Good News Farmers: ಕುರಿ-ಕೋಳಿ-ಹಂದಿ ಸಾಕಣೆ ಮಾಡುವವರಿಗೆ ಸಿಹಿ ಸುದ್ದಿ ನೀಡಿದ ಸರಕಾರ
ಇತ್ತೀಚೆಗೆ ರೈತರು ಕೃಷಿಯನ್ನು ಮಾಡುವುದನ್ನೇ ನಿಲ್ಲಿಸಿ ಬಿಟ್ಟಿದ್ದಾರೆ. ಕೆಲಸ ಮಾಡಲು ಕೂಲಿಕಾರರು ಸಿಗೋದಿಲ್ಲ, ಮಳೆಯು ಕಾಲ ಕಾಲಕ್ಕೆ ಸರಿಯಾಗಿ ಬೀಳದೆ ಇಟ್ಟ ಬೆಳೆ ಸಹ ಕೈಗೆ ಬರುತ್ತಿಲ್ಲ. ಇವುಗಳು ರೈತರ ಬದುಕನ್ನು ದುಸ್ತಿರಗೊಳಿಸಿವೆ .
ಈ ಕಾರಣದಿಂದಲೇ ರೈತರು ತಮ್ಮ ಕೃಷಿಯ ಜೊತೆಜೊತೆಗೆ ಉಪ ಕಸುಬುಗಳಾದ ಕುರಿ ಕೋಳಿ ಸಾಕಾಣಿಕೆ,ಹೈನುಗಾರಿಕೆ, ಹಂದಿ ಸಾಕಾಣಿಕೆ ಇವುಗಳು ಸಾಕಷ್ಟು ಆದಾಯವನ್ನು ತಂದು ಕೊಡುತ್ತವೆ.
ಪ್ರತಿಯೊಬ್ಬ ರೈತರು ಉಪಕಸುಬುಗಳನ್ನು ಮಾಡಿ ಆದಾಯವನ್ನು ಗಳಿಸಬೇಕು ಎಂದು ಸರ್ಕಾರ ಬಜೆಟ್ ನಲ್ಲಿ ಉಪ ಕಸುಬು ಮಾಡುವವರಿಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದೆ.
ಅದರಲ್ಲೂ ಮಹಿಳೆಯರು ಹೈನುಗಾರಿಕೆ ಮಾಡುವುದನ್ನು ಉತ್ತೇಜಿಸಿ ಹಸು ಎಮ್ಮೆಯನ್ನು ಕೊಳ್ಳಲು ಸಾಲವನ್ನು ಹಾಗೂ ಶೇ 6 ರ ಬಡ್ಡಿಯಲ್ಲಿ ಸಹಾಯಧನ ನಿದಾಲಗುವುದು.
ಹಂದಿ ಮತ್ತು ಕುರಿ ಸಾಕಾಣಿಕೆ ಮಾಡುವವರಿಗೆ ಉತ್ತಮ ತರಬೇತಿಯನ್ನು ನೀಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ.
ಅಮೃತ ಸ್ವಾಭಿಮಾನಿ ಕುರಿಗಾಯಿ ಯೋಜನೆಯನ್ನು ಹಾಗೇ ಮುಂದುವರೆದಿರುವ ಸಿದ್ದರಾಮಯ್ಯ ಇದರ ಅಡಿ 10 ಸಾವಿರ ಕುರಿಗಾಹಿ ಗಳಿಗೆ ಸಹಾಯಧನ ನೀಡುವ ಜೊತೆಗೆ ಅಮೃತಮಹಲ್, ಹಳ್ಳಿಕಾರ್, ಖಿಲಾರಿ ಹಸುಗಳ ಸಂವರ್ಧನೆ ಮಾಡಿ ಸರ್ಕಾರವೇ ಕಾರುಗಳನ್ನು ಒದಗಿಸುತ್ತದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ 20 ತಾಲೂಕ್ ಕೇಂದ್ರಗಳಲ್ಲಿ ಪಾಲಿಕ್ಲಿನಿಕ್ ಅನ್ನು ಸ್ಥಾಪನೆ ಮಾಡುವುದು. ಜಿಲ್ಲಾ ಪಶುವೈದ್ಯಕೀಯ ಕೇಂದ್ರಗಳನ್ನು ಜಿಲ್ಲಾ ಮಟ್ಟಕ್ಕೆ ಏರಿಸಲಾಗುವುದು ಎಂದರು. ಪಶುಕೇಂದ್ರಗಳನ್ನು ಉನ್ನತಿಕರಿಸಲು 10ಕೋಟಿ ಮೀಸಲಿಡಲಾಗಿದೆ. ರಾಜ್ಯದಲ್ಲಿ 200 ಪಶುವೈದ್ಯ ಸಂಸ್ಥೆಗಳಿವೆ. ಆ ಪೈಕಿ 100 ಕೋಟಿ ಯಲ್ಲಿ ಹಣ ನಿರ್ಮಾಣ ಮಾಡಲಾಗುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.