SBM Offer: ಎಸ್‌ಬಿಎಂನಲ್ಲಿ 2000ರೂ. ಎಫ್‌ಡಿ ಇಡಿ, ಆಮೇಲೆ ಈ ಸೌಲಭ್ಯ ಪಡೆಯಿರಿ

Share the Article

SBM Step-up Credit Card : ನಿಮ್ಮ ಕ್ರೆಡಿಟ್ ರೇಟಿಂಗ್ ಕಡಿಮೆ ಇದೆಯಾ ! ಕ್ರೆಡಿಟ್ ಕಾರ್ಡ್ ರೇಟಿಂಗ್ ಸಿಗದವರಿಗೆ ಎಸ್ಬಿಎಂ ಬ್ಯಾಂಕ್ನಲ್ಲಿ ಒಳ್ಳೆ ಅವಕಾಶ ನೀಡಲಾಗಿದೆ. ಮುಂಬೈನಲ್ಲಿ ಕೇಂದ್ರ ಕಚೇರಿ ಹೊಂದಿರುವ ಎಸ್ಬಿಎಂ ಬ್ಯಾಂಕ್ನಲ್ಲಿ ನೀವು ಕೇವಲ 2,000 ರೂನ ಎಫ್ಡಿ ಇಟ್ಟರೂ ಸಾಕು ಸ್ಟೆಪಪ್ ಕ್ರೆಡಿಟ್ ಕಾರ್ಡ್ ಪಡೆದು ಕೊಳ್ಳಬಹುದು. ಸ್ಟೇಟ್ ಬ್ಯಾಂಕ್ ಆಫ್ ಮಾರಿಷಸ್ನ ಭಾರತೀಯ ವಿಭಾಗವಾದ ಎಸ್ಬಿಎಂ ಇಂಡಿಯಾ ಮುಂಬೈನಲ್ಲಿ ತನ್ನ ಕಚೇರಿ ಹೊಂದಿದೆ.

ಎಸ್ಬಿಎಂ ಬ್ಯಾಂಕ್ನಲ್ಲಿ ಕೇವಲ 2,000 ರೂಪಾಯಿ ಯನ್ನು ನಿಶ್ಚಿತ ಠೇವಣಿಯಾಗಿ ಇಟ್ಟರೆ ಒಂದು ಸ್ಟೆಪ್ ಅಪ್ ಕ್ರೆಡಿಟ್ ಕಾರ್ಡ್ ಅನ್ನು ಪಡೆಯಬಹುದು. ಕಳಪೆ ಕ್ರೆಡಿಟ್ ಸ್ಕೋರ್ ಕಾರಣಕ್ಕೆ ಕ್ರೆಡಿಟ್ ಕಾರ್ಡ್ನಿಂದ ವಂಚಿತರಾಗಿರುವ ಮಂದಿಗೆ ಇದು ಸಹಾಯವಾಗಲಿದೆ.

ಸ್ಟೆಪ್ ಅಪ್ ಕ್ರೆಡಿಟ್ ಕಾರ್ಡ್ನಿಂದ ಏನು ಪ್ರಯೋಜನ

ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಿರುವವರು ಸುಲಭವಾಗಿ ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಬಹುದಾಗಿದೆ. ನಿಮ್ಮ ರೇಟಿಂಗ್ ಅನ್ನು ಉತ್ತಮ ಪಡೆದುಕೊಳ್ಳಲು ಸಹಾಯವಾಗಲಿದೆ.

ಎಸ್ಬಿಎಂನಲ್ಲಿ ನೀವು ಇಡುವ ಠೇವಣಿಗೆ ಉತ್ತಮ ಬಡ್ಡಿದರ ಸಿಗುಲಿದೆ. ಶೇ. 8.2ರವರೆಗೂ ವಾರ್ಷಿಕ ಬಡ್ಡಿ ದರ ಇರುತ್ತದೆ. ಎಫ್ಡಿ ಮೂಲಕ ಇರಿಸುವ ನಿಮ್ಮ ದುಡ್ಡಿಗೆ ಬಡ್ಡಿ ಲಾಭದ ಜೊತೆಗೆ ಕ್ರೆಡಿಟ್ ಕಾರ್ಡ್ ಸೌಲಭ್ಯ ವನ್ನೂ ದೊರಕಿ ಕೊಡುತ್ತದೆ.

ಎಸ್ಬಿಎಂ ಅನ್ನು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಎಂದು ತಪ್ಪಾಗಿ ತಿಳಿಯ ಬೇಡಿ. ಅದು ಎಸ್ಬಿಐ ಜೊತೆ ವಿಲೀನವಾಗಿದೆ. ಇದು ಮಾರಿಷಸ್ ಮೂಲದ ಸ್ಟೇಟ್ ಬ್ಯಾಂಕ್ ಆಫ್ ಮಾರಿಷಸ್ನ ಭಾರತೀಯ ಅಂಗ ಸಂಸ್ಥೆಯಾಗಿದೆ. ಮಾರಿಷಸ್ ದೇಶದ ಷೇರು ಮಾರುಕಟ್ಟೆಯಲ್ಲಿ 3 ನೇ ಅತಿದೊಡ್ಡ ಸಂಸ್ಥೆಯಾಗಿದೆ.

ಎಸ್ಬಿಐ ಇಂಡಿಯಾದ ಕೇಂದ್ರ ಕಚೇರಿ ಮುಂಬೈನಲ್ಲಿದೆ. ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಇದರ ಶಾಖೆಗಳಿವೆ. ಇದರ ವೆಬ್ಸೈಟ್ ಲಿಂಕ್ ಇಲ್ಲಿದೆ: www.sbmbank.co.in/

Leave A Reply

Your email address will not be published.