Bengaluru: ಸರ್ಕಾರದಿಂದ ದೇವಾಲಯಗಳ ಮೇಲೆ ಶೇ 10ರಷ್ಟು ತೆರಿಗೆ ಮಸೂದೆ ಮಂಡನೆ: ಹಿಂದೂ ವಿರೋಧಿ ಎಂದು ವಾಗ್ದಾಳಿ ನಡೆಸಿದ ಬಿಜೆಪಿ
ಬೆಂಗಳೂರು: ಕರ್ನಾಟಕ ವಿಧಾನಸಭೆಯಲ್ಲಿ ಬುಧವಾರ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಮಸೂದೆ 2024ನ್ನು ಅಂಗೀಕರಿಸಿದ ನಂತರ ಬಿಜೆಪಿ ನಾಯಕರು ಇದು ‘ಹಿಂದೂ ವಿರೋಧಿ’ ನೀತಿ ಎಂದು ಕರೆದಿದ್ದಾರೆ.
ಇದನ್ನೂ ಓದಿ: Land Registration: ರಾಜ್ಯದ ಜನತೆಗೆ ಬೊಂಬಾಟ್ ನ್ಯೂಸ್- ಇನ್ಮುಂದೆ ಮನೆಯಲ್ಲಿ ಕುಳಿತೇ ಆಸ್ತಿ ರಿಜಿಸ್ಟ್ರೇಷನ್ ಮಾಡಿ
https://x.com/BYVijayendra/status/1760332970232303660?t=dOZGfu93-VHhwBM_W8DNkg&s=08
ಈ ಮಸೂದೆಯು ₹1 ಕೋಟಿಗಿಂತ ಹೆಚ್ಚಿನ ಆದಾಯವನ್ನು ಹೊಂದಿರುವ ದೇವಾಲಯಗಳಿಂದ ಶೇಕಡಾ 10ರಷ್ಟು ಮತ್ತು ₹10 ಲಕ್ಷದಿಂದ ₹1 ಕೋಟಿಗಳ ನಡುವಿನ ಆದಾಯವನ್ನು ಹೊಂದಿರುವ ದೇವಾಲಯಗಳಿಂದ ಶೇಕಡಾ 5ರಷ್ಟು ತೆರಿಗೆಯನ್ನು ಸಂಗ್ರಹಿಸಲು ಸರ್ಕಾರಕ್ಕೆ ಅಧಿಕಾರ ನೀಡುತ್ತದೆ.
ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುವ ಮೂಲಕ ಕಾಂಗ್ರೆಸ್ ಸರ್ಕಾರವು ತನ್ನ ಖಾಲಿಯಾದ ಬೊಕ್ಕಸವನ್ನು ತುಂಬಲು ಬಯಸಿದೆ ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.
ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುವ ಮೂಲಕ ಕಾಂಗ್ರೆಸ್ ಸರ್ಕಾರವು ತನ್ನ ಖಾಲಿಯಾದ ಬೊಕ್ಕಸವನ್ನು ತುಂಬಲು ಬಯಸಿದೆ ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ. ರಾಜ್ಯದಲ್ಲಿ ನಿರಂತರವಾಗಿ ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ಕಾಂಗ್ರೆಸ್ ಸರ್ಕಾರವು ಈಗ ಹಿಂದೂ ದೇವಾಲಯಗಳ ಆದಾಯವನ್ನು ತನ್ನ ಖಾಲಿ ಬೊಕ್ಕಸವನ್ನು ತುಂಬಲು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಮಸೂದೆಯನ್ನು ಅಂಗೀಕರಿಸಿದೆ. ಸಂಗ್ರಹಿಸಿದ ಹಣವನ್ನು ಬೇರೆ ಬೇರೆ ಉದ್ದೇಶಕ್ಕಾಗಿ ಬಳಸಲಾಗುವುದು ಎಂದು ಅವರು ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.
ಇದರ ಅಡಿಯಲ್ಲಿ, ಸರ್ಕಾರವು ₹1 ಕೋಟಿಗಿಂತ ಹೆಚ್ಚು ಗಳಿಸುವ ದೇವಾಲಯಗಳಿಂದ ಶೇಕಡಾ 10ರಷ್ಟು ಆದಾಯವನ್ನು ಸಂಗ್ರಹಿಸುತ್ತದೆ. ದೇವಾಲಯದ ಜ್ಞಾನ ಮತ್ತು ಅಭಿವೃದ್ಧಿಗಾಗಿ ಭಕ್ತರು ಅರ್ಪಿಸುವ ಕಾಣಿಕೆಯನ್ನು ದೇವಾಲಯದ ನವೀಕರಣಕ್ಕಾಗಿ ಮತ್ತು ಭಕ್ತರ ಅನುಕೂಲಕ್ಕಾಗಿ ಮೀಸಲಿಡಬೇಕು. ಅದನ್ನು ಬೇರೆ ಉದ್ದೇಶಕ್ಕಾಗಿ ಮೀಸಲಿಟ್ಟರೆ, ಅದು ಜನರ ದೈವಿಕ ನಂಬಿಕೆಗಳ ಮೇಲೆ ದ್ರೋಹ ಬಗೆದಂತೆ ಎಂದು ಸರ್ಕಾರದ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.