಿಧಿ ಪ್ರಕಾರ ಸಕ್ರಿಯವಾಗಿ ಸಲಹೆ ನೀಡುವುದು, ಪ್ರಚೋದಿಸುವುದು, ಉತ್ತೇಜಿಸುವುದು ಮುಂತಾದ ಕ್ರಿಯೆಗಳು ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣದ ಅರ್ಥವ್ಯಾಪ್ತಿಗೆ ಬರುತ್ತವೆ. ಮನಬಂದಂತೆ ಸಂಗಾತಿಗಳನ್ನು ಬದಲಾಯಿಸುವುದು ನೈತಿಕವಾಗಿ ಸರಿಯಲ್ಲ, ನಿಜ. ಆದರೆ ಪ್ರೇಮದಲ್ಲಿ ತಿರಸ್ಕೃತರಾದವರಿಗಾಗಿ ದಂಡಸಂಹಿತೆ ಕಾನೂನಿನಲ್ಲಿ ಯಾವುದೇ ಪರಿಹಾರದ ಉಲ್ಲೇಖವಿಲ್ಲ’ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದ್ದಾರೆ.