Oviya Helen: ಕಿರಾತಕ ನಟಿ ಓವಿಯಾ ಸಲಿಂಗಕಾಮಿಯೇ?

Oviya Helen: ಬಹುಭಾಷಾ ನಟಿ, ಕನ್ನಡದ ಕಿರಾತಕ ಸಿನಿಮಾದಲ್ಲಿ ನಟಿಸಿ ಸಖತ್ ಫೇಮಸ್ ಆಗಿದ್ದ ನಟಿ ಓವಿಯಾ ಹೆಲೆನ್‌(Oviya helen) ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಂತೂ ಮದುವೆ, ಲೈಂಗಿಕ ವಿಚಾರದ ಹೇಳಿಕೆಗಳಿಂದ ಅವರು ಫುಲ್ ಟ್ರೆಂಡ್ ಆಗಿದ್ದಾರೆ. ಈ ಹಿಂದೆ ನನಗೆ ಗಂಡನ ಅವಶ್ಯಕತೆಯಿಲ್ಲ. ನಾನು ಮದುವೆಯಾಗಲ್ಲ ಎಂದಿದ್ದ ಈಕೆ ಇದೀಗ ಸಲಿಂಗಕಾಮಿಯೇ ಎನ್ನುವ ಪ್ರಶ್ನೆ, ಅನುಮಾನಗಳು ಶುರುವಾಗಿವೆ.

 

ಕನ್ನಡದಲ್ಲಿ ನಟ ಯಶ್‌ ಜತೆಗೆ ಕಿರಾತಕ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಆಗಮಿಸಿದ್ದ, ಬಾಲಿವುಡ್‌ ಸಿನಿಮಾದಲ್ಲೂ ನಟಿಸಿದ, ಜೊತೆಗೆ ತೆಲುಗು, ತಮಿಳು ಚಿತ್ರಗಳಲ್ಲೂ ಖ್ಯಾತಿ ಗಳಿಸಿದ ನಟಿ ಓವಿಯಾ ಇದೀಗ ಸಿನಿಮಾಗಳಿಂದ ಅಂತರ ಕಾಯ್ದುಕೊಂಡು, ತಮ್ಮ ಬೋಲ್ಡ್‌ ಹೇಳಿಕೆಗಳು ಮತ್ತು ಸೋಷಿಯಲ್‌ ಮೀಡಿಯಾ ಪೋಸ್ಟ್‌ ಮೂಲಕವೇ ಹೆಚ್ಚು ಚರ್ಚೆಯಲ್ಲಿರುತ್ತಾರೆ. ಅಂತೆಯೇ ಕೆಲ ಸಮಯದ ಹಿಂದೆ ಓವಿಯಾ ವೇಶ್ಯಾವಾಟಿಕೆಯನ್ನು ಕಾನೂನುಬದ್ಧ ಮಾಡಿ ಎಂದು ಸ್ಟೇಟ್ ಮೆಂಟ್ ಕೊಟ್ಟಿದ್ದರು. ಅದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈಗ ಕೆಲವು ದಿನಗಳ ಹಿಂದೆ ಸೆಕ್ಸ್ ಬಗ್ಗೆ ಮಾತನಾಡಿದ್ದರು. ಈ ಕಾರಣದಿಂದಾಗಿ ಅಭಿಮಾನಿಯೊಬ್ಬ ಬೆಂಕಿ ರೀತಿಯ ಪ್ರಶ್ನೆ ಕೇಳಿದ್ದು, ನೀನು ಸಲಿಂಗಕಾಮಿಯೇ ಎಂದು ಅನುಮಾನ ವ್ಯಕ್ತಪಡಿಸಿದ್ದಾನೆ.

ಹೌದು, ಕೇವಲ ಸೆಕ್ಸ್ ಗಾಗಿ ನಾನು ಮದುವೆ ಆಗಲಾರೆ. ಸೆಕ್ಸ್ ಮಾಡುವುದಕ್ಕಾಗಿ ಹುಡುಗನನ್ನು ಮದುವೆಯಾಗಿ ಜೀವನ ಪೂರ್ತಿ ಅವನ ಸೇವೆ ಮಾಡಲಾರೆ ಎಂದು ಸಂದರ್ಶನದಲ್ಲಿ ಹೇಳಿಕೆ ನೀಡಿದ್ದಾರೆ. ಈ ಮಾತು ಕೇಳಿದ ಅನೇಕರು ‘ನೀನೇನು ಸಲಿಂಗಕಾಮಿಯೇ?’ (Homosexuality) ಎಂದು ಪ್ರಶ್ನೆ ಮಾಡಿದ್ದಾರೆ.

