Amarnath Ghosh murder: ಭಾರತೀಯ ಖ್ಯಾತ ನೃತಪಟು ಅಮರನಾಥ್‌ ಅಮೆರಿಕದಲ್ಲಿ ಗುಂಡಿಟ್ಟು ಕೊಲೆ

Amarnath Ghosh murder: ಭಾರತೀಯ ಖ್ಯಾತ ನೃತ್ಯಪಟು ಅಮರನಾಥ್‌ ಘೋಷ್‌ ಅವರನ್ನು ಅಮೆರಿಕದಲ್ಲಿ ಗುಂಡಿಟ್ಟು ಹತ್ಯೆ ಮಾಡಿರುವ ಘಟನೆಯೊಂದು ನಡೆದಿದೆ. ಮಂಗಳವಾರ ಅಮೆರಿಕದ ಮಿಸೌರಿಯಲ್ಲಿ ಸಂಜೆಯ ವಾಕ್‌ನಲ್ಲಿ ಮಾತನಾಡುತ್ತಿದ್ದಾಗ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಘೋಷ್‌ ಅವರ ಸ್ನೇಹಿತೆ ಈ ಕುರಿತು ಮಾಹಿತಿ ತಿಳಿಸಿರುವುದಾಗಿ ವರದಿಯಾಗಿದೆ.

 

ಮಂಗಳವಾರ ಮಿಸೌರಿಯ ಸೈಂಟ್‌ ಲೂಯಿಸ್‌ ಸಿಟಿಯಲ್ಲಿ ಸಂಜೆ ತಿರುಗಾಡುತ್ತಿದ್ದ ಸಂದರ್ಭದಲ್ಲಿ ಹಲವು ಬಾರಿ ಅವರಿಗೆ ಗುಂಡೇಟು ಹೊಡೆದು ಕೊಲೆ ಮಾಡಲಾಗಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ನೆರವು ಬೇಕಾಗಿದೆ ಎಂದು ಭಟ್ಟಾಚಾರ್ಜಿ ಮನವಿ ಮಾಡಿದ್ದಾರೆ.

 

ಮೂರು ವರ್ಷಗಳ ಹಿಂದೆ ಘೋಷ್‌ ತಾಯಿ ನಿಧನರಾಗಿದ್ದು, ಘೋಷ್‌ ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡಿದ್ದರು. ನಮಗೆ ಇಲ್ಲಿಯವರೆಗೆ ಹಂತಕನ ಸುಳಿವು ಗೊತ್ತಾಗಿಲ್ಲ. ಘೋಷ್‌ ಕೆಲವು ಗೆಳೆಯರನ್ನು ಹೊರತುಪಡಿಸಿ ಕುಟುಂಬದ ಯಾವ ವ್ಯಕ್ತಿಯೂ ಅನ್ಯಾಯದ ವಿರುದ್ಧ ಹೋರಾಟ ನಡೆಸಲು ಸಾಧ್ಯವಿಲ್ಲ ಎಂದು ಭಟ್ಟಾಚಾರ್ಜಿ ಎಕ್ಸ್‌ನಲ್ಲಿ ಶೇರ್‌ ಮಾಡಿದ್ದಾರೆ.

 

ಖ್ಯಾತ ಕೂಚಿಪುಡಿ ನರ್ತಕ ಅಮರನಾಥ ಘೋಷ್ ಹತ್ಯೆ ಪ್ರಕರಣದ ತನಿಖೆ ಕುರಿತು ನಾವು ಅಮೆರಿಕದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಭಾರತ ಸರ್ಕಾರ ಹೇಳಿದೆ.

 

ಘೋಷ್ ಅವರು ಸೇಂಟ್ ಲೂಯಿಸ್‌ನಲ್ಲಿರುವ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ನೃತ್ಯದಲ್ಲಿ ಎಂಎಫ್‌ಎ ಓದುತ್ತಿದ್ದರು. ನಾವು ನಿರಂತರವಾಗಿ ತನಿಖೆಯನ್ನು ಫಾಲೋ ಮಾಡುತ್ತಿದ್ದೇವೆ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಚಿಕಾಗೋದಲ್ಲಿರುವ ಭಾರತೀಯ ದೂತಾವಾಸ ತಿಳಿಸಿದೆ.

Leave A Reply

Your email address will not be published.