Soujanya Protest: ಎರಡನೇ ದಿನದ ಪ್ರತಿಭಟನೆ; ಒಂದು ಗಂಟೆಯಂದು ತೀವ್ರ ಹೋರಾಟ-ಮಹೇಶ್‌ ಶೆಟ್ಟಿ ತಿಮರೋಡಿ

ಸೌಜನ್ಯ ಹೋರಾಟದ ಸ್ವರೂಪ ಇದೀಗ ರಾಷ್ಟ್ರ ರಾಜಧಾನಿಗೆ ಮುಟ್ಟಿದೆ. ಇನ್ನು ನಿನ್ನೆಯ ಹೋರಾಟ ಯಶಸ್ವಿಯಾಗಿದ್ದು, ಇಂದು ಎರಡನೇ ದಿನದ ಹೋರಾಟದ ತಯಾರಿ ನಡೆದಿದೆ. ಮಹೇಶ್‌ ಶೆಟ್ಟಿ ತಿಮರೋಡಿ, ಪ್ರಸನ್ನ ರವಿ, ರವಿ ಮಟ್ಟಣ್ಣನವರ್‌ ಹಾಗೂ ಸೌಜನ್ಯ ಕುಟುಂಬದವರು ಸೇರಿ ಅನೇಕ ಹೋರಾಟಗಾರರು ದೆಹಲಿಗೆ ತೆರಳಿದ್ದಾರೆ. ಎರಡನೇ ದಿನದ ಹೋರಾಟದಲ್ಲಿ ತಾವು ತಂಗಿದ್ದ ಸ್ಥಳದಲ್ಲಿ ಮಟ್ಟಣ್ಣನವರ್‌ ಮತ್ತು ತಿಮರೋಡಿ ಅವರು ತನ್ನ ಅನಿಸಿಕೆಯನ್ನು ಹೇಳಿದ್ದಾರೆ.

 

ಎರಡನೇ ದಿನದ ಹೋರಾಟಕ್ಕೆ ಯಾವ ರೀತಿ ತಯಾರಿ ನಡೆಯುತ್ತಿದೆ.?

ನಿನ್ನೆ ಕೂಡಾ ಯಶಸ್ವಿ ಹೋರಾಟ ಆಯಿತು. ಇವತ್ತು ಕೂಡಾ ಒಂದು ಗಂಟೆಗೆ ದೊಡ್ಡ ಮಟ್ಟದ ಪ್ರತಿಭಟನೆ ಇದೆ. ದೆಹಲಿಯ ಒಂದು ಪ್ರಮುಖ ಪ್ರದೇಶದಲ್ಲಿ. ಇಡೀ ರಾಷ್ಟ್ರದ ಗಮನ ಸೆಳೆಯುವಂತಹ ದಿಕ್ಕಿನಲ್ಲಿ ಹೋರಾಟ ನಡೆಯಲಿದೆ. ಒಂದು ಗಂಟೆಗೆ ಈ ಪ್ರತಿಭಟನೆ ಪ್ರಾರಂಭವಾಗುತ್ತದೆ. ಅಧಿಕಾರಿಗಳ ಗಮನ, ರಾಷ್ಟ್ರದ ಗಮನ, ಅಧಿಕಾರಸ್ಥರ ಗಮನ, ದೆಹಲಿಯ ರಾಷ್ಟ್ರೀಯ ದೊರೆಗಳ ಗಮನ ಸೆಳೆಯಬೇಕು ಎನ್ನುವುದು ನಮ್ಮ ಉದ್ದೇಶ ಎಂದು ಮಟ್ಟಣ್ಣನವರ್‌ ಹೇಳಿದರು.

 

ಈಗಾಗಲೇ ನಾವು ಒಂದು ರೂಪುರೇಷೆಯನ್ನು ಮಾಡಿದ್ದೇವೆ. ನಾವು ಕೂಡಾ ಜೈಲಿಗೆ ಹೋಗುವಾದರೆ ಜೈಲಿಗೆ. ಎಲ್ಲದ್ದಕ್ಕೂ ಸಿದ್ಧ ಎಂದು ಬಂದವರೇ. ಬೆಣ್ಣೆ ತುಪ್ಪ ಕೊಟ್ಟ ನಮ್ಮನ್ನು ಕಳಿಸ್ತಾರೆ ಎನ್ನುವ ಭರವಸೆಯಿಂದ ಬಂದವರಲ್ಲ. ಧರ್ಮಸ್ಥಳದಲ್ಲಿ ಈ ರೀತಿಯ ಅತ್ಯಾಚಾರ ಆಗುತ್ತಿದೆಯೇ ಎಂದು ಅಧಿಕಾರಿಗಳು ಹೇಳುತ್ತಾ ಇದ್ದದ್ದು ಕೂಡಾ ಇದೆ ಎಂದು ಮಹೇಶ್‌ ಶೆಟ್ಟಿ ತಿಮರೋಡಿ ಅವರು ಇಂದು ಬೆಳಗ್ಗಿನ ಸಂದರ್ಭದಲ್ಲಿ ಹೇಳಿದರು.

Leave A Reply

Your email address will not be published.