ಡಾಲಿ ಚಾಯ್ ವಾಲಾ ಅವರೊಂದಿಗೆ ಬಿಲ್ ಗೇಟ್ಸ್ ಅವರ ಚಾಯ್ ಪೆ ಚರ್ಚಾ : ವಿಡಿಯೋ ಎಲ್ಲೆಡೆ ವೈರಲ್

Bill Gates:ಮೈಕ್ರೋಸಾಫ್ಟ್ನ ಸಹ-ಸಂಸ್ಥಾಪಕ ಮತ್ತು ಖ್ಯಾತ ಲೋಕೋಪಕಾರಿ ಬಿಲ್ ಗೇಟ್ಸ್ ಅವರು ತಮ್ಮ ಭಾರತ ಭೇಟಿಯ ಸಂತೋಷಕರ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ತುಣುಕಿನಲ್ಲಿ, ಬಿಲ್ ಗೇಟ್ಸ್ ಒಂದು ಕಪ್ ಚಹಾವನ್ನು ಆನಂದಿಸುವ ಮೂಲಕ ಸ್ಥಳೀಯ ಸಂಸ್ಕೃತಿಯನ್ನು ಅನುಭವಿಸುತ್ತಿರುವುದು ಕಂಡುಬರುತ್ತದೆ.

 

 

ತ್ವರಿತವಾಗಿ ವೈರಲ್ ಆದ ವೀಡಿಯೊದಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ಪ್ರಸಿದ್ಧಿ ಪಡೆದಿರುವ ಡಾಲಿ ಚಾಯ್ವಾಲಾ ನಿರ್ವಹಿಸುವ ಚಹಾ ಅಂಗಡಿಯಲ್ಲಿ ಗೇಟ್ಸ್ ಅವರು ಚಹಾ ಕೂಡಿಯುತ್ತಿರುವ ವಿಡಿಯೋ ವೈರಲ್ ಆಗಿದೆ.

 

ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ, ಭಾರತದಲ್ಲಿ ದೈನಂದಿನ ಜೀವನದಲ್ಲಿ ಕಂಡುಬರುವ ವಿಶೇಷತೆಯ ಕುರಿತು ಗೇಟ್ಸ್ ತಮ್ಮ ಮೆಚ್ಚುಗೆಯನ್ನು ಹಂಚಿಕೊಂಡಿದ್ದು, “ಭಾರತದಲ್ಲಿ, ನೀವು ಎಲ್ಲಿಗೆ ಹೋದರೂ ಹೊಸತನ ಕಾಣಬಹುದು-ಸರಳವಾದ ಒಂದು ಕಪ್ ಚಹಾದ ತಯಾರಿಕೆಯಲ್ಲೂ ಸಹ! ಎಂದು ಬರೆದುಕೊಂಡಿದ್ದಾರೆ.

” ಡಾಲಿ ಚಾಯ್ವಾಲಾ ಅವರಿಂದ “ದಯವಿಟ್ಟು ಒಂದು ಚಹಾ, ” ಎಂದು ಗೇಟ್ಸ್ ವಿನಂತಿಸುವುದರೊಂದಿಗೆ ವಿಡಿಯೋ ಕ್ಲಿಪ್ ಪ್ರಾರಂಭವಾಗುತ್ತದೆ.

ಇದನ್ನೂ ಓದಿ : ಕಾಗೆ ತಲೆಯ ಮೇಲಿಂದ ಹಾರಿ ಹೋದರೆ ಏನರ್ಥ?ಇಲ್ಲಿದೆ ಜ್ಯೋತಿಷ್ಯ ಸಲಹೆ

Leave A Reply

Your email address will not be published.