Government jobs: ಭಾರತದ ಮೋಸ್ಟ್ ವಾಂಟೆಡ್ ಹುದ್ದೆ ಇದು!! ಆದ್ರೆ ಈ ಹುದ್ದೆ ಪಡೆಯೋದು ಅಷ್ಟು ಸುಲಭವಲ್ಲ
ನಮ್ಮ ದೇಶದಲ್ಲಿ ವಿವಿಧ ರೀತಿಯ ಉದ್ಯೋಗಳು ಲಭ್ಯವಿವೆ. ಆಯಾ ಕೆಲಸಗಳಿಗೆ ಅದರದ್ದೇ ಆದ ಜವಾಬ್ದಾರಿ ಹಾಗೂ ಸ್ಯಾಲರಿಯನ್ನು ನೀಡಲಾಗುತ್ತದೆ. ಆದರೆ ಭಾರತ ಅತಿ ಪವರ್‌ಫುಲ್ ಕೆಲ್ಸ ಯಾವುದು ಎಂಬುದು ನಿಮಗೆ ಗೊತ್ತಿದೆಯಾ ಈ ಬಗ್ಗೆ ತಿಳಿಯೋಣ.
ಇದನ್ನೂ ಓದಿ: Deadly Accident: ಲಾರಿ-ಆಟೋ ಭೀಕರ ಅಪಘಾತ; ಆಟೋದಿಂದ ಹಾರಿ ಚೆಲ್ಲಾಪಿಲ್ಲಿಯಾಗಿ ಬಿದ್ದ 9 ಮೃತ ದೇಹಗಳು, ಆರು ಮಂದಿ ಗಂಭೀರ
ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಸಹಜವಾಗಿ ನಾಗರಿಕ ಸೇವೆಗಳ ಪರೀಕ್ಷೆಗಳನ್ನು ನಡೆಸುವ ಹೊಣೆಯನ್ನು ಹೊಂದಿರುತ್ತದೆ. ಈ ಪರೀಕ್ಷೆ ದೇಶದ ಪ್ರತಿಷ್ಠಿತ ಹಾಗೂ ಸವಾಲಿನ ಪರೀಕ್ಷೆಯಾಗಿದೆ. ಅನೇಕ ಮಂದಿ ಪರೀಕ್ಷೆಯಲ್ಲಿ ಪಾಸ್ ನಾಗರಿಕ ಸೇವೆಗೆ ಸೇರಲು ಕಷ್ಟಪಡುತ್ತಾರೆ. ಪರೀಕ್ಷೆಯಲ್ಲಿ ಪಾಸ್ ಆದ ತರುವಾಯ, ಭಾರತೀಯ ಆಡಳಿತ ಸೇವೆ , ಭಾರತೀಯ ಪೊಲೀಸ್ ಸೇವೆ , ಭಾರತೀಯ ಎಂಜಿನಿಯರಿಂಗ್ ಸೇವೆ , ಅಥವಾ ಭಾರತೀಯ ವಿದೇಶಾಂಗ ಸೇವೆ ತರಹದ ಉನ್ನತ ಸೇವೆಗಳಲ್ಲಿ ಕೆಲಸವನ್ನು ನಿರ್ವಹಿಸುತ್ತಾರೆ. ಈ ಎಲ್ಲ ಹುದ್ದೆಗಳಲ್ಲಿ ಐಎಎಸ್ ಶ್ರೇಷ್ಠ ಹುದ್ದೆ ಎಂದು ಹೇಳಲಾಗುತ್ತದೆ.
ಅಭ್ಯರ್ಥಿಗಳು UPSC ಪರೀಕ್ಷೆಗಳಲ್ಲಿ ಪಡೆದುಕೊಂಡ ಗ್ರೇಡ್ ಅನ್ನು ಆಧಾರಿಸಿ IAS ಹುದ್ದೆಯನ್ನು ನೀಡುತ್ತಾರೆ. ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳನ್ನು IAS ಹುದ್ದೆಗೆ ನೇಮಕಾತಿ ನೀಡುತ್ತಾರೆ. ಕೆಲವೊಮ್ಮೆ ಇವರು IPS ಅಥವಾ IFS ಹುದ್ದೆಗಳಿಗೂ ಆಯ್ಕೆಯಾಗುತ್ತಾರೆ. ಈ ವೇಳೆ ಕಡಿಮೆ ಶ್ರೇಣಿಯನ್ನು ಹೊಂದಿರುವ ಅಭ್ಯರ್ಥಿಗಳಿಗೆ ಐಎಎಸ್ ಹುದ್ದೆಗಳನ್ನು ನಂತರದ ಶ್ರೇಣಿಯ ಅಭ್ಯರ್ಥಿಗಳು IPS ಮತ್ತು IFS ಹುದ್ದೆಗಳನ್ನು ನೀಡಲಾಗುತ್ತದೆ.
