ICICI Bank: ಸಾರ್ವಜನಿಕ ಖಾತೆಯಿಂದ 16 ಕೋಟಿ ಕದ್ದ ಐಸಿಐಸಿಐ ಬ್ಯಾಂಕ್ ಮ್ಯಾನೇಜರ್
ನವದೆಹಲಿ : ಇಂದು ನಾವು ಡಿಜಿಟಲ್ ಯುಗದಲ್ಲಿ ಇದ್ದೇವೆ. ನಮ್ಮ ಹಣವು ಯಾವಾಗ ಬೇಕಾದರೂ ಇನ್ನೊಬ್ಬರು ದೋಚಬುಹುದು. ಅದೇ ರೀತಿ ಈ ಪ್ರಕರಣದಲ್ಲಿ ಬ್ಯಾಂಕ್ ಮೆನೇಜರ್ 16 ಕೋಟಿ ರೂಪಾಯಿಯನ್ನು ಕದ್ದಿದ್ದನೆ ಎಂದು ಭಾರತೀಯ ಮೂಲದ ಶ್ವೇತಾ ಶರ್ಮಾ ಆರೋಪ ಮಾಡಿದ್ದಾರೆ. ಇವರು ಅಮೆರಿಕ ಖಾತೆಯಿಂದ ಐಸಿಐಸಿ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಿದ್ದಾರೆ. ಆದರೆ ಬ್ಯಾಂಕ್ ಮೆನೇಜರ್ ಫೇಕ್ ಖಾತೆ ಮಾಡಿಕೊಂಡ ಸಹಿಯನ್ನು ಕೂಡ ನಕಲಿಸಿ ನನ್ನ ಖಾತೆಯ ಹಣವನ್ನು ಕದ್ದಿದ್ದಾರೆ ಎಂದು ಆರೋಪಿಸಿದ್ದಾರೆ.
ಬಹುತೇಕ ಜನರು ಹಣವನ್ನು ಮನೆಯಲ್ಲಿ ಇಟ್ಟರೆ ಕಷ್ಟ ಎಂದು ಬ್ಯಾಂಕಿನಲ್ಲಿ ಇಡುತ್ತಾರೆ. ಹಾಗೇ ಶ್ವೇತಾ ಹಾಂಕಾಂಗ್ ನಲ್ಲಿ ತಮ್ಮ ಇಡೀ ಜೀವಾಮಾನವೆಲ್ಲ ಕೂಡಿಟ್ಟ 13.5 ಕೋಟಿ ಹಣವನ್ನು ಐಸಿಐಸಿ ಬ್ಯಾಂಕ್ ನಲ್ಲಿ ಎಫ್ಡಿ ಇಟ್ಟಿದ್ದರು. ಇದಕ್ಕೆ 4 ವರ್ಷದ ಬಡ್ಡಿ ಸೇರಿಸಿ 16 ಕೋಟಿಗೆ ಹೆಚ್ಚಲಿದೆ ಎಂದು ಕೊಂಡಿದ್ದರು. ಜನವರಿಯಲ್ಲಿ ಬ್ಯಾಂಕ್ ಗೆ ಹೊಸ ಉದ್ಯೋಗಿ ಬಂದ ನಂತರ ತಮ್ಮ ಖಾತೆ ಖಾಲಿಯಾಗಿರುವ ತಿಳಿದಿದೆ.
ಈ ವಿಚಾರದ ಸಲುವಾಗಿ ಕೂಡಲೇ ಮೆನೇಜರ್ ಅನ್ನು ಐಸಿ ಐಸಿ ಬ್ಯಾಂಕ್ ಅಮಾನತ್ತು ಗೊಳಿಸಲಾಗಿದೆ. ಜೊತೆಗೆ ದೆಹಲಿ ಪೊಲೀಸರು ದೂರನ್ನು ದಾಖಲಿಸಿಕೊಂಡಿದ್ದಾರೆ. ನಾವು ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡುತ್ತೇವೆ. ನಾವು ಗ್ರಾಹಕರಿಗೆ ವಿವಾದಿತ 9.27 ಕೋಟಿ ನೀಡಲು ಸಿದ್ದ. ಇನ್ನೂ ಬಾಕಿ ಹಣವನ್ನು ತನಿಖೆ ಪೂರ್ಣಗೊಂಡ ನಂತರ ನೀಡುತ್ತೇವೆ ಎಂದು ಬ್ಯಾಂಕ್ ತಿಳಿಸಿದೆ. ಅವರು ಬ್ಯಾಂಕ್ ಖಾತೆ ಓಪನ್ ಮಾಡಿದಾಗಿನಿಂದ ಸತತವಾಗಿ ಅವರ ಮೊಬೈಲ್ ಮತ್ತು ಮೇಲ್ ಗೆ ಅವರ ವಹಿವಾಟಿನ ಬಗ್ಗೆ ಮಾಹಿತಿ ನೀಡಿದ್ದೇವೆ ಎಂದು ಬ್ಯಾಂಕ್ ಹೇಳಿದೆ.
ಮಹಿಳೆ ಹೇಳಿರುವಂತೆ ಮೊದಲು ನನ್ನ ವಹಿವಾಟಿನ ಬಗ್ಗೆ ಮಾಹಿತಿ ನೀಡುತ್ತಿದ್ದರು. ನಂತರ ನನಗೆ ಗೊತ್ತಿಲ್ಲದೆ ಡೆಬಿಟ್ ಕಾರ್ಡ್ ಅನ್ನು ಮೊಬೈಲ್ ನಂಬರ್ ಅನ್ನು ಬದಲಾಯಿಸಿದ್ದಾರೆ. ಎಂದು ಆರೋಪ ಮಾಡಿದ್ದಾರೆ. ಮೊಬೈಲ್ ಸಂಖ್ಯೆಯನ್ನು ಗ್ರಾಹಕರ ಮಾಲೀಕತ್ವದ ಕಂಪನಿಯ ವೆಬ್ಸೈಟ್ನಲ್ಲಿ ಪಟ್ಟಿ ಬರೆಯಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ.
ರಾಜಸ್ತಾನದಲ್ಲಿ ಸಹ ಇಂತದ್ದೇ ಒಂದು ಘಟನೆ ನಡೆದಿತ್ತು. ಬ್ಯಾಂಕ್ ಗಳು ಹಣವನ್ನು ರಕ್ಷಣೆ ಮಾಡುತ್ತವೆ ಎಂದು ನಂಬಿ ಹಣ ಇಟ್ಟರೆ, ಹೀಗೆ ಆದರೆ ಗ್ರಾಹಕರ ಗತಿ ಏನು??