Siddu Moosewala: ಗಾಯಕ ಸಿದ್ದು ಮೂಸೆವಾಲಾ ತಾಯಿ 56ನೇ ವರ್ಷದಲ್ಲಿ ಮತ್ತೊಮ್ಮೆ ಗರ್ಭಿಣಿ

Sidhu Moose Wala Mother Pregnant: ಪಂಜಾಬ್‌‌ನ ಖ್ಯಾತ ಗಾಯಕ ಸಿಧು ಮೂಸೆವಾಲಾ ಅವರನ್ನು 2022 ರಲ್ಲಿ ಹತ್ಯೆ ನಡೆದಿತ್ತು. ಇದೀಗ ಬಹಳ ದಿನಗಳ ನಂತರ ಸಿದ್ದು ಮೂಸ್ ವಾಲಾ ಕುಟುಂಬಕ್ಕೆ ಸಂತೋಷದ ಸುದ್ದಿಯೊಂದು ದೊರಕಿದೆ. ಸಿದ್ದು ಮೂಸೆವಾಲಾ ಅವರ ತಾಯಿ ಚರಣ್ ಕೌರ್ ಗರ್ಭಿಣಿಯಾಗಿದ್ದು, ಶೀಘ್ರದಲ್ಲೇ ಮಗುವಿಗೆ ಜನ್ಮ ನೀಡಲಿದ್ದಾರೆ.

 

ಸಿದ್ದು ಮೂಸೆವಾಲಾ ಅವರ ತಾಯಿ ತಮ್ಮ 56ನೇ ವಯಸ್ಸಿನಲ್ಲಿ ಗರ್ಭಿಣಿಯಾಗಿರುವ ಸುದ್ದಿ ಕೇಳಿ ಅವರ ಅಭಿಮಾನಿಗಳೆಲ್ಲರೂ ಸಂತಸ ವ್ಯಕ್ತಪಡಿಸಿದ್ದರೆ, 56ನೇ ವಯಸ್ಸಿನಲ್ಲಿ ಮತ್ತೆ ಗರ್ಭಿಣಿಯಾದದ್ದು ಹೇಗೆ ಎಂದು ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಗಾಯಕನ ನಿಧನದ ಸುದ್ದಿ ಅವರ ಕುಟುಂಬ ಮತ್ತು ಅವರ ಅಭಿಮಾನಿಗಳು ಬಹಳ ಬೇಸರಗೊಂಡಿದ್ದರು. ಇದೀಗ ಬಹಳ ದಿನಗಳ ನಂತರ ಸಿದ್ದು ಮೂಸ್ ವಾಲಾ ಮನೆಯಲ್ಲಿ ಸಂತಸ ತುಂಬಿದೆ. ಪಂಜಾಬ್‌ನ ಖ್ಯಾತ ಗಾಯಕ ಸಿಧು ಮೂಸ್ ವಾಲಾ ಅವರ ತಾಯಿ ಚರಣ್ ಕೌರ್ ಶೀಘ್ರದಲ್ಲೇ ತಾಯಿಯಾಗಲಿದ್ದಾರೆ. ಈ ಸಂತಸವನ್ನು ಅವರ ಕುಟುಂಬವೇ ಹಂಚಿಕೊಂಡಿದೆ. ಸಿಧು ಮೂಸೆವಾಲಾ ಅವರ ತಾಯಿ ಚರಣ್ ಕೌರ್ ಗರ್ಭಿಣಿಯಾಗಿರುವ ಸುದ್ದಿಯನ್ನು ಗಾಯಕನ ಚಿಕ್ಕಪ್ಪ ಚಮ್ಕೌರ್ ಸಿಂಗ್ ಸಿಧು ಖಚಿತಪಡಿಸಿದ್ದಾರೆ.

ಬಲ್ಕೌರ್ ಸಿಂಗ್ ಸಿಧು (ಸಿಧು ಮೂಸ್ ವಾಲಾ ತಂದೆ) ಮನೆಗೆ ಮತ್ತೊಮ್ಮೆ ಸಂತೋಷ ಮರಳಲಿ ಎಂದು ಕುಟುಂಬದ ಪ್ರತಿಯೊಬ್ಬ ಸದಸ್ಯರು ಪ್ರಾರ್ಥಿಸುತ್ತಿದ್ದಾರೆ ಎಂದು ಅವರು ಹೇಳಿದರು. ಸಿದ್ದು ಮೂಸೆವಾಳ ಅವರ ಚಿಕ್ಕಪ್ಪ ದೇವರಿಗೆ ಕೃತಜ್ಞತೆ ಸಲ್ಲಿಸಿ ಅವರ ಕುಟುಂಬದಲ್ಲಿ ಮತ್ತೊಮ್ಮೆ ನಗೆಗಡಲಲ್ಲಿ ತೇಲುತ್ತದೆ ಎಂದರು.

ವರದಿಗಳ ಪ್ರಕಾರ ಸಿದ್ದು ಮೂಸೆವಾಲಾ ಅವರ ತಾಯಿ ಮಾರ್ಚ್ ತಿಂಗಳಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ. ಭದ್ರತಾ ಕಾರಣಗಳಿಂದಾಗಿ ಸಿದ್ದು ಮೂಸೆವಾಲಾ ಅವರ ಪೋಷಕರು ಗರ್ಭಧಾರಣೆಯ ಸುದ್ದಿಯ ಬಗ್ಗೆ ಯಾವುದೇ ರೀತಿಯಲ್ಲಿ ಮಾತನಾಡಲು ನಿರಾಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

 

 

Leave A Reply

Your email address will not be published.