Supreme Court: ಸಂಸದರು, ಶಾಸಕರ ಮೇಲೆ ಡಿಜಿಟಲ್ ನಿಗಾ; ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ದೇಶದಲ್ಲಿ ಉತ್ತಮ ಆಡಳಿತ ನಡೆಸಲು ಎಲ್ಲಾ ಸಂಸದರು, ಶಾಸಕರ ಮೇಲೆ ಡಿಜಿಟಲ್ ತಂತ್ರಜ್ಞಾನದ ಮೂಲಕ ನಿಗಾ ಇರಿಸಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಲಾಗಿದ್ದ ವಿಶೇಷ ರೀತಿಯ ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

ಇದನ್ನೂ ಓದಿ: Fire Accident : ಕಟ್ಟಡವೊಂದರಲ್ಲಿ ಭೀಕರ ಅಗ್ನಿ ದುರಂತ; 44 ಮಂದಿ ಸಾವು

ಸುರೀಂದ್ರ ಕುಂದ್ರಾ ಎಂಬಾತ ಶಾಸಕರು, ಸಂಸದರ ಮೇಲೆ ಡಿಜಿಟಲ್ ರೂಪಿಸುವಂತೆ ಸಾರ್ವಜನಿಕ ವ್ಯವಸ್ಥೆ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಸಿದ್ದರು. ಅರ್ಜಿದಾರರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸಿಜೆಐ ಡಿ.ವೈ.ಚಂದ್ರಚೂಡ್, “ಸಂಸದರು, ಶಾಸಕರ ಮೇಲೆ ಡಿಜಿಟಲ್ ತಂತ್ರಜ್ಞಾನ ಬಳಸಿ ನಿಗಾ ಇಡುವುದು, ಅವರ ವೈಯಕ್ತಿಯ ಹಾಗೂ ಖಾಸಗಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡುವುದಿಲ್ಲವೇ. ಜನಪ್ರತಿನಿಧಿಯ ಖಾಸಗಿ ಬದುಕಿನ ನಡುವೆ ಕೋರ್ಟ್ ಯಾಕೆ ಮಧ್ಯಪ್ರವೇಶ ಮಾಡಬೇಕು,”

ಎಂದು ಪ್ರಶ್ನಿಸಿದರು.

ಅರ್ಜಿ ವಿಚಾರಣೆ ನಡೆಸಿದ ಸಿಜೆಐ ಚಂದ್ರಚೂಡ್, ನ್ಯಾ.ಜೆ.ಬಿ.ಪರ್ದಿವಾಲಾ, ನ್ಯಾ.ಮನೋಜ್ ಮಿಶ್ರಾ ತ್ರಿಸದಸ್ಯ ಪೀಠದ ಎದುರು 15 ನಿಮಿಷಗಳ ವಾದ ಮಂಡಿಸಿದ ಅರ್ಜಿದಾರ ಸುರೀಂದ್ರ ಕುಂದ್ರಾ, “ಸಂಸದರು, ಶಾಸಕರ ಮನೆ, ಕಚೇರಿ, ಅವರು ಹೋಗುವ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಆ ವಿಡಿಯೊ ದೃಶ್ಯಗಳು ಸಾರ್ವಜನಿಕರಿಗೆ ಮೊಬೈಲ್‌ನಲ್ಲಿ ಲಭ್ಯವಾಗು ವಂತೆ ಮಾಡಬೇಕು. ಇದರಿಂದ ದಿನ ನಿತ್ಯ ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ ಎಂಬುದು ಜನರಿಗೆ ತಿಳಿಯಲಿದೆ,” ಎಂದು ಪ್ರತಿಪಾದಿಸಿದರು.

”ಸಾರ್ವಜನಿಕ ಹಿತಾಸಕ್ತಿ ಇಲ್ಲದ ಅರ್ಜಿ ತಂದು ಕೋರ್ಟ್ ಸಮಯ ವ್ಯರ್ಥ ಮಾಡಿದ ನಿಮಗೆ 5 ಲಕ್ಷ ರೂ. ದಂಡ ವಿಧಿಸಬೇಕಾಗುತ್ತದೆ,” ಎಂದು ಸಿಜೆಐ ಚಂದ್ರಚೂಡ್ ಎಚ್ಚರಿಕೆ ನೀಡಿದರು.

Leave A Reply

Your email address will not be published.