Healthy Lifestyle: ಗರಿಕೆ ಹೆಚ್ಚು ರೋಗ ನಿರೋಧಕ ಶಕ್ತಿ ಹೊಂದಿರುವ ಮನೆಮಾದ್ದಾಗಿದೆ
ಮನುಷ್ಯ ನಡೆಯುವ ದಾರಿಯಲ್ಲಿ ಗರಿಕೆ ಸಹ ಬೆಳೆಯುವುದಿಲ್ಲ. ಗಣಪತಿ ಗರಿಕೆ ಪ್ರಿಯ. ಗರಿಮೆಯನ್ನು ಔಷಧಿಯಾಗಿ ಸಹ ಬಳಕೆ ಮಾಡುತ್ತಾರೆ. ಗರಿಕೆಯನ್ನು ಮನೆಮದ್ದಾಗಿ ಸಹ ಬಳಕೆ ಮಾಡಬಹುದು.
ಗರಿಕೆಯು ಮಳೆಗಾಲದಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಗರಿಕೆಯ ಗರಿಗಳು ಮತ್ತು ಕಾಂಡಗಳು ಉದ್ದವಾಗಿರುತ್ತವೆ. ಗಣಪತಿ ಪೂಜೆಯಲ್ಲಿ ಗರಿಕೆ ಇರಲೇ ಬೇಕು. ಕ್ಯಾಲ್ಸಿಯಂ, ರಂಜಕ, ಫೈಬರ್, ಪೊಟ್ಯಾಸಿಯಮ್ ಮತ್ತು ಪ್ರೋಟೀನ್ ಅಂಶಗಳಿದ್ದು, ರೋಗ ನಿವಾರಕ ಗುಣವನ್ನು ಹೊಂದಿರುವ ಔಷಧಿಯಲ್ಲಿ ಬಳಕೆ ಮಾಡಲಾಗುತ್ತದೆ
ಗರಿಕೆಯು ಆಯುರ್ವೇದ ಗುಣವನ್ನು ಹೊಂದಿದೆ. ಬಾಯಲ್ಲಿ ಹುಣ್ಣು ಆದಾಗ ಇದರ ಕಷಾಯ ಮಾಡಿ ಮುಕ್ಕಳಿಸಿದರೆ ಸಾಕು ಪರಿಹಾರವಾಗುತ್ತದೆ.
ಉರಿ ಮೂತ್ರ ದ ಸಮಸ್ಯೆ ಇದ್ದರೇ ನಾಲ್ಕು ಚಮಚ ಗರಿಕೆ ರಸಕ್ಕೆ ಒಂದು ಲೋಟ ಹಾಲು ಸೇರಿಸಿ ದಿನಕ್ಕೆ ಎರಡು ಬಾರಿ ಸೇವಿಸಿ.
ಸ್ವಲ್ಪ ಪ್ರಮಾಣದಷ್ಟು ಗರಿಕೆ, ಎರಡು ಚಮಚ ಜೀರಿಗೆ ಮತ್ತು ಒಂದು ಚಮಚ ಕಾಳು ಮೆಣಸಿನ ಪುಡಿಯನ್ನು ಎರಡು ಲೋಟ ನೀರಿನಲ್ಲಿ ಹಾಕಿ ಕುದಿಸಿ, ಈ ಕಷಾಯವನ್ನು ಕುಡಿಯುವುದರಿಂದ ಅಲರ್ಜಿಯು ಗುಣಮುಖವಾಗುತ್ತದೆ.
ಸುಟ್ಟ ಗಾಯಗಳಿಗೆ ಗರಿಕೆ ರಸವನ್ನು ಹಾಗೂ ಕೊಬ್ಬರಿ ಎಣ್ಣೆಯನ್ನು ಬೆರೆಸಿ ಹಚ್ಚಿದರೆ ಗಾಯ ವಾಸಿಯಾಗುತ್ತದೆ.
ಗರಿಕೆ ರಸ ಆಜೀರ್ಣವನ್ನು ದೂರಮಾಡುತ್ತದೆ. ಹಾಗೂ ಗರಿಕೆ ರಸದ ಜೊತೆಗೆ ಜೇನು ತುಪ್ಪ ಬೆರೆಸಿ ಸೇವಿಸಿ ಸುಸ್ತು ಹೋಗುತ್ತದೆ. ನಿಮ್ಮ ಮೂಗಿನಲ್ಲಿ ರಕ್ತ ಬರುತ್ತಿದ್ದರೆ ಗರಿಕೆ ರಸ ಕುಡಿದರೆ ಸರಿ ಹೋಗುತ್ತದೆ. ಇದರಿಂದ ಮೂಲವ್ಯದಿ ಸಮಸ್ಯೆ ಸಹ ಪರಿಹಾರ ವಾಗುತ್ತದೆ. ಅಕ್ಕಿ ತೊಳೆದ ನೀರಿನಲ್ಲಿ ಗರಿಕೆಯನ್ನು ಸೇರಿಸಿ ಸೇವಿಸಿದರೆ ವಾಂತಿಯಾಗುವುದು ನಿಲ್ಲುತ್ತದೆ. ಹೊಟ್ಟೆಗೆ ಸಂಬಂಧ ಕಾಯಿಲೆಯನ್ನು ಪರಿಹಾರ ಮಾಡುತ್ತದೆ.
ಒಂದು ವೇಳೆ ಶೀತ ಕಫ ಸಹ ಪರಿಹಾರ ವಾಗುತ್ತದೆ. ಗರಿಕೆ ರಸವನ್ನು ಸೇವನೆ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ನಿದ್ರಾಹೀನತೆ, ಆಯಾಸದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.