ಐಎಎಸ್ ಅಧಿಕಾರಿಗಳಿಗೆ ತರಬೇತಿ
ಐಎಎಸ್ ಗೆ ಆಯ್ಕೆಯಾದವರು ಮಸ್ಸೂರಿಯ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ ನಲ್ಲಿ 3 ತಿಂಗಳ ತರಬೇತಿ ಪಡೆಯಬೇಕು. ಇಲ್ಲಿ ಪೊಲೀಸ್ ಬಗೆಗಿನ ವಿವಿಧ ಜ್ಞಾನವನ್ನು ಪಡೆಯುತ್ತಾರೆ.
ತರಬೇತಿಯ ನಂತರದ ಕೆಲಸಗಳು
ತರಬೇತಿ ಪಡೆದ ನಂತರ ಅಧಿಕಾರಿಗಳನ್ನು ಆಯಾ ಕೇಡರ್‌ಗಳಿಗೆ ನೇಮಕ ಮಾಡಲಾಗುತ್ತದೆ. ಅವರಿಗೆ ಒಂದು ಇಲಾಖೆಯ ಆಡಳಿತದ ಜೊತೆಗೆ ಪ್ರದೇಶಗಳ ಆಡಳಿತ ನೀಡುತ್ತಾರೆ. ತಮ್ಮ ಪ್ರದೇಶದ ಅಭಿವೃದ್ದಿಗೆ ಹೊಸ ಯೋಜನೆಗಳನ್ನು ರೂಪಿಸಿ ಸರ್ಕಾರದ ನಿಯಮಗಳನ್ನು ಪಾಲಿಸಬೇಕಾಗುತ್ತದೆ.
ಸಿಬ್ಬಂದಿಗಳ ಹಂಚಿಕೆ
UPSC ಪರೀಕ್ಷೆಯಲ್ಲಿ ಪಾಸ್ ಆದ ಬಳಿಕವೇ
ಕೇಡರ್‌ಗಳ ಹಂಚಿಕೆ ಮಾಡಲಾಗುತ್ತದೆ ಒಟ್ಟು 24 ಸೇವೆಗಳನ್ನು ಅಖಿಲ ಭಾರತ ಸೇವೆಗಳು ಮತ್ತು ಕೇಂದ್ರ ಸೇವೆಗಳಿಗಾಗಿ ಭಾಗ ಮಾಡಲಾಗಿದೆ. ಅಖಿಲ ಭಾರತ ಸೇವೆಗೆ ಆಯ್ಕೆಯಾದವರನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಧಿಕಾರವನ್ನು ಇವರಿಗೆ ವಹಿಸಲಾಗುತ್ತದೆ. ಕೇಂದ್ರ ಸೇವೆಗಳು A ಹಾಗೂ B ಸೇವೆಗಳನ್ನು ಒಳಗೊಂಡಿವೆ.
ಐಎಎಸ್ ಅಧಿಕಾರಿಗಳ ಅಧಿಕಾರ ಮತ್ತು ಜವಾಬ್ದಾರಿಗಳು
ಒಂದು ಜಿಲ್ಲೆಯ ಸಂಪೂರ್ಣ ಅಧಿಕಾರವನ್ನು ಜಿಲ್ಲಾಧಿಕಾರಿ ಹೊಂದಿರುತ್ತಾರೆ. ಜಿಲ್ಲೆಯ ಎಲ್ಲಾ ಇಲಾಖೆಗಳ ಮುಖ್ಯಸ್ಥ. ತುರ್ತು ಸಂದರ್ಭದಲ್ಲಿ ಆದೇಶ ಮತ್ತು ನಿಷೇಧಾಜ್ಞೆಯನ್ನು ಹೊರಡಿಸುವ ಅಧಿಕಾರ ವಿರುತ್ತದೆ. ಸಾರ್ವಜನಿಕ ಕುಂದು ಕೊರತೆಗಳ ಬಗೆ ಹರಿಸುವುದು ಇವರ ಕರ್ತವ್ಯ. ಪಿಂಚಣಿ ವ್ಯವಸ್ಥೆಯಲ್ಲಿ ಇವರ ಸಹಭಾಗಿತ್ವ ಇರುತ್ತದೆ.