Electricity Scheme: PM ಉಚಿತ ವಿದ್ಯುತ್ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ

ಮನೆ ಮನೆಗೆ ಸೋಲಾರ್ ಅಳವಡಿಸುವ ಕೇಂದ್ರ ಸರ್ಕಾರದ ಯೋಜನೆ ಫೆ.13 ರಿಂದ ಶುರುವಾಗಿದೆ. ಒಟ್ಟು 75 ಸಾವಿರ ಕೋಟಿಯಲ್ಲಿ ಈ ಯೋಜನೆಯನ್ನು ಪ್ಲಾನ್ ಮಾಡಲಾಗಿದೆ. ಆ ಪೈಕಿ 2024- 25 ಸಾಲಿನಲ್ಲಿ 10 ಸಾವಿರ ಕೋಟಿ ಯನ್ನು ಬಳಕೆ ಮಾಡಲಿದೆ. ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಿರುವ ಈ ಯೋಜನೆಯ ಫಲವನ್ನು ಯಾರೆಲ್ಲ ಪಡೆಯಬಹುದು ಎಂದು ನೋಡೋಣ…

ಪ್ರಧಾನ್ ಮಂತ್ರಿ ಸೂರ್ಯೋದಯ ಯೋಜನೆ

ಈ ಯೋಜನೆಯ ಮೂಲಕ ಬಡವರು ಹಾಗೂ ಮಧ್ಯಮ ವರ್ಗದ ಜನರ ವಿದ್ಯುತ್ ಬಿಲ್ ಕಡಿಮೆ ಮಾಡುವುದಷ್ಟೇ ಅಲ್ಲದೇ ದೇಶವನ್ನು ಇಂಧನ ವಿಭಾಗದಲ್ಲಿ ಸ್ವಾವಲಂಬನೆ ಪಡೆಯಲು ಸಹಾಯವಾಗಲಿದೆ. ಸುಮಾರು 1 ಕೋಟಿ ಮನೆಗಳಿಗೆ ಸೌರ ಫಲಕಗಳನ್ನು ಹಾಕುವ ಉದ್ದೇಶವಿದ್ದು, ಸಾಲ ಹಾಗೂ ವರ್ಷಕ್ಕೆ 300 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಲಿದೆ. ಈ ಯೋಜನೆಯಿಂದ ವರ್ಷಕ್ಕೆ 18 ಸಾವಿರದ ಮೊತ್ತದ ಹಣ ಉಳಿತಾಯವಾಗಲಿದೆ ಎಂದು ಹೇಳಲಾಗಿದೆ.

ವೆಬ್‌ಪೇಜ್‌ ಓಪನ್ ಮಾಡಿದೆ.
ಈ ಯೋಜನೆಯ ಜನರಿಗೆ ಸಲ್ಲಿಸುವ ಹೊಣೆಯನ್ನು ಸ್ಥಳೀಯ ಸಂಸ್ಥೆ ಹಾಗೂ ಆಯಾ ಗ್ರಾಮ ಪಂಚಾಯಿತಿಗಳಿಗೆ ನೀಡಲಾಗಿದೆ. ಯೋಜನೆ ಬಗ್ಗೆ ಮಾಹಿತಿ ತಿಳಿಯಲು ವೆಬ್ ಪೇಜ್ ಓಪನ್ ಮಾಡಿದೆ.

ಯಾರೆಲ್ಲ ಪಡೆಯಬಹುದು
ಮೊದಲು ಭಾರತೀಯನಾಗಿರಬೇಕು.
ವಾರ್ಷಿಕ ಆದಾಯ 1.5 ಲಕ್ಷಕ್ಕಿಂತ ಕಡಿಮೆ ಇರಬೇಕು.
ಮನೆಯಲ್ಲಿ ಸರ್ಕಾರಿ ನೌಕರರು ಇರುವಂತಿಲ್ಲ.
ಸ್ವಂತ ಮನೆ ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಆಗಿರಬೇಕು.
18 ವರ್ಷ ತುಂಬಿದವರು ಅರ್ಜಿ ಸಲ್ಲಿಸಬಹುದು. ಹಾಗೂ ಬೆಸ್ಕಾಂ ನ ಒಪ್ಪಿಗೆ ನಂತರ ಸಬ್ಸಿಡಿ ನೀಡಲಾಗುತ್ತದೆ.

ಯೋಜನೆಯ ಪ್ರಯೋಜನಗಳು.

