License Validity Extension: ಡ್ರೈವಿಂಗ್ ಮತ್ತು ಲರ್ನರ್ ಲೈಸೆನ್ಸ್‌ ವ್ಯಾಲಿಡಿಟಿ ದಿನಾಂಕ ವಿಸ್ತರಣೆ

Share the Article

License Validity Extended: ಸರ್ಕಾರದಿಂದ ವಾಹನ ಚಲಾಯಿಸಲು ಪರವಾನಿಗೆಯನ್ನು ನೀಡಲಾಗುತ್ತದೆ. ಸರ್ಕಾರದ ಆದೇಶದ ಪ್ರಕಾರ ಫೆ. 29 ರ ವರೆಗೆ ಚಾಲನಾ ಪರವಾನಿಗೆ, ಕಂಡಕ್ಟರ್ ಪರವಾನಿಗೆ ಹಾಗೂ ಕಲಿಕಾ ಪರವಾನಿಗೆಗಳ ವ್ಯಾಲಿಡಿಟಿಯನ್ನು ವಿಸ್ತರಿಸಲಾಗಿದೆ. ಈ ಕುರಿತಂತೆ ಮಂಗಳವಾರ ರಸ್ತೆ ಸಾರಿಗೆ ಹಾಗೂ ಸಚಿವಾಲಯಗಳು ಆದೇಶ ನೀಡಿವೆ.

ಜ.31 ಹಾಗೂ ಫೆ. 15 ಕ್ಕೆ ಮುಕ್ತಾಯ ಗೊಳ್ಳುವ ಪರವಾನಿಗೆಗಳನ್ನು ಇಲಾಖೆಯ ಆದೇಶದ ಅನ್ವಯ ಫೆ 29 ರ ವರೆಗೆ ಚಾಲ್ತಿಯಲ್ಲಿರುತ್ತವೆ. ಪರವಾನಿಗೆ ಅವಧಿ ಮುಗಿದಿರುವುದರಿಂದ , ಕೆಲ ತಾಂತ್ರಿಕ ಸಮಸ್ಯೆಗಳ ಕಾರಣದಿಂದಾಗಿ ಪರವಾನಿಗೆ ನವೀಕರಿಸಲು ಸಾದ್ಯವಾಗುತ್ತಿಲ್ಲ. ಇದಲ್ಲದೆ ಕಲಿಕಾ ಪರವಾನಿಗೆಯನ್ನು ಡ್ರೈವಿಂಗ್ ಪರಾವಾನಿಗೆಯಾಗಿ ಬದಲಿಸಲು ಆಗುತ್ತಿಲ್ಲ. ಈ ಕಾರಣದಿಂದಲೇ ರಸ್ತೆ ಸಾರಿಗೆ ಹೆದ್ದಾರಿ ಇಲಾಖೆಯು ಪರವಾನಿಗೆಯನ್ನು ವಿಸ್ತರಿಸಿ ತನ್ನ ಸಾರಥಿ ಸೈಟ್ ಈ ಬಗ್ಗೆ ತಿಳಿಸಿದೆ.

ಸಾರಥಿ ಸೈಟ್ ಅಲ್ಲಿ ಜ 31 ರಿಂದ ಫೆ12ರ ನಡುವೆ ತಾಂತ್ರಿಕ ಸಮಸ್ಯೆ ಕಂಡು ಬಂದಿದೆ ಎಂದು ಸುತ್ತೋಲೆಯಲ್ಲಿ ತಿಳಿಸಿದೆ. ಇದರಿಂದಲೇ ಪರವಾನಿಗೆ ಸೇವೆ ಪಡೆಯಲು ಸಾಧ್ಯವಾಗಿಲ್ಲ ಎಂದು ತಿಳಿಸಿದೆ. ಜನರಿಗೆ ಯಾವುದೇ ದಂಡವಿಲ್ಲ. ಅವಧಿಯನ್ನು ವಿಸ್ತರಣೆ ಮಾಡಿರುವ ಕಾರಣ ಯಾರ ಮೇಲೂ ದಂಡವನ್ನು ವಿಧಿಸುವುದಿಲ್ಲ ಎಂದು ಸಚಿವಾಲಯ ತಿಳಿಸಿದೆ. ಅವಧಿಯವರೆಗೆ ದಂಡ ಇರುವುದಿಲ್ಲ.

Leave A Reply

Your email address will not be published.