Credit card: ನಿಮಗೂ ಕ್ರೆಡಿಟ್ ಕಾರ್ಡ್ ಬೇಕಾ ? ಹಾಗಿದ್ರೆ ಕುಳಿತಲ್ಲೇ ಹೀಗೆ ಬುಕ್ ಮಾಡಿ !!
Credit card: ಬ್ಯಾಂಕಿಂಗ್ ವ್ಯವಹಾರದಲ್ಲಿ ತೊಡಗಿಸಿಕೊಂಡವರಿಗೆ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಬಗ್ಗೆ ತಿಳಿದಿರುತ್ತದೆ. ಆನ್‌ಲೈನ್ ಮತ್ತು ಆಫ್‌ಲೈನ್ ವಹಿವಾಟುಗಳಲ್ಲಿ ಬಹುತೇಕರು ಡೆಬಿಟ್ ಕಾರ್ಡ್‌ಗಳಿಗಿಂತ ಕ್ರೆಡಿಟ್ ಕಾರ್ಡ್ ಬಳಕೆಗೆ ಹೆಚ್ಚು ಒತ್ತು ನೀಡುತ್ತಾರೆ. ಯುಪಿಐ ಸ್ಕ್ಯಾನರ್‌ಗಳನ್ನ ಹೊರತುಪಡಿಸಿ, ಕ್ರೆಡಿಟ್ ಕಾರ್ಡ್ ಸಾಕಷ್ಟು ಹಣಕಾಸು ವಹಿವಾಟುಗಳಿಗೆ ಬಳಕೆಯಾಗುತ್ತದೆ. ಹಾಗಿದ್ರೆ ಈ ಕ್ರೆಡಿಟ್ ಕಾರ್ಡ್(Credit card)ಪಡೆಯೋದು ಹೇಗೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಕ್ರೆಡಿಟ್ ಕಾರ್ಡ್ ಗಾಗಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
• ಮೊದಲು ನೀವು ಯಾವ ಬ್ಯಾಂಕ್ ನ ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಲು ಬಯಸುತ್ತೀರೋ ಆ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ಗೆ ಹೋಗಿ.
• ವೆಬ್ ಸೈಟ್ ತೆರೆದ ನಂತರ ಅಲ್ಲಿ ಸೇವೆಗಳು ವಿಭಾಗದಲ್ಲಿ ಸಾಕಷ್ಟು ಆಯ್ಕೆಗಳು ಇರುತ್ತವೆ ಕ್ರೆಡಿಟ್ ಕಾರ್ಡ್ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ.
• ನಿಮಗೆ ಕ್ರೆಡಿಟ್ ಕಾರ್ಡ್ ಕೊಡಲು ಬೇಕಾಗಿರುವ ಅರ್ಹತೆಗಳನ್ನು ಕೇಳುತ್ತದೆ. ಉದಾಹರಣೆಗೆ ನಿಮ್ಮ ಆದಾಯ ಎಷ್ಟು? ನಿಮ್ಮ ಕ್ರೆಡಿಟ್ ಸ್ಕೋರ್ ಎಷ್ಟಿದೆ ಈ ಎಲ್ಲಾ ಮಾಹಿತಿಗಳನ್ನು ನೀವು ಸರಿಯಾಗಿ ನೀಡಬೇಕು.
• ನಂತರ ನೀವು ಅರ್ಹರಾಗಿದ್ದರೆ ಕ್ರೆಡಿಟ್ ಕಾರ್ಡ್ ಅರ್ಜಿ ಫಾರ್ಮ್ ಫಿಲ್ ಮಾಡಬೇಕು.
• ನಂತರ ದಾಖಲೆಗಳನ್ನು ಸಬ್ಮಿಟ್ ಮಾಡಿ ಕ್ರೆಡಿಟ್ ಕಾರ್ಡ್ ಅರ್ಜಿ ಸಲ್ಲಿಸಬಹುದು. ಇಷ್ಟು ಮಾಡಿದ್ರೆ ಕ್ರೆಡಿಟ್ ಕಾರ್ಡ್ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ. ಇನ್ನು ನೀವು ಬ್ಯಾಂಕಿಗೆ ನೇರವಾಗಿ ಹೋಗಿ ಕ್ರೆಡಿಟ್ ಕಾರ್ಡ್ ಗೆ ಅಪ್ಲೈ ಮಾಡಬಹುದು.
ಏನೆಲ್ಲಾ ದಾಖಲೆಗಳು ಬೇಕು?
ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಲು ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಯುಟಿಲಿಟಿ ಬಿಲ್, ವಿಳಾಸ ಪುರಾವೆ ಹೀಗೆ ಮತ್ತಿತರ ದಾಖಲೆಗಳು ಬೇಕು. ಈ ದಾಖಲೆಗಳನ್ನು ಸಿದ್ಧಪಡಿಸಿ ಇಟ್ಟುಕೊಂಡು ನಂತರ ಅರ್ಜಿ ಹಾಕಿದರೆ ಬೇಗ ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಬಹುದು.
ಕ್ರೆಡಿಟ್ ಕಾರ್ಡ್ ನ ಮಿತಿಗಳೇನು..?
ಕ್ರೆಡಿಟ್ ಕಾರ್ಡ್ ನ್ನು ನಗದು ಹಣದ ಬದಲಾಗಿ ಬಳಕೆ ಮಾಡಲಾಗುತ್ತದೆ. ಹೀಗಾಗಿ ಪ್ರತಿಯೊಂದು ಬ್ಯಾಂಕು ಕಾರ್ಡ್ ಬಳಕೆದಾರನ ಆರ್ಥಿಕ ಹಿನ್ನಲೆ, ಮಾಸಿಕ ಸಂಬಳ, ಎಂಬಿತ್ಯಾದಿ ಅಂಶಗಳನ್ನು ಪರಿಗಣಿಸಿ ಆಯಾ ಬ್ಯಾಂಕುಗಳು ನಿರ್ಧಿಷ್ಟ ಖರೀದಿ ಮಿತಿ ಹೇರಿರುತ್ತವೆ.
• ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್ ಮೇಲೆ ಶೇ. 3.35 – 3.49 ರವರೆಗೆ ಬಡ್ಡಿ ವಿಧಿಸಲಾಗುತ್ತದೆ. ಬ್ಯಾಂಕ್ ನಿಂದ ಬ್ಯಾಂಕ್ ಗೆ ಇದು ಬದಲಾಗಬಹುದು. ಆದರೆ ಇತ್ತೀಚೆಗೆ ಡೆಬಿಟ್ ಕಾರ್ಡ್ಗಳಂತೆಯೇ ಪ್ರತಿ ಕ್ರೆಡಿಟ್ ಕಾರ್ಡ್ನಲ್ಲೂ ನಗದು ವಿತ್ಡ್ರಾ ಮಾಡುವ ಅವಕಾಶವನ್ನು ಬ್ಯಾಂಕುಗಳು ಒದಗಿಸಿದೆ.
• ನಿರ್ದಿಷ್ಟ ಕಾರ್ಡ್ಗೆ ನಗದು ವಿತ್ಡ್ರಾ ಮಿತಿಯನ್ನು ವಿಧಿಸಲಾಗಿರುತ್ತದೆ. ಸಾಮಾನ್ಯವಾಗಿ ಈ ಮಿತಿ ಶೇ. 30ರಿಂದ 40ರವರೆಗೆ ಇರುತ್ತದೆ.
• ಕ್ರೆಡಿಟ್ ಕಾರ್ಡ್ ನಲ್ಲಿ ಡ್ರಾ ಮಾಡುವ ಹಣಕ್ಕೆ ಬ್ಯಾಂಕುಗಳು ಹೆಚ್ಚುವರಿ ಬಡ್ಡಿಯನ್ನು ಹೇರುತ್ತವೆ.
• ಕಾರ್ಡ್ಗಳಲ್ಲೇ ಇದು ಅತ್ಯಂತ ರಿಸ್ಕ್ ಇರುವ ಮತ್ತು ಹೆಚ್ಚು ಶುಲ್ಕವಿರುವ ಸೌಲಭ್ಯ. ಇದನ್ನು ನಗದು ಮುಂಗಡ ಎಂಬುದಾಗಿ ಪರಿಗಣಿಸಲಾಗುತ್ತದೆ.
• ಕೆಲವು ಬ್ಯಾಂಕ್ಗಳು ಪ್ರತಿ ವಿತ್ಡ್ರಾಗೆ ನಿಗದಿತ ಶುಲ್ಕವನ್ನು ವಿಧಿಸುತ್ತವಾದರೆ, ಇನ್ನು ಕೆಲವು ಬ್ಯಾಂಕ್ಗಳು ನಗದು ಪಡೆದ ಮೊತ್ತವನ್ನು ಆಧರಿಸಿ ಶುಲ್ಕ ವಿಧಿಸುತ್ತವೆ. ಇದರ ಜತೆಗೇ ಕೆಲವು ಬ್ಯಾಂಕ್ಗಳಲ್ಲಿ ಬಡ್ಡಿಯನ್ನೂ ವಿಧಿಸಲಾಗುತ್ತದೆ.
ಹೀಗಾಗಿ ಕಾರ್ಡ್ ತೆಗೆದುಕೊಳ್ಳುವಾಗಲೇ ಅತಿ ಸಣ್ಣ ಅಕ್ಷರಗಳಲ್ಲಿ ಬರೆದ ಕಂಡೀಷನ್ಸ್ ಅಪ್ಲೈ ಅಡಿಯಲ್ಲಿರುವ ಮಾಹಿತಿಗಳನ್ನು ಓದಿಕೊಳ್ಳದಿದ್ದರೆ ಬಿಲ್ ಬಂದಾಗ ಗಾಬರಿಯಾದೀತು.
ಈ ವಿಚಾರ ನೆನಪಿರಲಿ:
• ಯಾವ ಯಾವ ರೀತಿಯ ಕ್ರೆಡಿಟ್ ಕಾರ್ಡ್ ಲಭ್ಯ ಇದೆ. ಹಾಗೂ ಅದರ ಪ್ರಯೋಜನಗಳು ಏನು ಎಂಬುದನ್ನು ಮೊದಲು ರಿಸರ್ಚ್ ಮಾಡಿ ತಿಳಿದುಕೊಳ್ಳಿ.
• ಕ್ರೆಡಿಟ್ ಕಾರ್ಡ್ ಗೆ ನಿಮ್ಮ ವಯಸ್ಸು ನಿಮ್ಮ ಆದಾಯ ಮಾಡುತ್ತಿರುವ ಕೆಲಸ ಕ್ರೆಡಿಟ್ ಸ್ಕೋರ್ ಇವೆಲ್ಲವೂ ಮುಖ್ಯವಾಗಿರುತ್ತದೆ. ಇವುಗಳನ್ನು ಹೊರತುಪಡಿಸಿ ಇನ್ನಷ್ಟು ಮಾನದಂಡಗಳು ಕೂಡ ಇರುತ್ತವೆ. ಅವುಗಳನ್ನು ಮೊದಲು ತಿಳಿದುಕೊಳ್ಳಿ.