Mangaluru Student Missing Case: ಮಂಗಳೂರಿನಲ್ಲಿ ಯುವತಿ ನಾಪತ್ತೆ ಪ್ರಕರಣ; ಮಹತ್ವದ ಮಾಹಿತಿ

Mangaluru: ಪಿಹೆಚ್‌ಡಿ ಮಾಡುತ್ತಿದ್ದ ವಿದ್ಯಾರ್ಥಿನಿ ಚೈತ್ರಾ ಹೆಬ್ಬಾರ್‌ ನಾಪತ್ತೆ ಪ್ರಕರಣ ಇದೀಗ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಬಜರಂಗದಳದ ದಾಳಿಗೆ ಹೆದರಿ ವಿದ್ಯಾರ್ಥಿನಿ ದಿಢೀರ್‌ ನಾಪತ್ತೆಯಾಗಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗಿದೆ.

 

ಇದನ್ನೂ ಓದಿ: Kavu Hemanatha Shetty: ಕಾವು ಹೇಮನಾಥ ಶೆಟ್ಟಿ ಪ್ರಯಾಣ ಮಾಡುತ್ತಿದ್ದ ಕಾರು ಅಪಘಾತ

ಚೈತ್ರಾಗೆ ಶಾರುಖ್‌ ಜೊತೆಗೆ ಇರುವ ವಿಷಯ ಬಹಿರಂಗವಾಗಿದೆ ಎಂಬ ಕಾರಣಕ್ಕೆ ವಿದ್ಯಾರ್ಥಿನಿ ಫೆ.17 ರ ಬೆಳಿಗ್ಗೆ ಪರಾರಿಯಾಗಿರುವ ಕುರಿತು ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.

ಬೆಂಗಳೂರಿಗೆ ಚೈತ್ರಾ ಹಾಗೂ ಶಾರುಖ್‌ ಪರಾರಿಯಾಗಿರುವ ಕುರಿತು ಶಂಕೆ ಇದೆ. ಮಾಡೂರಿನ ಪಿಜಿ ಬಿಟ್ಟು ಒಬ್ಬಂಟಿಯಾಗಿ ಬೆಂಗಳೂರಿಗೆ ಪ್ರಯಾಣ ಮಾಡಿದ್ದಾರೆ. ಫೆ.17 ರ ಬೆಳಿಗ್ಗೆ 9 ಗಂಟೆಗೆ ಪಿಜಿಯಿಂದ ಸ್ಕೂಟರ್‌ನಲ್ಲಿ ಪ್ರಯಾಣ ಮಾಡಿ, ಪಂಪ್‌ವೆಲ್‌ನಲ್ಲಿ ಗಾಡಿ ನಿಲ್ಲಿಸಿ ಅನಂತರ ಮೊಬೈಲ್‌ ಸ್ವಿಚ್ಡ್‌ ಆಗಿದೆ. ನಂತರ ನೇರವಾಗಿ ಸುರತ್ಕಲ್‌ ಎಂಟಿಎಂ ನಿಂದ ಹಣ ವಿತ್‌ಡ್ರಾ ಮಾಡಿ. ಅಲ್ಲಿಂದ ಕೆಎಸ್‌ಆರ್‌ಟಿಸಿ ಬಸ್ಸು ಮೂಲಕ ಬೆಂಗಳೂರಿಗೆ ಹೋಗಿರುವ ಮಾಹಿತಿ ಇದೆ ಎನ್ನಲಾಗಿದೆ.

ಚೈತ್ರಾ ಅವರ ಮೊಬೈಲ್‌ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಒಮ್ಮೆ ಆನ್‌ಆಗಿದೆ. ನಂತರ ಯಾರಿಗೋ ಕರೆ ಮಾಡಿ ರಹಸ್ಯ ಜಾಗಕ್ಕೆ ತೆರಳಿರುವ ಕುರಿತು ಪೊಲೀಸರಿಗೆ ಮಾಹಿತಿ ದೊರಕಿದೆ. ಚೈತ್ರಾ ಕರೆ ಮಾಡಿದ್ದು ಯಾರಿಗೆ? ಈಕೆ ಇರೋದು ಯಾರ ಜೊತೆ ಇದರ ತನಿಖೆ ನಡೆಯುತ್ತಿದೆ.

ಸದ್ಯಕ್ಕೆ ಚೈತ್ರಾ ಇರುವ ಜಾಗದ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಉಳ್ಳಾಲ ಪೊಲೀಸರು ಬೆಂಗಳೂರಿಗೆ ತೆರಳಿದ್ದು, ಇನ್ನೆರಡು ದಿನಗಳಲ್ಲಿ ಚೈತ್ರಾ ಹೆಬ್ಬಾರ್‌ ನಾಪತ್ತೆ ರಹಸ್ಯ ಬಹಿರಂಗಗೊಳ್ಳಲಿದೆ ಎಂಬ ನಿರೀಕ್ಷೆ ಇದೆ ಎನ್ನಲಾಗಿದೆ.

Leave A Reply

Your email address will not be published.