Rajyasabhe election: ರಾಜ್ಯಸಭೆ ಚುನಾವಣೆ- ಕರ್ನಾಟಕದಲ್ಲಿ ಯಾರಿಗೆಷ್ಟು ಗೆಲುವು?

Rajyasabhe election: ರಾಜ್ಯಸಭಾ ಚುನಾವಣೆ ನಡೆದು ಫಲಿತಾಂಶವೂ ಪ್ರಕಟಗೊಂಡಿದೆ. ನಾಲ್ಕು ಸ್ಥಾನಗಳ ಪೈಕಿ 3 ಸ್ಥಾನಗಳನ್ನು ಆಡಳಿತರೂಢ ಕಾಂಗ್ರೆಸ್‌ ತನ್ನದಾಗಿಸಿಕೊಂಡಿದೆ. ಇನ್ನು ಬಿಜೆಪಿ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯೂ ಸೋತಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣೆ ಅಣಿಯಾಗಿರುವ ದೋಸ್ತಿಗಳಿಗೆ ಮರ್ಮಾಘಾತವಾಗಿದೆ.

ಇದನ್ನೂ ಓದಿ: Viral video: OTP ಗಾಗಿ ಆಧಾ‌ರ್ ಲಿಂಕ್ ಆಗಿರುವ ಫೋನ್ ತನ್ನಿ ಅಂದ್ರೆ ಈ ಮುಗ್ಧ ಅಜ್ಜ ತಂದಿದ್ದೇನು ಗೊತ್ತೇ? ಗೊತ್ತಾದ್ರೆ ನೀವೂ ಮರುಗುತ್ತೀರಾ !!

ಕಾಂಗ್ರೆಸ್ನ(Congress)ಅಜಯ್ ಮಕೇನ್(Ajay meken), ನಾಸೀರ್ ಹುಸೇನ್(Naseer husen) ಹಾಗೂ ಜಿ.ಸಿ. ಚಂದ್ರಶೇಖರ್(G C Chandrashekhar) ಗೆಲ್ಲುವು ಸಾಧಿಸಲಿದ್ದಾರೆ. ಇನ್ನು ನಿರೀಕ್ಷೆಯಂತೆ ಬಿಜೆಪಿಯ ನಾರಾಯಣಸಾ ಭಾಂಡಗೆ(Narayanasa bhanda) ಅವರು ಗೆಲುವು ಸಾಧಿಸಿದ್ದಾರೆ. ಬಿಜೆಪಿ, ಜೆಡಿಎಸ್‌ ಮೈತ್ರಿಯಿಂದ ಐದನೇ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಕುಪೇಂದ್ರ ರೆಡ್ಡಿ ಅವರು ಸೋಲು ಅನುಭವಿಸಿದ್ದಾರೆ. ಇದರೊಂದಿಗೆ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ-ಜೆಡಿಎಸ್ ಮೈತ್ರಿಗೆ ಮುಖಭಂಗವಾಗಿದೆ.

ಯಾವ ಅಭ್ಯರ್ಥಿಗೆ ಎಷ್ಟು ಮತಗಳು:

ಅಜಯ್ ಮಕೇನ್ (ಕಾಂಗ್ರೆಸ್)- 47 ಮತಗಳು- ಗೆಲುವು

ಜಿಸಿ ಚಂದ್ರಶೇಖರ್ (ಕಾಂಗ್ರೆಸ್)- 45 ಮತಗಳು- ಗೆಲುವು

ಡಾ ಸೈಯದ್ ನಾಸೀರ್ ಹುಸೇನ್ (ಕಾಂಗ್ರೆಸ್)- 47 ಮತಗಳು- ಗೆಲುವು

ನಾರಾಯಣ ಎಸ್ ಭಾಂಡಗೆ (ಬಿಜೆಪಿ)- 47 ಮತಗಳು- ಗೆಲುವು

ಡಿ ಕುಪೇಂದ್ರ ರೆಡ್ಡಿ (ಮೈತ್ರಿ ಅಭ್ಯರ್ಥಿ)- 36 ಮತಗಳು- 9 ಮತಗಳಿಂದ ಸೋಲು.

Leave A Reply

Your email address will not be published.