Viral video: ಮದುವೆ ಮಾಡಿಸಿದರೆ ಮಾತ್ರ ಓದುತ್ತೇನೆಂದ 13ರ ಪೋರ – ಕೊನೆಗೂ ಲಾಟ್ರಿ ಹೊಡೆದೇ ಬಿಟ್ಟ!!

 

 

Viral video: ಈಗಿನ ಮಕ್ಕಳು ತುಂಬಾ ಹುಷಾರು, ಚೂಟಿ. ಎಷ್ಟರಮಟ್ಟಿಗೆಂದರೆ ಬೈಕು, ಕಾರು ಅಥವಾ ಏನಾದರೂ ಒಂದು ಅಮೂಲ್ಯವಾದಂತ ವಸ್ತುಗಳನ್ನು ಕೊಡಿಸಿದರೆ ಮಾತ್ರ ತಾವು ಓದುತ್ತೇವೆ ಅಥವಾ ಯಾವುದಾದರೂ ಒಂದು ಕೆಲಸವನ್ನು ಮಾಡುತ್ತೇವೆ ಎಂದು ಹಠ ಹಿಡಿಯುತ್ತಾರೆ. ಅಂತೆಯೇ ಇಲ್ಲೊಬ್ಬ 13ರ ಪೋರ ತಾನು ಮುಂದೆ ಓದಬೇಕಾದರೆ ತನಗೆ ಪ್ರೀತಿಸಿದ ಮದುವೆ ಮಾಡಿಸಿ ಎಂದು ತನ್ನ ಹೆತ್ತವರಿಗೆ ದುಂಬಾಲು ಬಿದ್ದಿದ್ದಾನೆ. ಅಷ್ಟೇ ಅಲ್ಲ ಮದುವೆಯೂ ಆಗಿದ್ದಾನೆ. ಅರೆ, ಏನಿದು ಆಶ್ಚರ್ಯ ಅನಿಸ್ತಿದೆಯಾ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ.

ಪ್ರೀತಿಸಿದ ಹುಡುಗಿಯನ್ನು ವರಿಸಲು ಅನೇಕರು ತಮ್ಮ ಪೋಷಕರಿಗೆ ಬೇರೆ ಬೇರೆ ರೀತಿಯಲ್ಲಿ ಪ್ರೀತಿಯ, ಸೆಂಟಿಮೆಂಟಿನ ಬೆದರಿಕೆಗಳನ್ನು ಹಾಕುತ್ತಾರೆ. ಆದರೆ ನೆರೆಯ ಪಾಕಿಸ್ತಾನದ(Pakisthan)13ರ ಪೋರ ತಾನು ಮುಂದೆ ಓದಬೇಕಾದರೆ ತಾನು ಪ್ರೀತಿಸಿದ ಹುಡುಗಿಯೊಂದಿಗೆ ಮದುವೆ ಮಾಡಿಸಿ ಎಂದು ಬೆದರಿಕೆ ಒಡ್ಡಿದ್ದಾನೆ. ಕೊನೆಗೂ ರೋಸಿಹೋದ ಪೋಷಕರು ಮದುವೆ ಮಾಡಿಸೇಬಿಟ್ಟಿದ್ದಾರೆ. ಇದೀಗ ಈ ಕುರಿತಂತೆ ಒಂದು ವಿಡಿಯೋ ಭಾರೀ ವೈರಲ್(Viral video)ಆಗಿದೆ.

ಹೌದು, ಇದು ಅಚ್ಚರಿ ಅನಿಸಿದರೂ ಸತ್ಯ. 13 ವರ್ಷದ ಹುಡುಗನ (Boy) ವಿವಾಹದ (Marriage) ವೀಡಿಯೋವೊಂದು ಇದೀಗ ಇನ್‌ ಸ್ಟಾಗ್ರಾಮ್‌ ಖಾತೆಯಲ್ಲಿ ಸಾಕಷ್ಟು ವೈರಲ್‌ ಆಗಿದೆ. ಈ ವೀಡಿಯೋದಲ್ಲಿ 13 ವರ್ಷದ ಬಾಲಕ ಹಾಗೂ 12 ವರ್ಷದ ಹುಡುಗಿಯ ಮದುವೆಯಾಗುವುದನ್ನು ಕಾಣಬಹುದು. ಬಾಲಕ-ಬಾಲಕಿಯರ ಮದುವೆಯ ವೀಡಿಯೋ (Video) ನೋಡಿದ ನೆಟ್ಟಿಗರು ಶಾಕ್‌ ಆಗಿದ್ದಾರೆ.

ಅಂದಹಾಗೆ ವಿಡಿಯೋದಲ್ಲಿ. ಹುಡುಗ-ಹುಡುಗಯರಿಬ್ಬರು ಮದುವೆ ಡ್ರೆಸ್ ನಲ್ಲಿ ಮಿಂಚುತ್ತಿದ್ದಾರೆ. ಪುಟ್ಟ ವರ ತಲೆಯ ಮೇಲೆ ಪಗಡಿ ಧರಿಸಿದ್ದರೆ, ವಧು ವಿವಾಹದ ಅದ್ದೂರಿ ದಿರಿಸನ್ನು (Dress) ಧರಿಸಿದ್ದಾಳೆ. “13 ವರ್ಷದ ಹುಡುಗ ಮದುವೆಯಾಗುತ್ತಿದ್ದಾನೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಮದುವೆಯಾಗುವುದು ಸರಿಯೇ? ಮದುವೆಯಾಗಲು 13 ವರ್ಷ ವಯೋಮಾನ ಸಾಕೇ? ಎಂದು ಪ್ರಶ್ನಿಸಿ ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ.

Leave A Reply

Your email address will not be published.