Rahul Gandhi: ಲೋಕಸಭಾ ಚುನಾವಣೆ- ಕರ್ನಾಟಕದಿಂದಲೇ ರಾಹುಲ್ ಗಾಂಧಿ ಕಣಕ್ಕೆ?

Rahul gandhi: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿಯವರು ಕರ್ನಾಟಕದಿಂದ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಭಾರೀ ಸದ್ದು ಮಾಡುತ್ತಿದೆ.

ಇದನ್ನೂ ಓದಿ: S T somshekhar: ರಾಜ್ಯಸಭೆ ಚುನಾವಣೆ- ಬಿಜೆಪಿ ಬಿಗ್ ಶಾಕ್ ಕೊಟ್ಟ ಎಸ್ ಟಿ ಸೋಮಶೇಖರ್

ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ(Rahul gandhi) ಕೇರಳದ ವಯನಾಡು ಕ್ಷೇತ್ರ ತೊರೆದು ಮತ್ತೊಂದು ರಾಜ್ಯಕ್ಕೆ ವಲಸೆ ಹೋಗಲು ಮುಂದಾಗಿದ್ದಾರೆ ಎನ್ನಲಾಗಿದೆ. ಈ ಬೆನ್ನಲ್ಲೇ ಅವರು ಕರ್ನಾಟಕದಿಂದ(Karnataka) ಈ ಬಾರಿಯ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಅಂದಹಾಗೆ 2019ರಲ್ಲಿ ಉತ್ತರ ಪ್ರದೇಶದ(Uttarpradesh) ಅಮೇಠಿ ಹಾಗೂ ವಯನಾಡು ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಹುಲ್‌ ಗಾಂಧಿ, ವಯನಾಡು ಕ್ಷೇತ್ರದಲ್ಲಿ 4 ಲಕ್ಷ ಮತಗಳ ಭಾರೀ ಅಂತರದಿಂದ ಜಯಗಳಿಸಿದ್ದರು. ಆದರೆ ಸೋಲುವ ಭೀತಿಯಿಂದಾಗಿ ಹಾಗೂ ಮೈತ್ರಿ ನಂಟಿನಿಂದಾಗಿ ಈ ಬಾರಿ ವಯನಾಡನ್ನು ಬಿಡುವ ಸಂಭವ ಎದುರಾಗಿದೆ ಎನ್ನಲಾಗಿದೆ. ಆದರೆ ಇನ್ನೂ ಯಾವ ನಿಖರ ಮಾಹಿತಿ ಲಭ್ಯವಾಗಿಲ್ಲ.

ಅಂದಹಾಗೆ ದೊರೆತ ಮಾಹಿತಿ ಪ್ರಕಾರ ಉತ್ತರ ಪ್ರದೇಶದ ಆಮೇಠಿ ಜೊತೆಗೆ ಕರ್ನಾಟಕದ ಬೆಂಗಳೂರು ಗ್ರಾಮಾಂತರ ಅಥವಾ ತೆಲಂಗಾಣದ ಮಲ್ಕಾಜಗಿರಿ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಸಂಭವವಿದೆ ಎನ್ನಲಾಗುತ್ತಿದೆ. ಆ ಬಗ್ಗೆ ಕಾದು ನೋಡಬೇಕಿದೆ.

Leave A Reply

Your email address will not be published.