ನಟಿ ಹೇಳಿದ್ದೇನು?
ಈ ಹಿಂದೆ 2020ರಲ್ಲಿ ನಟಿ ಓವಿಯಾ ಸಂದರ್ಶನವೊಂದರಲ್ಲಿ ನಾನು ಯಾವುದೇ ಕಾರಣಕ್ಕೂ ಮದುವೆಯಾಗುವುದಿಲ್ಲ. ನನಗೆ ಗಂಡನ ಅವಶ್ಯಕತೆ ಇಲ್ಲ ಎಂದು ಹೇಳಿಕೊಂಡಿದ್ದರು. ಇದೀಷ್ಟೇ ಅಲ್ಲದೆ, ಅಭಿಮಾನಿಯೊಬ್ಬ ಹೆಣ್ಣುಮಕ್ಕಳ ಜೀವನ ಹಾಳು ಮಾಡುವ ಬದಲು, ಹಸ್ತಮೈಥುನ ಮಾಡಿಕೊಳ್ಳುವುದೇ ಉತ್ತಮ ಅಲ್ಲವೇ ಮೇಡಂ? ಎಂದು ಅಭಿಮಾನಿಯೊಬ್ಬ ಪ್ರಶ್ನೆ ಎಸೆದಿದ್ದ. ಅದಕ್ಕೆ ಅಷ್ಟೇ ಕೂಲ್ ಆಗಿ ಮತ್ತು ಯಾವುದೇ ಸಂಕೋಚಪಟ್ಟುಕೊಳ್ಳದೇ, ‘ನೀವು ಹೇಳಿದ್ದು ಸರಿಯಾಗಿಯೇ ಇದೆ..’ ಎಂದು ಪ್ರತಿಕ್ರಿಯಿಸಿದ್ದರು. ಅಷ್ಟೇ ಅಲ್ಲ ನಿಮಗೆ ಗಂಡನ ಬಗ್ಗೆ ಏನೆಲ್ಲ ಕಲ್ಪನೆ ಇದೆ ಎಂದಿದ್ದಕ್ಕೆ, ‘ನನಗೆ ಗಂಡನ ಅವಶ್ಯಕತೆ ಇಲ್ಲ’ ಎಂದೂ ಅವರು ಉತ್ತರಿಸಿದ್ದರು.

ನಟಿಯಿಂದ ಸ್ಪಷ್ಟೀಕರಣ:
“ನಾನು ಮದುವೆ ಆಗಿಲ್ಲ ಅನ್ನೋ ಕಾರಣಕ್ಕೆ ಹೀಗೆ ಕಾಮೆಂಟ್‌ಗಳು ಬರುವುದು ಸಹಜ. ಈ ರೀತಿಯ ಪ್ರಶ್ನೆಗಳು ನನಗೆ ಎದುರಾಗುತ್ತಿರುವುದು ಇದೇ ಮೊದಲಲ್ಲ. ಒಬ್ಬ ನಟಿಯಾಗಿ ಈ ರೀತಿಯ ಗಾಸಿಪ್‌ಗಳು, ಕೆಟ್ಟ ಮಾತುಗಳು ಬರುವುದು ಸರ್ವೇ ಸಾಮಾನ್ಯ. ಆದರೆ ನಾನು ಅದ್ಯಾವುದಕ್ಕೂ ತಲೆ ಕೆಡಸಿಕೊಳ್ಳಲ್ಲ. ಅವರು ಹಾಗೇ ಹೇಳಿದ ಮಾತ್ರಕ್ಕೆ ನಾನು ಸಲಿಂಗಕಾಮಿಯಲ್ಲ” ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ಒವಿಯಾ.

Leave A Reply

Your email address will not be published.