Kodi shri: ಸದ್ಯದಲ್ಲೇ ರಾಷ್ಟ್ರೀಯ ನಾಯಕ, ಸಂನ್ಯಾಸಿ ಸೇರಿ ಮೂವರ ಸಾವು !! ಕೋಡಿ ಶ್ರಿಗಳಿಂದ ಮತ್ತೊಂದು ಭಯಾನಕ ಭವಿಷ್ಯ

Kodi shri: ಕೋಡಿ ಶ್ರೀಗಳ ಭವಿಷ್ಯ ಎಂದರೆ ಎಷ್ಟು ಪವರ್ ಫುಲ್ ಎಂದು ಎಲ್ಲರಿಗೂ ತಿಳಿದಿದೆ. ಅವರು ಭವಿಷ್ಯ ನುಡಿಯುತ್ತಾರೆ ಅಂದ್ರೆ ಎಲ್ಲರಿಗೂ ಭಯ, ಭಕ್ತಿ. ಯಾಕೆಂದರೆ ಅವರು ನುಡಿಯುವ ಅನೇಕ ಭವಿಷ್ಯಗಳು ನಿಜವಾಗಿವೆ. ಅಂತೆಯೇ ಇದೀಗ ಅವರು ಮತ್ತೊಂದು ಭಯಾನಕ ಭವಿಷ್ಯವನ್ನು ನುಡಿದಿದ್ದಾರೆ.

ಹೌದು, ಕೋಡಿಮಠದ ಶ್ರೀ(Kodi shri) ಶಿವಯೋಗಿ ರಾಜೇಂದ್ರ ಸ್ವಾಮಿಜಿಯವರು ಶಾಕಿಂಗ್ ಭವಿಷ್ಯ ನುಡಿಸಿದ್ದಾರೆ. ಇದು ಇಡಿ ದೇಶವೇ ನಿಬ್ಬೆರಗಾಗುವಂತೆ ಮಾಡುವ ಭವಿಷ್ಯವಾಗಿದ್ದು, ಸದ್ಯದಲ್ಲೇ ಇಬ್ಬರು ರಾಷ್ಟ್ರಮಟ್ಟದ ನಾಯಕರಿಗೆ ಸಾವಿನ ಕಂಟಕ ಇದ್ದು, ಓರ್ವ ಧಾರ್ಮಿಕ ಪ್ರಮುಖರು ಕೂಡ ಸಾವಿಗೀಡಾಗಲಿದ್ದಾರೆ ಎಂದು ಹೇಳಿದ್ದಾರೆ.

ಅಲ್ಲದೆ ವಿದೇಶಗಳಲ್ಲಿ ಆಗುವ ಕೆಲ ಬೆಳವಣಿಗೆಗಳಿಂದ ಭಾರತಕ್ಕೂ ಯುದ್ಧ ಭೀತಿ ಎದುರಾಗಲಿದೆ, ಕರ್ನಾಟಕಕ್ಕೆ ಸಂಬಂಧಿಸಿದಂತೆ ನಾಡಿನಲ್ಲಿ ಮುಂಬರುವ ದಿನಗಳಲ್ಲಿ ಅಕಾಲಿಕ ಮಳೆಯಿಂದ ಬೆಳೆ, ಪ್ರಾಣ ಹಾನಿ ಆಗುವ ಸಾಧ್ಯತೆ ಹೆಚ್ಚಾಗಿದೆ. ಬರಗಾಲದಿಂದ ತತ್ತರಿಸಿದ್ದ ಜನರು ಮುಂದಿನ ದಿನಗಳಲ್ಲಿ ಪ್ರವಾಹ ಎದುರಿಸಲಿದ್ದಾರೆ ಎಂದು ಅವರು ರೈತರಿಗೆ ಕಹಿ ಸುದ್ದಿ ನೀಡಿದ್ದಾರೆ.

Leave A Reply

Your email address will not be published.