Soujanya Protest: ದೆಹಲಿ ಪ್ರತಿಭಟನಾ ನಿರತ ಸೌಜನ್ಯಾ ಹೋರಾಟಗಾರರು ಪೊಲೀಸ್‌ ವಶಕ್ಕೆ

Delhi: ಬೆಳ್ತಂಗಡಿಯ ಸೌಜನ್ಯ ಪ್ರಕರಣಕ್ಕೆ ನ್ಯಾಯ ಒದಗಿಸಬೇಕೆಂದು ದೆಹಲಿಗೆ ತೆರಳಿದ್ದ ಮಹೇಶ್‌ ತಿಮರೋಡಿ, ಗಿರೀಶ್‌ ಮಟ್ಟಣ್ಣನವರ್‌ ಮತ್ತು ಸೌಜನ್ಯ ತಾಯಿ, ತಮ್ಮಣ್ಣ ಶೆಟ್ಟಿ ಸಹಿತ ಹೋರಾಟಗಾರರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

 

ಬೆಳ್ತಂಗಡಿಯಲ್ಲಿ ಸೌಜನ್ಯ ನ್ಯಾಯಕ್ಕಾಗಿ ನಡೆದ ಪ್ರತಿಭಟನೆಯಲ್ಲಿ ಸಂಸದ, ಆಗಿನ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಸುನೀಲ್‌ ಕುಮಾರ್‌ ಹರೀಶ್‌ ಪೂಂಜಾ ಇದ್ದ ವೇದಿಕೆಯಲ್ಲಿ ಸೌಜನ್ಯ ತಾಯಿ ಕುಸುಮಾವತಿ ಅವರು ಭಾಷಣ ಮಾಡುವ ಸಂದರ್ಭದಲ್ಲಿ ನನ್ನನ್ನು ಪ್ರಧಾನಿ ಮೋದಿಯನ್ನು ಬೇಟಿ ಮಾಡಿಸುವಂತ ಅವಕಾಶ ಮಾಡಿಕೊಡಬೇಕು ಎಂದು ಕೇಳಿದ್ದರು. ನಾಯಕರು ಆಗ ಒಪ್ಪಿಗೆಯನ್ನು ಸೂಚಿಸಿದ್ದರು.

ಆದರೆ ಪ್ರತಿಭಟನೆ ನಡೆದು ಹಲವು ತಿಂಗಳು ಕಳೆದರೂ ಮೋದಿ ಭೇಟಿ ಆಗಿರಲಿಲ್ಲ. ಹೀಗಾಗಿ ಸೌಜನ್ಯ ತಾಯಿ ಕುಸುಮಾವತಿ ಹಾಗೂ ಹೋರಾಟಗಾರರ ತಂಡ ದೆಹಲಿಗೆ ಹೋಗಿದ್ದು, ಮಾ.1 ರಂದು ಅಲ್ಲಿ ಕರ್ನಾಟಕ ಭವನದ ಎದುರು ಪ್ರತಿಭಟನೆ ಕೈಗೊಂಡಿದ್ದರು. ಇಂದು ಕೂಡಾ ಪ್ರತಿಭಟನೆ ಇರುವುದಾಗಿ ಮಹೇಶ್‌ ಶೆಟ್ಟಿ ತಿಮರೋಡಿ, ಮತ್ತು ಮಟ್ಟಣ್ಣನವರ್‌ ಮಾಧ್ಯಮದ ಮುಂದೆ ಹೇಳಿದ್ದರು. ಆ ಪ್ರಕಾರವಾಗಿ  ಇಂದು ಸೋನಿಯಾ ಗಾಂಧಿ ನಿವಾಸಕ್ಕೆ ತಂಡ ತೆರಳಿದ್ದು, ಮುಖ್ಯ ಕಾರ್ಯದರ್ಶಿಯನ್ನು ಭೇಟಿಯಾಗಿ ತನಿಖೆಗೆ ಒತ್ತಾಯ ಮಾಡಿ ಮನವಿ ಸಲ್ಲಿಸಿದೆ. ನಂತರ ಸೌಜನ್ಯ ಹೋರಾಟಗಾರರು ಸೋನಿಯಾ ಗಾಂಧಿ ಜೊತೆ ಫೋನಿನಲ್ಲಿ ಮಾತಾಡಿರುವ ಕುರಿತು ವರದಿಯಾಗಿದೆ.

ಅಲ್ಲಿಂದ ಹೊರ ಬಂದಾಗ ಪ್ರತಿಭಟನಾಕಾರರನ್ನು ದೆಹಲಿ ಪೊಲೀಸ್‌ ವಿಶೇಷ ಪಡೆ ವಶಕ್ಕೆ ಪಡೆದಿದ್ದು, ಹೋರಾಟಗಾರರನ್ನು ಸ್ಟ್ರೀಟ್‌ ಠಾಣೆಗೆ ಕರೆದೊಯ್ದಿದ್ದಾರೆ ಎಂದು ವರದಿಯಾಗಿದೆ.

Leave A Reply

Your email address will not be published.