Arun yogiraj: ಇದುವರೆಗೂ ಯಾರೂ ನೋಡಿರದ ಬಾಲ ರಾಮನ ಫೋಟೋ ಹಂಚಿಕೊಂಡ ಅರುಣ್ ಯೋಗಿರಾಜ್ !!

 

 

Arun yogiraj: ಅಯೋಧ್ಯೆಯ ರಾಮಲಲ್ಲಾನ ಮೂರ್ತಿ ಕೆತ್ತಿದ ಅರುಣ್ ಯೋಗಿರಾಜ್(Arun yogiraj) ಅವರು ಇದೀಗ ಭಾರೀ ಸುದ್ದಿಯಾಗುಯ್ತಿದ್ದಾರೆ. ಸಂದರ್ಶನ, ಸನ್ಮಾನಗಳು ಅವರನ್ನು ಅರಸಿ ಬರುತ್ತಿವೆ. ಅಂತೆಯೇ ಇದೀಗ ಅರುಣ್ ಅವರು ಇದವರೆಗೂ ಯಾರೂ ನೋಡದ ತಾವು ಕೆತ್ತಿದ ರಾಮನ ಮೂರ್ತಿಯ ಫೋಟೋ ಒಂದನ್ನು ಹಂಚಿಕೊಂಡಿದ್ದು, ಅದು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.

ಹೌದು, ರಾಮ್ ಲಲ್ಲಾ(Ramalalla) ವಿಗ್ರಹವನ್ನು ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್ ಅವರು ಆರಂಭದಲ್ಲಿ ಕೆತ್ತನೆ ಕಾರ್ಯದಲ್ಲಿ ತೊಡಗಿಕೊಂಡ ಸಮಯದಲ್ಲಿನ ರಾಮ್‌ಲಲ್ಲನ ವಿಗ್ರಹವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಜನವರಿ 22 ರಂದು ನಡೆದ ಪ್ರತಿಷ್ಠಾಪನಾ ಸಮಾರಂಭಕ್ಕೆ ಮುಂಚಿತವಾಗಿ ಅವರು ವಿಗ್ರಹವನ್ನು ಕೆತ್ತುವ ಪ್ರಕ್ರಿಯೆಯಲ್ಲಿದ್ದಾಗ ಈ ಚಿತ್ರ ಇದಾಗಿದೆ. ಈ ಸುಂದರ ಫೋಟೋ ಕಂಡು ಇಡೀ ಜನ ಭಕ್ತ ಸಮೂಹವೇ ಪುಳಕಿತಗೊಂಡಿದೆ. ಅಷ್ಟು ಸುಂದರವಾಗಿದೆ ಈ ಫೋಟೋ!!

Leave A Reply

Your email address will not be published.