ಸೌರಫ‌ಲಕ ಹಾಕಲು ಸಬ್ಸಿಡಿ ಹಾಗೂ ಸಾಲ ದೊರೆಯುತ್ತದೆ.
10 kw ನ ವಿದ್ಯುತ್ ಉತ್ಪಾದನೆ ಮಾಡಬಹುದು.
3 kw ಗೆ ಶೇ 40 ಹಾಗೂ ಅದಕ್ಕಿಂತ ಹೆಚ್ಚಿನದಕ್ಕೆ ಶೇ 20 ರಷ್ಟು ಸಬ್ಸಿಡಿ.
5 ವರ್ಷ ನಿರ್ವಹಣ ವಾರಂಟಿ ಹಾಗೂ ಬಿಲ್ ಮೊತ್ತ ಕಡಿಮೆಯಾಗಲಿದೆ.
ವಿದ್ಯುತ್ ಅನ್ನು ಮಾರಾಟ ಸಹ ಮಾಡಬಹುದು.
ವರ್ಷಕ್ಕೆ 300 ಯೂನಿಟ್ ವಿದ್ಯುತ್ ಉಚಿತ.

ದಾಖಲೆಪತ್ರಗಳು ಅಗತ್ಯ

ಆಧಾರ್ ಕಾರ್ಡ್
ರೇಷನ್ ಕಾರ್ಡ್
ವೋಟರ್ ಐಡಿ
ಪಾನ್ ಕಾರ್ಡ್
6 ತಿಂಗಳ ವಿದ್ಯುತ್ ಬಿಲ್
ಮೊಬೈಲ್ ನಂಬರ್ ಹಾಗೂ ಫೋಟೋ
ಕ್ಯಾಸ್ಟ್ ಆಂಡ್ ಇನ್ಕಮ್
ಮನೆ ದಾಖಲೆ ಪತ್ರ
ವಿಳಾಸ ದೃಢೀಕರಿಸಲು ಪತ್ರ.
ಇ ಮೇಲ್

ಸೋಲಾರ್‌ ರೂಫ್ಟಾಪ್‌ ಕ್ಯಾಲ್ಕುಲೇಟರ್‌ನಿಂದ ನಿಮಗೆ ಬೇಕಾದ ಎಲ್ಲ ಮಾಹಿತಿಯನ್ನು ಪಡೆಯಬಹುದಾಗಿದೆ.
solarrooftop.gov.in ಈ ವೆಬ್ ಸೈಟ್ ನಲ್ಲಿ ಎಲ್ಲ ಮಾಹಿತಿ ದೊರೆಯುತ್ತದೆ.

ಅರ್ಜಿ ಹಾಕುವುದು ಹೇಗೆ

ಮೊದಲು https://pmsuryaghar.gov.i ಅನ್ನು ಓಪನ್ ಮಾಡಿಕೊಳ್ಳಿ. ಹೋಂ ಪೇಜ್ ಗೆ ಹೋಗಿ ಅಪ್ಲೈ ಫಾರ್‌ ರೂಫ್ ಟಾಪ್ ಅನ್ನು ಒತ್ತಿ. ಒತ್ತಿದ ತಕ್ಷಣ ಹೊಸದೊಂದು ಪುಟ ಓಪನ್ ಆಗುತ್ತದೆ. ನಿಮ್ಮ ವಿವರಗಳನ್ನು ತುಂಬುತ್ತ ಹೋಗಿ. ಎಲ್ಲ ಮಾಹಿತಿ ಹಾಕಿದ ನಂತರ ನೆಕ್ಸ್ಟ್ ಮೇಲೆ ಒತ್ತಿ. ರಿಜಿಸ್ಟ್ರೇಷನ್ ಪಾರ್ಮ್ ಓಪನ್ ಆಗುತ್ತದೆ. ಅದರಲ್ಲಿ ಸರಿಯಾದ ಮಾಹಿತಿ ತುಂಬಿ ದಾಖಲೆಗಳನ್ನು ಸಲ್ಲಿಸಿ. ನಂತರ ಬೆಸ್ಕಾಂ ನಿಂದ ಅನುಮೋದನೆ ಬರುವವರೆಗೂ ಕಾಯಿರಿ. ಫಲಕವನ್ನು ಹಾಕಿದ ನಂತರ ಅದರ ಆ ಮಾಹಿತಿಯನ್ನು ಸಲ್ಲಿಸಬೇಕು. ಹಾಗೂ ನೆಟ್ ಮೀಟರ್ ಗೆ ಅರ್ಜಿ ಹಾಕಬೇಕು. ಬೆಸ್ಕಾಂ ಅವರು ನಿಮ್ಮ ಯೋಜನೆಯನ್ನು ಪರಿಶೀಲಿಸಿ ಕಮಿಷನ್ ಪ್ರಮಾಣ ಪತ್ರ ನೀಡುತ್ತಾರೆ. ಕೊನೆಗೆ ನಿಮ್ಮ ಬ್ಯಾಂಕ್ ಖಾತೆಯ ಚೆಕ್ ಅನ್ನು ಅಪ್ಲೋಡ್ ಮಾಡಿ. ತಿಂಗಳೊಳಗೆ ಹಣ ಬೀಳುತ್ತದೆ.

Leave A Reply

Your email address will not be published.