DL : ಡ್ರೈವಿಂಗ್ ಲೈಸೆನ್ಸ್’ಗೆ ಬಂತು ಹೊಸ ಟಫ್ ರೂಲ್ಸ್- ಲೈಸೆನ್ಸ್ ಬೇಕಂದ್ರೆ ಇನ್ಮುಂದೆ ಇಲ್ಲೂ ಡ್ರೈವ್ ಮಾಡಬೇಕು !!
DL: ಹೊಸದಾಗಿ ಡ್ರೈವಿಂಗ್ ಲೈಸೆನ್ಸ್ ಮಾಡಿಸುವವರಿಗೆ ಶಾಕಿಂಗ್ ಸುದ್ದಿಯೊಂದು ಬಂದಿದ್ದು, ಇನ್ಮುಂದೆ ಲೈಸೆನ್ಸ್ ಮಾಡಿಸುವುದು ಅಷ್ಟು ಸುಲುಭ ಅಲ್ಲ! ಯಾಕೆಂದರೆ ಲೈಸೆನ್ಸ್ ಪಡೆಯಲು ಇನ್ನು ಟ್ರಾಫಿಕ್ ಇರೋ ಜಾಗದಲ್ಲೂ ಡ್ರೈವಿಂಗ್ ಮಾಡಬೇಕು!!
ಹೌದು, DL ಪಡೆಯಲು ಇದೀಗ ಹೊಸ ಟಫ್ ರೂಲ್ಸ್ ಬರುತ್ತಿದ್ದು, ವಿದೇಶಗಳಲ್ಲಿರುವಂತೆ ಲೈಸೆನ್ಸ್ ಪದ್ಧತಿ ಜಾರಿಗು ಬರುತ್ತಿದೆ. ಅಂತೆಯೇ ಕೇರಳ(Kerala) ಮೋಟಾರು ವಿಭಾಗ ಅತ್ಯಂತ ಕಠಿಣ ನಿಯಮದ ಡ್ರೈವಿಂಗ್ ಲೈಸೆನ್ಸ್ ಪದ್ಧತಿಯನ್ನು ಜಾರಿ ಮಾಡಿದೆ. ವಾಹನ ಟೆಸ್ಟ್ ಡ್ರೈವಿಂಗ್ ಕೇವಲ ಟ್ರಾಕ್‌ನಲ್ಲಿ ಮಾಡಿದರೆ ಸಾಲದು, ಟ್ರಾಫಿಕ್ ರಸ್ತೆಯಲ್ಲೂ ಮಾಡಬೇಕು. ಇದರ ಜೊತೆಗೆ ಹಲವು ಹಂತದ ಪರೀಕ್ಷೆಗಳಲ್ಲಿ ಪಾಸ್ ಮಾಡಬೇಕೆಂದು, ಹೀಗಾದರೆ ಮಾತ್ರ ಲೈಸೆನ್ಸ್ ಸಿಗಲಿದೆ ಎಂದು ಆದೇಶ ಹೊರಡಿಸಿದೆ.
ಇಷ್ಟೇ ಅಲ್ಲದೆ ಮೋಟಾರುಸೈಕಲ್‌ನಲ್ಲಿ ಪರೀಕ್ಷೆಗೆ 95ಸಿಸಿ ಮೇಲಿನ ಬೈಕ್‌ಗಳನ್ನು ಮಾತ್ರ ಬಳಸಬೇಕು. ಇನ್ನು ಡ್ರೈವಿಂಗ್ ಟೆಸ್ಟ್‌ಗೆ ಬಳಸುವ ವಾಹನಗಳು 15 ವರ್ಷಕ್ಕಿಂತ ಹಳೆಯ ವಾಹನ ಆಗಿರಬಾರದು. ಅದು ಡ್ರೈವಿಂಗ್ ಸ್ಕೂಲ್ ವಾಹನ ಆಗಿರಬುಹುದು ಅಥವಾ ಖಾಸಗಿ ವಾಹನವೇ ಆಗಿರಬೇಕು. ವಾಹನ 15 ವರ್ಷಕ್ಕಿಂತ ಹಳೆಯವಾಹನವಾಗಿರಬಾರದು. ಅಲ್ಲದೆ ಆಟೋಮ್ಯಾಟಿಕ್ ವಾಹನ, ಎಲೆಕ್ಟ್ರಿಕ್ ವಾಹನ ಬಳಸುವಂತಿಲ್ಲ.
ಈ ನೂತನ ನಿಯಮ ಕೇರಳದಲ್ಲಿ ಮೇ.01ರಿಂದ ಜಾರಿಗೆ ಬರುತ್ತಿದೆ. ಒಟ್ಟಿನಲ್ಲಿ ಕೇರಳದಲ್ಲಿ ಮೋಟಾರು ವಿಭಾಗ ಲೈಸೆನ್ಸ್ ಪಡೆಯುವ ಪದ್ಧತಿಯನ್ನು ಪರಿಷ್ಕರಿಸಿರಿವುದರಿಂದ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಇದೀಗ ಸಾಹಸವನ್ನೇ ಮಾಡಬೇಕು.